ಈ ಕೃತಿ ಪ್ರೊ.ಸುಕನ್ಯಾ ಮಾರುತಿ ಅವರ ಆತ್ಮಕಥನ. ಇಲ್ಲಿ ಅವರ ಬದುಕಿನ ಚದುರಿದ ನೆನಪುಗಳ ಚಿತ್ರಣವಿದೆ. ತಮ್ಮ ಆತ್ಮಕಥನದಲ್ಲಿ ಕ್ರಮಬದ್ಧತೆಯ ಸಿದ್ಧಚೌಕಟ್ಟನ್ನು ಮುರಿದಿರುವ ಲೇಖಕಿ, ನೆನಪಿನ ಲಹರಿ ಹರಿದ ದಿಕ್ಕಿಗೆ ತಕ್ಕಂತೆ ತಮ್ಮ ಬದುಕು, ಹೋರಾಟದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ದೇವದಾಸಿಯ ಮಗಳು ಎಂಬ ಹಣೆಪಟ್ಟಿಯನ್ನು ಬದುಕಿನುದ್ದಕ್ಕೂ ಹೊತ್ತುಕೊಂಡೇ ಸಾಗುವ ಲೇಖಕಿ, ಅದನ್ನು ತಮ್ಮ ಉನ್ನತ ಶಿಕ್ಷಣ, ನೌಕರಿ ಪಡೆಯುವ ಮೂಲಕ ಮೀರುವ ಬಗೆ ಕೃತಿಯಲ್ಲಿ ನಿರೂಪಿತವಾಗಿದೆ. ಇವಳೇ ತನ್ನ ಮಗಳು ಎಂದು, ಇವರೇ ತನ್ನ ಹೆತ್ತಪ್ಪ ಎಂದು ಸಮಾಜದ ಎದುರಿಗೆ ಹೇಳಿಕೊಳ್ಳಲಾಗದ ಅಪ್ಪ–ಮಗಳ ಬಾಂಧವ್ಯದ ಚಿತ್ರಣ ಮನ ಕರಗುವಂಥದ್ದು. ಒಂದೆಡೆ ಹೆತ್ತಪ್ಪನ ಮದುವೆಗೆ ಸಾಕ್ಷಿಯಾಗುವ, ಮತ್ತೊಂದೆಡೆ ಮುಗ್ಧತೆಯೇ ಮೈವೆತ್ತ ಹೆತ್ತವ್ವನ ಸಂಕಟಕ್ಕೂ ಮಿಡಿಯುವ ಮಗಳಾಗುವ ಲೇಖಕಿ ಬದುಕಿನುದ್ದಕ್ಕೂ ನಡೆಸುವ ಹೋರಾಟ ಇಲ್ಲಿದೆ.

ತಮ್ಮ ವೈವಾಹಿಕ ಬದುಕು ಹಳಿ ತಪ್ಪಿದಾಗ ಲೇಖಕಿ ಅದನ್ನು ಏಕಾಂಗಿಯಾಗಿ, ದಿಟ್ಟತನದಿಂದ ಎದುರಿಸುವ ರೀತಿ ಬೆರಗುಗೊಳಿಸುವಂಥದ್ದು. ಶಾಲೆಯಲ್ಲಿ ಮೇಷ್ಟ್ರುಗಳ ‘ಬೆರಕಿ ಸಂತಾನ’ ಎಂಬ ಹೀಯಾಳಿಕೆಯನ್ನೂ ಮೀರಿ ಪ್ರಾಧ್ಯಾಪಕಿಯಾದರೂ, ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳ ಕಾಟವನ್ನು ಲೇಖಕಿ ಎದುರಿಸಬೇಕಾಗುತ್ತದೆ. ಆಗಲೂ ಎದೆಗುಂದದೇ ಧೈರ್ಯವಾಗಿ ಎದುರಿಸಿ, ಸತ್ಯದ ಹಾದಿಯಲ್ಲಿ ಸಾಗಿ, ಸಮಾಜದಲ್ಲಿ ತಮ್ಮ ಹೆಗ್ಗುರುತನ್ನು ಮೂಡಿಸುವ ಸುಕನ್ಯಾ ಅವರ ಬದುಕು ಇತರರಿಗೆ ಮಾದರಿಯಾಗುವಂಥದ್ದು.

ಬಂಡಾಯ ಸಾಹಿತ್ಯ ಘಟ್ಟದ ಮುಂಚೂಣಿ ಹೋರಾಟಗಾರ್ತಿ, ಕವಯತ್ರಿಯಾಗಿರುವ ಸುಕನ್ಯಾ ಅವರ ಬದುಕಿನ ಮುಚ್ಚಿಟ್ಟ ಪುಟಗಳು ಈ ಆತ್ಮಕಥನದಲ್ಲಿವೆ. ವೈಯಕ್ತಿಕ ಬದುಕಿನ ಜತೆಗೆ ಆಯಾ ಕಾಲಘಟ್ಟದ ಹೋರಾಟ, ಚಳವಳಿ, ಅಪರೂಪದ ಸ್ನೇಹವಲಯವೂ ಇಲ್ಲಿದೆ. ವೈಯಕ್ತಿಕ ಬದುಕಿನ ಹೋರಾಟ ಇನ್ನೇನು ಮುಗಿಯಿತು ಅನ್ನುವಷ್ಟರಲ್ಲಿ ಧುತ್ತನೆ ಎದುರಾಗುವ ಕ್ಯಾನ್ಸರ್ ಅನ್ನೂ ಜಯಿಸಿ ಮತ್ತೆ ಜೀವನ್ಮುಖಿಯಾಗುವ ಲೇಖಕಿ, ಹೆಣ್ಣಿನ ಜೀವನಪ್ರೀತಿಯ ದ್ಯೋತಕವಾಗಿದ್ದಾರೆ. ದೇವದಾಸಿಯರ ಮಕ್ಕಳಿಗೆ ಈ ಆತ್ಮಕಥನ ಕೈದೀವಿಗೆಯಂತಿದೆ. ಕನ್ನಡ ಸಾಹಿತ್ಯದಲ್ಲಿ ಇದುವರೆಗೆ ಬಂದಿರುವ ಮಹಿಳಾ ಆತ್ಮಕಥನದ ಸಿದ್ಧ ಮಾದರಿಯನ್ನು ಮೀರುವ ವಿಶಿಷ್ಟ ಕೃತಿ ಇದಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-51-2047437643

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.