ದೇಶದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಬಿಸಿಗಾಳಿ ಅಬ್ಬರಿಸುತ್ತಿದೆ. ಅಲ್ಲದೆ ಎಲ್ ನಿನೊ ಪ್ರಭಾವದಿಂದ ಈ ಬಾರಿ ವಾಡಿಕೆಗಿಂತಲೂ ಕಡಿಮೆ ಮಳೆ ಸುರಿಯಲಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನಗರೀಕರಣ, ಕೆರೆಗಳ ನಾಶ, ಹವಾಮಾನದಲ್ಲಿನ ಬದಲಾವಣೆ ಹೀಗೆ ಹಲವು ಕಾರಣಗಳಿಂದ ಜಾಗತಿಕವಾಗಿಯೂ ತಾಪಮಾನ ಏರಿಕೆಯಾಗುತ್ತಲೇ ಇದೆ. ಈಗ ಭಾರತ ಎದುರಿಸುತ್ತಿರುವ ತಾಪಮಾನದ ಸಮಸ್ಯೆಯನ್ನು ಈ ಹಿಂದೆ ಸಿಂಗಪುರವೂ ಎದುರಿಸಿತ್ತು.

ಆದರೆ, ಸಿಂಗಪುರದ ಕಠಿಣ ಮತ್ತು ಸೂಕ್ತ ಕ್ರಮಗಳ ಪರಿಣಾಮವಾಗಿ ಸದ್ಯ ದೇಶದಲ್ಲಿ ಬೇಸಿಗೆಯಲ್ಲೂ ತಾಪಮಾನ ಮಿತಿಮೀರದೆ ಸಾಮಾನ್ಯಮಟ್ಟದಲ್ಲೇ ಇರುತ್ತದೆ. ಸಿಂಗಪುರದ ಕ್ರಮಗಳು ಒಂದೆರೆಡು ದಿನದಲ್ಲಿ ಬದಲಾವಣೆ ಕಾಣದಿದ್ದರೂ ವರ್ಷಗಳ ಪ್ರಯತ್ನ ಫಲಕೊಟ್ಟಿದೆ. ಸಿಂಗಪುರ ಕೈಗೊಂಡ ಕ್ರಮಗಳು ಭಾರತವೂ ಅಳವಡಿಸಿಕೊಳ್ಳುವಂತಹದ್ದೇ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಸಿಂಗಪುರದಲ್ಲಿ 1948 ರಿಂದ 2016 ರವರೆಗೆ, ತಾಪಮಾನವು ಪ್ರತಿ ದಶಕಕ್ಕೆ 0.25 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆ ಕಂಡಿತ್ತು. ದಿನಕ್ಕೆ ಸರಾಸರಿ 37 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗುತ್ತಿತ್ತು.

ಸಿಂಗಪುರ ಪಾಲಿಸಿದ ತಂತ್ರಗಳು

ಹಂತ 1: ಸರಿಯಾಗಿ ಗಾಳಿಯಾಡಲು ಅನುಕೂಲವಾಗುವಂತೆ ಗಿಡಗಳ ವಿನ್ಯಾಸ

ಹಂತ 2: ಕಟ್ಟಡಗಳಿಗೆ ತಿಳಿ ಬಣ್ಣ

ಹಂತ 3: ಹೊಗೆಯ ಪ್ರಮಾಣ ಕಡಿತ ಮತ್ತು ಡಕ್ಟ್ ವಿನ್ಯಾಸ

ಸಿಂಗಪುರದ ನಗರಗಳನ್ನು ಸೌಂದರ್ಯಗೊಳಿಸುವ ಕಾರ್ಯದಲ್ಲಿ ಸಾಕಷ್ಟು ಮರಗಳನ್ನು ನೆಟ್ಟು ಹೊಸ ವಿನ್ಯಾಸ ನೀಡಿದ್ದಾರೆ. ಕಟ್ಟಡಗಳ ಮೇಲೆ ಬಳಿಯುವ ತಿಳಿ ಬಣ್ಣಗಳು ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆ ಮಾಡುತ್ತವೆ. ನಗರಕ್ಕೇ ಹೊಸ ವಿನ್ಯಾಸ ನೀಡುವ ಮೂಲಕ ತಾಪಮಾನವನ್ನು ನಿಯಂತ್ರಣಕ್ಕೆ ತರಲಾಗಿದೆ.

ಗಿಡಗಳ ವಿನ್ಯಾಸ

ನಗರದಾದ್ಯಂತ ಕಟ್ಟಡಗಳ ಮೇಲೆ ಹಸಿರು ಬಳ್ಳಿಗಳನ್ನು ಬೆಳೆಸಿದರು. ಗಾರ್ಡನ್ಗಳಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಿದರು. ಒಟ್ಟಾರೆಯಾಗಿ 300 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಹಸಿರು ಬೆಳೆಸುವ ಮೂಲಕ ತಾಪಮಾನ ತಗ್ಗಿಸುವಿಕೆಗೆ ಕ್ರಮ ಕೈಗೊಂಡರು.

ಇದನ್ನು ಭಾರತದಲ್ಲೂ ಅಳವಡಿಸಿಕೊಳ್ಳಬಹುದು. ಮನೆಗಳಲ್ಲಿ ಗಿಡಗಳನ್ನು ಬೆಳೆಸುವುದೇನೂ ಹೊಸ ವಿಚಾರವಲ್ಲ. ಅದೇ ರೀತಿ ಗಾರ್ಡನ್ಗಳನ್ನೂ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದರೆ ತಾಪಮಾನವನ್ನು ತಗ್ಗಿಸಬಹುದು.

ಕಟ್ಟಡಗಳಿಗೆ ತಿಳಿ ಬಣ್ಣ

ಕಟ್ಟಡಗಳಿಗೆ ಗಾಢ ಬಣ್ಣವನ್ನು ಹಚ್ಚುವುದರಿಂದ ಶಾಖವನ್ನು ಹೀರಿಕೊಳ್ಳುವ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಒಳಾಂಗಣದ ತಾಪಮಾನವೂ ಏರಿಕೆಯಾಗುತ್ತದೆ. ಹೀಗಾಗಿ ಬಿಳಿ, ತಿಳಿ ನೀಲಿಯಂತಹ ತಿಳಿಯಾದ ಬಣ್ಣವನ್ನು ಹಚ್ಚುವುದರಿಂದ ಶಾಖವನ್ನು ನಿಯಂತ್ರಿಸಬಹುದು.

ಡಕ್ಟ್ ವಿನ್ಯಾಸ

ಸಾಮಾನ್ಯವಾಗಿ ಪ್ರತಿ ಕಟ್ಟಡವು ತನ್ನದೇ ಆದ ಎಸಿ ಘಟಕಗಳನ್ನು ಹೊಂದಿರುತ್ತದೆ. ಆದರೆ 'ಡಿಸ್ಟ್ರಿಕ್ಟ್ ಕೂಲಿಂಗ್' ವ್ಯವಸ್ಥೆಯಲ್ಲಿ, ಒಂದು ಕೇಂದ್ರ ಘಟಕದಲ್ಲಿ ದೊಡ್ಡ ಪ್ರಮಾಣದ ತಣ್ಣೀರನ್ನು ಉತ್ಪಾದಿಸಲಾಗುತ್ತದೆ. ಈ ತಣ್ಣೀರನ್ನು ಪೈಪ್ಗಳ ಮೂಲಕ ಇಡೀ ಪ್ರದೇಶದ ಹಲವಾರು ಕಟ್ಟಡಗಳಿಗೆ ಸರಬರಾಜು ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.