ನಮ್ಮದು ಸರ್ವ ಧರ್ಮ ಸಮನ್ವಯ ಹೊಂದಿರುವ ರಾಷ್ಟ್ರ. ಹೀಗಾಗಿ ದೇಶ ಸೇವೆಯಲ್ಲಿ, ರಾಷ್ಟ್ರ ರಕ್ಷಣೆಯಲ್ಲಿ ಎಲ್ಲ ಧರ್ಮದವರ ಕೊಡುಗೆಯೂ ಇದೆ ಎಂಬುದನ್ನು ನೆನಪಿಸಿಕೊಳ್ಳಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಅದಕ್ಕೆ ಪೂರಕ ಎಂಬಂತಿದೆ ‘ಭಾರತೀಯ ಮುಸ್ಲಿಂ ವೀರಯೋಧರ ವೀರಗಾಥೆಗಳು’ ಕೃತಿ. ಶೀರ್ಷಿಕೆಯೇ ಹೇಳುವಂತೆ ಸೇನೆಯಲ್ಲಿ ಮುಸ್ಲಿಂ ಯೋಧರ ಕೊಡುಗೆಗಳನ್ನು ಸ್ಮರಿಸುತ್ತದೆ. ಸ್ವತಂತ್ರ ಪೂರ್ವದಿಂದ ಹಿಡಿದು ಇತ್ತೀಚಿನ ಆಪರೇಷನ್ ಸಿಂಧೂರದವರೆಗಿನ ರಾಷ್ಟ್ರ ರಕ್ಷಣೆಯ ಹೋರಾಟ, ಯುದ್ಧಗಳಲ್ಲಿ ಹುತಾತ್ಮರಾದ ಅನೇಕ ಮುಸ್ಲಿಂ ಯೋಧರ ಕಿರು ಪರಿಚಯ ಇಲ್ಲಿದೆ.

ಕೃತಿಯಲ್ಲಿ ಒಟ್ಟು ಎಂಟು ಅಧ್ಯಾಯಗಳಿವೆ. ಈಸ್ಟ್ ಇಂಡಿಯಾ ಕಂಪನಿ ಉದಯ, ಪ್ಲಾಸಿ ಕದನದಲ್ಲಿ ದೇಶಕ್ಕಾಗಿ ಹೋರಾಡಿದ ಮೀರ್ ಮದನ್ ಖಾನ್, ಮೀರ್ ಜಾಫರ್ನ ರಾಜದ್ರೋಹ ಮುಂತಾದ ವಿಷಯಗಳು ಮೊದಲ ಅಧ್ಯಾಯದಲ್ಲಿವೆ. ಹೈದರ್ ಅಲಿ ಖಾನ್, ಟಿಪ್ಪು ಸುಲ್ತಾನ್ ಕುರಿತಾದ ವಿವರಗಳು, ಅವರ ಆಳ್ವಿಕೆಯಲ್ಲಿ ನಡೆದ ಬ್ರಿಟಿಷರ ವಿರುದ್ಧದ ಯುದ್ಧಗಳ ಮಾಹಿತಿ ದ್ವಿತೀಯ ಅಧ್ಯಾಯದಲ್ಲಿದೆ. 1857ರ ಸಿಪಾಯಿ ದಂಗೆ ಮತ್ತು ಅದರಲ್ಲಿ ಹೋರಾಡಿದ ಮುಸ್ಲಿಂ ದೊರೆಗಳ ಚಿತ್ರಣ ಮೂರನೆ ಅಧ್ಯಾಯದಲ್ಲಿ ಸಿಗುತ್ತದೆ.

ಬಹದ್ದೂರ್ ಕ್ರಾಂತಿಕಾರಿ ಮೌಲ್ವಿ ಅಹಮದುಲ್ಲಾ ಷಾ, ಭಕ್ತಖಾನ್ ರೋಹಿಲ್ಲಾರಿಂದ ಹಿಡಿದು ಕಳೆದ ವರ್ಷ ಕಾಶ್ಮೀರದಲ್ಲಿ ಹುತಾತ್ಮನಾದ ಬಿಎಎಸ್ಎಫ್ ಯೋಧ ಮೊಹಮ್ಮದ್ ಇಮ್ತಿಯಾಜ್ ಅವರವರೆಗೆ ಸಾಕಷ್ಟು ಮುಸ್ಲಿಂ ಯೋಧರ ಪರಿಚಯ ಮುಂದಿನ ಅಧ್ಯಾಯಗಳಲ್ಲಿ ಆಗುತ್ತದೆ. ‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂ ಮಹಿಳೆಯರ ಸಾಹಸಗಾಥೆಗಳು’ ಅಧ್ಯಾಯ ಝಾನ್ಸಿಯ ಮಂದರ್ನಿಂದ ಹಿಡಿದು ಅನೇಕ ವೀರ ಮಹಿಳೆಯರ ಕುರಿತು ಮಾಹಿತಿ ನೀಡುತ್ತದೆ. ಸರಳ ಭಾಷೆ, ಸಂಕ್ಷಿಪ್ತ ಮಾಹಿತಿಯಿಂದಾಗಿ ಕೃತಿಯು ಓದಿಗೆ ಸುಲಭವಾಗಿದೆ. ಅಪರೂಪದ ಛಾಯಾಚಿತ್ರಗಳು ಕೃತಿಯ ಅಂದವನ್ನು ಹೆಚ್ಚಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-51-134052188

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.