ಒಂದು ಕಾಲದಲ್ಲಿ ಮಳೆ ಬಂದರೆ ನೀರು ಸೋರಿಕೆಯಾಗುತ್ತಿದ್ದ ಮನೆಗಳು ಈಗ ಹೊಸ ಚಾವಣಿಗಳನ್ನು ಹೊದಿಸಿಕೊಂಡಿವೆ. ಅಂಗಡಿಗಳ ಮುಂಭಾಗಗಳು ಬಣ್ಣ ಪಡೆದುಕೊಂಡಿವೆ. ಹಾಡಿಗಳ ದಾರಿಗಳಲ್ಲಿ ಹೊಸ ಬೈಕ್ಗಳು ಓಡಾಡುತ್ತಿವೆ. ಕೈಯಲ್ಲಿ ಸ್ಮಾರ್ಟ್ಫೋನ್ಗಳು ಮಿನುಗುತ್ತಿವೆ. ಬಿಳಿಗಿರಿರಂಗನ ಬೆಟ್ಟಗಳ ಸೋಲಿಗರ ಹಾಡಿಗಳಲ್ಲಿ ಕಾಣುತ್ತಿರುವ ಈ ಬದಲಾವಣೆಯ ಹಿಂದೆ ಕಾಫಿಯ ಸುಗಂಧ ಬೆರೆತ ಒಂದು ತಣ್ಣನೆಯ ಕ್ರಾಂತಿಯಿದೆ. ಆ ಕ್ರಾಂತಿಯ ಹೆಸರೇ ‘ಬ್ಲ್ಯಾಕ್ ಬಾಜಾ’.

ಸುಮಾರು ಹತ್ತು ವರ್ಷಗಳ ಹಿಂದೆ ಮಾನವ ಭೂಗೋಳಶಾಸ್ತ್ರಜ್ಞೆ ಅರ್ಷಿಯಾ ಬೋಸ್ ಬಿಆರ್ಟಿ ಬೆಟ್ಟಗಳಿಗೆ ಬಂದಾಗ ಇಲ್ಲಿ ಕಂಡದ್ದು ಕೇವಲ ಕಾಫಿ ತೋಟಗಳಲ್ಲ. ಕಾಡಿನೊಂದಿಗೆ ಬದುಕು ಬೆಸೆದುಕೊಂಡಿದ್ದ ಸಮುದಾಯ, ಮಾರುಕಟ್ಟೆಯಿಂದ ದೂರ ಉಳಿದಿದ್ದ ರೈತರು ಮತ್ತು ಶ್ರಮಕ್ಕೆ ತಕ್ಕ ಬೆಲೆ ಸಿಗದ ಬದುಕಿನ ಕಥೆಗಳು ಅವರ ಗಮನ ಸೆಳೆದವು. ಆರಂಭದಲ್ಲಿ ಕೇವಲ ಹತ್ತು ರೈತರಿಂದ ಕಾಫಿ ಖರೀದಿಸುವ ಪ್ರಯತ್ನ ಇಂದು ನೀಲಗಿರಿ, ಪಳನಿ ಬೆಟ್ಟಗಳವರೆಗೂ ವಿಸ್ತರಿಸಿಕೊಂಡು ಸುಮಾರು 650ಕ್ಕೂ ಹೆಚ್ಚು ಬೆಳೆಗಾರರನ್ನು ಒಳಗೊಂಡ ಜಾಲವಾಗಿ ಬೆಳೆದಿದೆ.

ಆದರೆ ಈ ಕಥೆ ಕೇವಲ ವ್ಯಾಪಾರದ ಕಥೆಯಲ್ಲ; ಇದು ಬದುಕಿನ ಗುಣಮಟ್ಟ, ಸ್ವಾಭಿಮಾನ ಮತ್ತು ಜೀವವೈವಿಧ್ಯವನ್ನು ಒಂದೇ ಹಾದಿಯಲ್ಲಿ ಕೊಂಡೊಯ್ದ ಕಥೆ.

ಬಿಳಿಗಿರಿರಂಗನ ಬೆಟ್ಟಗಳ ಹಲವು ಕುಟುಂಬಗಳು ರಾಗಿ, ಜೋಳದಂತಹ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದವು. ಆದರೆ ಕಾಡುಹಂದಿ, ಆನೆಗಳ ಹಾವಳಿ ದಿನೇದಿನೇ ಹೆಚ್ಚಾಗತೊಡಗಿತು. ‘ನಾವು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ನಾಶ ಮಾಡುತ್ತಿದ್ದವು. ಸುಮಾರು ಮೂವತ್ತು ವರ್ಷಗಳ ಹಿಂದೆ ಕಾಫಿ ಮಂಡಳಿ ಕೆಲವರಿಗೆ ಕಾಫಿ ಬೀಜ ನೀಡಿತು. ಅದು ಉತ್ತಮ ಆದಾಯ ತಂದಾಗ ನಾವು ಕಾಫಿಯತ್ತ ತಿರುಗಿದೆವು’ ಎಂದು ಸೋಲಿಗ ಸಮುದಾಯದ ಬೆಳೆಗಾರ ಕೇತೇಗೌಡ ನೆನಪಿಸಿಕೊಳ್ಳುತ್ತಾರೆ.

ಆದರೆ ಕಾಫಿ ಬೆಳೆದರೂ ಸಮಸ್ಯೆ ಮುಗಿದಿರಲಿಲ್ಲ. ರೈತರು ಮಾರುಕಟ್ಟೆಗೆ ನೇರವಾಗಿ ತಲುಪಲಾರದೇ ಮಧ್ಯವರ್ತಿಗಳನ್ನೇ ನೆಚ್ಚಿಕೊಂಡಿದ್ದರು.

‘ಮಾರುಕಟ್ಟೆಯಲ್ಲಿ ಕೆ.ಜಿ ಗೆ ನೂರು ರೂಪಾಯಿ ದರ ಇದ್ದರೂ ನಮಗೆ ಐವತ್ತು–ಅರವತ್ತು ರೂಪಾಯಿ ಮಾತ್ರ ಸಿಗುತ್ತಿತ್ತು. ನಮ್ಮ ಪರಿಶ್ರಮಕ್ಕೆ ಬೆಲೆ ಇಲ್ಲದಂತಾಗಿತ್ತು’ ಎಂದು ಸಣ್ಣರಂಗೇಗೌಡ ಬೇಸರ ವ್ಯಕ್ತಪಡಿಸುತ್ತಾರೆ.

ಅದೇ ಸಮಯದಲ್ಲಿ ಅರ್ಷಿಯಾ ಮತ್ತು ಅವರ ತಂಡ ಒಂದು ವಿಭಿನ್ನ ಮಾದರಿಯನ್ನು ಪರಿಚಯಿಸಿತು. ಮಾರುಕಟ್ಟೆ ದರಕ್ಕಿಂತ ಹೆಚ್ಚು ಹಣ ನೀಡಿ, ತೋಟಕ್ಕೇ ಬಂದು ನೇರ ಖರೀದಿ ಆರಂಭಿಸಿತು. ತೂಕ ಮಾಡುವ ಪ್ರಕ್ರಿಯೆಯನ್ನೂ ಪಾರದರ್ಶಕಗೊಳಿಸಿತು. ‘ನಾವು ಎಲ್ಲ ರೈತರಿಂದ ಖರೀದಿಸದೇ ಇರಬಹುದು. ಆದರೆ ಈಗ ಅವರು ನ್ಯಾಯಯುತ ದರ ಕೇಳುವ ಧೈರ್ಯ ಪಡೆದಿದ್ದಾರೆ’ ಎಂದು ಅರ್ಷಿಯಾ ಹೇಳುತ್ತಾರೆ.

ಬ್ಲ್ಯಾಕ್ ಬಾಜಾದ ಪ್ರಮುಖ ಕೊಡುಗೆ ಕೇವಲ ಹೆಚ್ಚು ದರ ಕೊಡುವುದಲ್ಲ; ಕಾಫಿಯ ಮೌಲ್ಯವನ್ನು ರೈತರಿಗೆ ಅರ್ಥಮಾಡಿಸಿಕೊಟ್ಟದ್ದು.

‘ಕಾಫಿಯನ್ನು ಹೇಗೆ ಆಯ್ಕೆ ಮಾಡಬೇಕು, ತೊಳೆಯಬೇಕು, ಒಣಗಿಸಬೇಕು ಎಂಬುದನ್ನು ನಾವು ಮೊದಲ ಬಾರಿಗೆ ಕಲಿತೆವು. ಜ್ಞಾನದ ಕೊರತೆಯಿಂದಲೇ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದೇವೆ ಎಂಬುದು ಆಗ ತಿಳಿಯಿತು’ ಎಂದು ಕೊಳ್ಳೇಗೌಡ ಹೇಳುತ್ತಾರೆ.

ಇದೀಗ ಹಲವರು ಕೊಯ್ಲಿನ ನಂತರದ ಸಂಸ್ಕರಣೆಯಲ್ಲಿಯೂ ಪರಿಣತಿ ಗಳಿಸಿದ್ದಾರೆ. ‘ಹನಿ ಕಾಫಿ’ ಅಥವಾ ‘ಜೇನು ಕಾಫಿ’ಯಂತಹ ವಿಶೇಷ ಸಂಸ್ಕರಣೆ ವಿಧಾನಗಳನ್ನು ಬಳಸಿ ಹೆಚ್ಚು ಬೆಲೆ ಪಡೆಯುತ್ತಿದ್ದಾರೆ. ಸಮುದಾಯ ಪಲ್ಪಿಂಗ್ ಘಟಕಗಳ ಮೂಲಕ ರೈತರು ತಮ್ಮ ಕಾಫಿಯನ್ನು ತಾವೇ ಸಂಸ್ಕರಿಸುವ ಅವಕಾಶ ಪಡೆದಿದ್ದಾರೆ. ಪರಿಣಾಮವಾಗಿ ಕಾಫಿ ಕಾಳಿನ ಮೌಲ್ಯ ಹೆಚ್ಚಿದ್ದು, ಆದಾಯವೂ ಏರಿದೆ.

ಈ ಬದಲಾವಣೆಯ ಪರಿಣಾಮ ಹಾಡಿಗಳಲ್ಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮನೆಗಳು ನವೀಕರಣಗೊಳ್ಳುತ್ತಿವೆ. ಕೆಲ ಕುಟುಂಬಗಳು ಸಾಲಮುಕ್ತವಾಗುತ್ತಿವೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಹೆಚ್ಚಿನ ಅವಕಾಶಗಳು ಸಿಗುತ್ತಿವೆ.

ಕಾಡು ಉಳಿಸುವ ಕಾಫಿ

ಸಾಮಾನ್ಯವಾಗಿ ಕಾಫಿ ಕೃಷಿ ಅರಣ್ಯನಾಶ, ರಾಸಾಯನಿಕ ಬಳಕೆ ಮತ್ತು ಜೀವವೈವಿಧ್ಯ ಹಾನಿಯೊಂದಿಗೆ ಸಂಬಂಧ ಹೊಂದಿದೆ. ಆದರೆ ಬ್ಲ್ಯಾಕ್ ಬಾಜಾ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗಲು ಪ್ರಯತ್ನಿಸಿದೆ. ‘ನಮ್ಮ ಪಾಲುದಾರ ರೈತರು ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ತೋಟಗಳಲ್ಲಿ ಸ್ಥಳೀಯ ಮರಗಳನ್ನು ಉಳಿಸಿಕೊಳ್ಳಲು ಆದ್ಯತೆ ನೀಡುತ್ತಾರೆ’ ಎಂದು ಅರ್ಷಿಯಾ ವಿವರಿಸುತ್ತಾರೆ.

ಅವರ ಪಿಎಚ್ಡಿ ಸಂಶೋಧನೆಯೂ ಇದೇ ಪ್ರಶ್ನೆಯ ಸುತ್ತ ತಿರುಗುತ್ತಿತ್ತು– ಜೀವವೈವಿಧ್ಯ ಸಂರಕ್ಷಣೆಗೆ ಮಾರುಕಟ್ಟೆ ಪ್ರೋತ್ಸಾಹ ಹೇಗೆ ನೆರವಾಗಬಹುದು? ‘ಸಂರಕ್ಷಣೆ ಎಂದರೆ ಕೇವಲ ಹುಲಿ ಉಳಿಸುವುದಲ್ಲ. ಜೇನುನೊಣ, ಗೆದ್ದಲು, ಎರೆಹುಳುಗಳೂ ಅಷ್ಟೇ ಮುಖ್ಯ’ ಎಂದು ಅವರು ಹೇಳುತ್ತಾರೆ.

ಅದಕ್ಕಾಗಿ ಬ್ಲ್ಯಾಕ್ ಬಾಜಾದ ಕಾಫಿ ವಿಧಗಳಿಗೆ ಅಳಿವಿನಂಚಿನ ಜೀವಿಗಳ ಹೆಸರಿಡಲಾಗಿದೆ. ಟೈಗರ್ ಬೀಟಲ್, ಲೋರಿಸ್, ಗ್ಯಾಲಕ್ಸಿ ಫ್ರಾಗ್ ಎಂಬ ಹೆಸರುಗಳು ಗ್ರಾಹಕರಿಗೆ ಕಾಫಿಯೊಂದಿಗೆ ಪರಿಸರದ ಕಥೆಯನ್ನೂ ಹೇಳುತ್ತವೆ.

ಕಾಫಿ ಜಗತ್ತಿನ ಒಂದು ವಿಶೇಷ ಸವಾಲು ಅದರ ರುಚಿ ಮತ್ತು ಸುವಾಸನೆಯ ಭಾಷೆ. ‘ಯುಜು ಅಥವಾ ರೋಸೆಲ್ಲೆ ಎಂಬ ವಿದೇಶಿ ಪದಗಳನ್ನು ಗ್ರಾಮೀಣ ರೈತರಿಗೆ ಅರ್ಥ ಮಾಡಿಸುವುದು ಸುಲಭವಿರಲಿಲ್ಲ. ನಂತರ ನಾವು ಹುಣಸೆಹಣ್ಣಿನ ಸುವಾಸನೆ, ಬೆಲ್ಲದ ಸಿಹಿ ಎಂಬ ಸ್ಥಳೀಯ ಹೋಲಿಕೆಗಳನ್ನು ಬಳಸಲು ಆರಂಭಿಸಿದೆವು’ ಎಂದು ತಂಡದ ಸದಸ್ಯ ಅಸ್ಜದ್ ಅಹ್ಮದ್ ಹೇಳುತ್ತಾರೆ. ಇದು ಕೇವಲ ಭಾಷಾಂತರವಲ್ಲ; ಜಾಗತಿಕ ಕಾಫಿ ಸಂಸ್ಕೃತಿಯನ್ನು ಸ್ಥಳೀಯ ಅನುಭವದೊಂದಿಗೆ ಜೋಡಿಸುವ ಪ್ರಯತ್ನ.

ಹೊರಗಿನಿಂದ ಬಂದ ಹುಡುಗಿಯ ಹಟ

ಬೇರೆ ರಾಜ್ಯದಿಂದ ಬಂದ ಯುವತಿಯೊಬ್ಬಳು, ಅದೂ ಪುರುಷ ಪ್ರಧಾನ ಕಾಫಿ ವ್ಯಾಪಾರ ಕ್ಷೇತ್ರದಲ್ಲಿ ತನ್ನ ಸ್ಥಾನ ಕಂಡುಕೊಳ್ಳುವುದು ಸುಲಭದ ವಿಷಯವಾಗಿರಲಿಲ್ಲ. ಆರಂಭದಲ್ಲಿ ವ್ಯಾಪಾರಿಗಳ ವಿರೋಧ, ಬೆದರಿಕೆಗಳನ್ನೂ ಎದುರಿಸಬೇಕಾಯಿತು. ಆದರೆ ಅರ್ಷಿಯಾ ಹಿಂಜರಿಯಲಿಲ್ಲ. ಸಮುದಾಯದೊಂದಿಗೆ ನೇರವಾಗಿ ಮಾತನಾಡಲು ಕನ್ನಡ ಕಲಿತರು. ಹಾಡಿಗಳಲ್ಲಿ ಕಾಲ ಕಳೆಯುತ್ತ ವಿಶ್ವಾಸ ಗಳಿಸಿದರು. ‘ಅರ್ಷಿಯಾ ಸಮುದಾಯದೊಂದಿಗೆ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿದಾಗ ನನಗೆ ಆಶ್ಚರ್ಯವಾಯಿತು’ ಎಂದು ಅವರ ಸಹೋದ್ಯೋಗಿ ರಾಧಾ ರಂಗರಾಜನ್ ಹೇಳುತ್ತಾರೆ.

ಇಂದು ‘ಬ್ಲ್ಯಾಕ್ ಬಾಜಾ’ ಕೇವಲ ಕಾಫಿ ಬ್ರ್ಯಾಂಡ್ ಅಲ್ಲ; ಅದು ಸಮುದಾಯ, ಜೀವವೈವಿಧ್ಯ ಮತ್ತು ನ್ಯಾಯಯುತ ಮಾರುಕಟ್ಟೆಯ ನಡುವಿನ ಸೇತುವೆಯಾಗಿದೆ.

ಬಿಳಿಗಿರಿರಂಗನ ಬೆಟ್ಟಗಳ ಹಾಡಿಗಳಲ್ಲಿ ಕೇಳಿಬರುವ ಹೊಸ ಬೈಕ್ಗಳ ಸದ್ದು, ಹೊಸ ಮನೆಯ ಚಾವಣಿಗಳ ಮೆರುಗು ಮತ್ತು ಕಾಫಿ ಕಾಳಿನ ಸುಗಂಧ ಇವೆಲ್ಲವೂ ಕಾಡಿನೊಳಗೂ ಅಭಿವೃದ್ಧಿಗೆ ಮತ್ತೊಂದು ದಾರಿ ತೆರೆದಿವೆ.

ಅನುವಾದ:ಕೀರ್ತಿಕುಮಾರಿ ಎಂ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.