ಸ್ಮಶಾನಗಳ ಸ್ವಚ್ಛತೆಗೆ ಪಾಲಿಕೆ ಅಭಿಯಾನ

7
ವಿಲ್ಸನ್‌ ಗಾರ್ಡನ್‌ ಸ್ಮಶಾನದಲ್ಲಿ ಚಾಲನೆ ನೀಡಿದ ಮೇಯರ್‌

ಸ್ಮಶಾನಗಳ ಸ್ವಚ್ಛತೆಗೆ ಪಾಲಿಕೆ ಅಭಿಯಾನ

Published:
Updated:
Deccan Herald

ಬೆಂಗಳೂರು: ನಗರದ ಸ್ಮಶಾನಗಳು ಹಾಗೂ ರುದ್ರಭೂಮಿಗಳ ಸ್ವಚ್ಛತೆ ಕಾಪಾಡುವ ಸಲುವಾಗಿ ಬಿಬಿಎಂಪಿ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.

ವಿಲ್ಸನ್‌ ಗಾರ್ಡನ್‌ ಸ್ಮಶಾನದಲ್ಲಿ ಮೇಯರ್‌ ಗಂಗಾಂಬಿಕೆ ಅವರು ಈ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದರು. ಸ್ಮಶಾನದಲ್ಲಿ ಕಸ ರಾಶಿ ಬಿದ್ದಿರುವ ಹಾಗೂ ಗಿಡಗಂಟಿಗಳು ಬೆಳೆದಿರುವ ಬಗ್ಗೆ ಮೇಯರ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಕಳೆದ ವಾರ ಪಿತೃಪಕ್ಷ ಇದ್ದುದರಿಂದ ಕಸದ ಪ್ರಮಾಣ ಜಾಸ್ತಿ ಇದೆ’ ಎಂದು ಸ್ವಚ್ಛತಾ ಸಿಬ್ಬಂದಿ ವಿವರಿಸಿದರು. ಹೆಚ್ಚುವರಿ ಸಿಬ್ಬಂದಿಯನ್ನು ಬಳಸಿಕೊಂಡು ಎಲ್ಲ ಕಸವನ್ನು ತೆಗೆಸುವಂತೆ ಮೇಯರ್‌ ಸೂಚನೆ ನೀಡಿದರು.

‘ನಗರದ ಎಲ್ಲ ಸ್ಮಶಾನಗಳಲ್ಲೂ ‌ಮುಂದಿನ ಶನಿವಾರವೂ ಸ್ವಚ್ಛತಾ ಕಾರ್ಯ ನಡೆಸುವಂತೆ ಎಲ್ಲಾ ವಲಯಗಳ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸ್ಮಶಾನಗಳ ಅಭಿವೃದ್ದಿಗೆ ಬಜೆಟ್‌ನಲ್ಲಿ ಅಗತ್ಯ ಅನುದಾನವನ್ನು ಒದಗಿಸುತ್ತೇವೆ. ಈ ಕುರಿತು ಯೋಜನಾ ವರದಿ ತಯಾರಿಸುವಂತೆ ಆದೇಶ ಮಾಡಿದ್ದೇನೆ’ ಎಂದು ಮೇಯರ್‌ ತಿಳಿಸಿದರು.

ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್‌ ಗರುಡಾಚಾರ್‌, ‘ಉತ್ತರ ಪ್ರದೇಶದಲ್ಲಿ ಸ್ಮಶಾನಗಳ ಸ್ವಚ್ಛತೆ ಕಾಪಾಡಲು ವಿಶೇಷ ಕಾಳಜಿ ವಹಿಸುತ್ತಾರೆ. ನಗರದ ಚಿರಶಾಂತಿ ಧಾಮಗಳ ನಿರ್ವಹಣೆಗೆ ಇನ್ನಷ್ಟು ಉತ್ತಮ ವ್ಯವಸ್ಥೆ ರೂಪಿಸಬೇಕು’ ಎಂದು ಒತ್ತಾಯಿಸಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !