‘ಗಜಗೌರವ’ ನೃತ್ಯ ರೂಪಕ

7

‘ಗಜಗೌರವ’ ನೃತ್ಯ ರೂಪಕ

Published:
Updated:
Deccan Herald

ಆನೆಯೊಂದು ಅರಣ್ಯದ ಪರಿಸರದಿಂದ ಮಾನವನ ಸಂಪರ್ಕಕ್ಕೆ ಬಂದು ನಾಡಹಬ್ಬದಲ್ಲಿ ಅಂಬಾರಿಯನ್ನು ಹೊತ್ತು ಮುಕ್ತಿಯ ಮಾರ್ಗ ಕಂಡುಕೊಂಡಿರುವ ನೃತ್ಯ ನಾಟಕವೇ ‘ಗಜಗೌರವ - ಬಲರಾಮನ ಕಥೆ’.

ವೈಯ್ಯಾಲಿಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಂಗಳವಾರ ಈ ನೃತ್ಯ ರೂಪಕ ಪ್ರದರ್ಶನ ಕಾಣಲಿದೆ. ಕೂಚಿಪುಡಿ ಮತ್ತು ಭರತನಾಟ್ಯ ಕಲಾವಿದೆ ಡಾ.ವೀಣಾಮೂರ್ತಿ ವಿಜಯ್‌ ಅವರ ನೃತ್ಯ ಸಂಯೋಜನೆ
ಯಲ್ಲಿ ಈ ವಿಶಿಷ್ಟವಾದ ಪರಿಕಲ್ಪನೆ ಪ್ರದರ್ಶನವಾಗಲಿದೆ.

ಅನಿವಾಸಿ ಭಾರತೀಯ ಎಂಜಿನಿಯರ್ ಡಿ.ಕೆ.ಭಾಸ್ಕರ್ (ಅಮೆರಿಕ) ಅವರು ಬರೆದಿರುವ ಮಕ್ಕಳ ಪುಸ್ತಕ ಆಧರಿಸಿದ ಕಥೆ ಇದು. ಅವರು ಆನೆಗಳ ಜೀವನ ಕುರಿತು, ವಿಶೇಷವಾಗಿ ನಮ್ಮ ಸಂಸ್ಕೃತಿ, ಮೈಸೂರು ರಾಜ ಮನೆತನ ಮತ್ತು ಆನೆಗಳ ನಡುವಿನ ಸಂಬಂಧ ಕುರಿತು ಸಂಶೋಧನೆ ನಡೆಸಿದ್ದಾರೆ.

ಈ ರೂಪಕವು ಇಂದಿನ ಸಮಾಜದಲ್ಲಿ ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಅಲ್ಲದೇ  ಕಲಾರಸಿಕರಿಗೆ, ನಾಗರಿಕರಿಗೆ, ಯುವಕರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಪ್ರಕೃತಿಯಲ್ಲಿನ ಪ್ರಾಣಿಗಳೊಂದಿಗಿನ ಜೀವನ ಕ್ರಮದ ಅರಿವು ಮೂಡಿಸುವುದರ ಜೊತೆಗೆ ಮುದವನ್ನು ನೀಡುತ್ತದೆ.

ಈ ನೃತ್ಯ ರೂಪಕವು ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮೂಡಿಬರಲಿದೆ. ಇದಕ್ಕೆ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮ ಅವರು ಸಂಗೀತ ಸಂಯೋಜಿಸಿದ್ದಾರೆ. ಸಮನ್ವಯ ನೃತ್ಯ ತಂಡದವರು ಪ್ರಸ್ತುತ ಪಡಿಸಲಿದ್ದಾರೆ. 

ಮನೋಜ್ಞ ಬಾಲರಾಜು (ಬಲರಾಮ ಗಜ), ಸುಜಯ್‌ ಶಾನುಭಾಗ್‌– ಸಣ್ಣಪ್ಪ (ಮಾಹುತ), ವೀಣಾಮೂರ್ತಿ ವಿಜಯ್‌ (ಆಂಟಿ ಆನೆ), ವಿಶಾಲ್ (ದ್ರೋಣ ಗಜ), ವೈಷ್ಣವಿ ರವಿಕುಮಾರ್ (ಚಾಮುಂಡೇಶ್ವರಿ) ಸೇರಿದಂತೆ 20ಕ್ಕೂ ಹೆಚ್ಚಿನ ಕಲಾವಿದರು ನೃತ್ಯ ರೂಪಕ ಪ್ರದರ್ಶಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !