ಕೈಫಿ ಅಜ್ಮಿ ಪೆನ್ ಮಾರುಕಟ್ಟೆಗೆ

ವಿಲಿಯಂ ಪೆನ್ ಸಂಸ್ಥೆಯು ಈಚೆಗೆ ಮುಂಬೈನಲ್ಲಿ ಮೊದಲನೇ ಅಂತರರಾಷ್ಟ್ರೀಯ ಫೌಂಟೇನ್ ಪೆನ್ ಷೋ ಅನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಖ್ಯಾತ ಉರ್ದು ಕವಿ ಕೈಫಿ ಅಜ್ಮಿ ಅವರ ಸ್ಮರಣೆಗಾಗಿ ಅವರ ಹೆಸರಿನಲ್ಲಿ ವಿಶೇಷ ಆವೃತ್ತಿಯ ಪೆನ್ ಅನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಬಾಲಿವುಡ್ನ ಹಿರಿಯ ನಟಿ ಶಬಾನಾ ಆಜ್ಮಿ ಪಾಲ್ಗೊಂಡಿದ್ದರು. ‘ನಮ್ಮ ತಂದೆ ಕೈಫಿ ಅಜ್ಮಿ ಫೌಂಟೇನ್ ಪೆನ್ ಪ್ರಿಯರಾಗಿದ್ದರು. ಅವರ ಬಳಿ ಫೌಂಟೇನ್ ಪೆನ್ಗಳ ಸಂಗ್ರಹವೇ ಇತ್ತು. ಅವುಗಳಿಂದ ಬರೆಯುತ್ತಿದ್ದ ಅಪ್ಪ, ಅವುಗಳನ್ನು ಯಾರೂ ಮುಟ್ಟದಂತೆ ಪೆಟ್ಟಿಗೆಯೊಳಗಿಟ್ಟು ಬೀಗ ಹಾಕಿಬಿಡುತ್ತಿದ್ದರು. ಅವರ ಪೆನ್ ವ್ಯಾಮೋಹ ಅಷ್ಟಿತ್ತು. ವಿಲಿಯಂ ಪೆನ್ ಸಂಗ್ರಹ ನೋಡುತ್ತಿದ್ದರೆ ಅಪ್ಪನೊಂದಿಗೆ ಈ ನೆನಪುಗಳೆಲ್ಲಾ ತಾಜಾಗೊಂಡವು’ ಎಂದು ಸ್ಮರಿಸಿಕೊಂಡರು.
ವಿಶೇಷ ಆವೃತ್ತಿಯ ಕೈಫಿ ಅಜ್ಮಿ ಪೆನ್ ಕೋಕಾ ಬಣ್ಣದ್ದು. ಕೈಫಿ ಅವರ ಲೋಗೊ ಕೂಡ ಒಳಗೊಂಡಿದೆ. ಕೋರಮಂಗಲ ವಿಲಿಯಂ ಪೆನ್ ಮಳಿಗೆಯಲ್ಲಿ ಪೆನ್ಗಳ ಸಂಗ್ರಹವಿದೆ. ಮಾಹಿತಿಗೆ: www.williampenn.net
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.