ಆಧಾರ್ ದಾಖಲೆಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಆಗಾಗ ಜಾರಿಯಾಗುತ್ತಲೇ ಇರುತ್ತವೆ. ಭದ್ರತೆ ಹಾಗೂ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹೊಸ ನಿಯಮಗಳು ಜಾರಿಯಾಗುತ್ತವೆ. ಇದೀಗ ದೇಶದ ಕಾಮನ್ ಸರ್ವೀಸ್ ಸೆಂಟರ್ ಪಾನ್ ಕಾರ್ಡ್ಗೆ ಹೊಸದೊಂದು ನಿಯಮವನ್ನು ಜಾರಿ ಮಾಡಲು ಸಿದ್ದವಾಗಿದೆ. ಹಾಗಾದರೆ ಆ ಹೊಸ ನಿಯಮ ಏನು? ಯಾವಾಗಿನಿಂದ ಜಾರಿಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಹೊಸ ಪಾನ್ಕಾರ್ಡ್ ಪಡೆಯಲು ಅಥವಾ ಈಗಿರುವ ಪಾನ್ಕಾರ್ಡ್ನ ನವೀಕರ ಮಾಡಲು ಈ ಹಿಂದೆ ಆಧಾರ್ ದಾಖಲೆಯನ್ನು ಕೇಳಲಾಗುತ್ತಿತ್ತು. ಆದರೆ ಇದೀಗ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಆಧಾರ್ ಜೊತೆಗೆ ಇತರೆ ದಾಖಲೆಗಳನ್ನೂ ನೀಡಬೇಕಾಗುತ್ತದೆ. ಏಪ್ರಿಲ್ 1ರಿಂದ ಈ ಹೊಸ ನಿಯಮ ಜಾರಿಯಾಗಲಿದೆ ಎಂದು ಸಿಎಸ್ಸಿ ತಿಳಿಸಿದೆ.

ಮಾರ್ಚ್ 31 ರವರೆಗೆ ಹೊಸ ಪಾನ್ಕಾರ್ಡ್ ಅಥವಾ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿರುವವರು ಆಧಾರ್ ಕಾರ್ಡ್ ನೀಡಿದರೆ ಸಾಕಾಗುತ್ತದೆ. ಏಪ್ರಿಲ್ 1ರ ನಂತರ ಹೆಚ್ಚುವರಿ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ.

ಹೊಸ ದಾಖಲೆಗಳು ಯಾವುವು?

ಜನನ ಪ್ರಮಾಣಪತ್ರ

ಮತದಾರರ ಗುರುತಿನ ಚೀಟಿ

10 ನೇ ತರಗತಿ ಅಂಕಪಟ್ಟಿ

ಪಾಸ್ ಪೋರ್ಟ್

ಚಾಲನಾ ಪರವಾನಿಗೆ

ಅಫಿಡವಿಟ್

ಇಲಾಖೆ ತಿಳಿಸಿರುವಂತೆ, ಏಪ್ರಿಲ್ 1ರಿಂದ ಹೊಸ ಫಾರ್ಮ್ ಬರಲಿದೆ. ಹಳೆಯ ಫಾರ್ಮ್ ಬಳಸಿ ಪಾನ್ಗೆ ಅರ್ಜಿ ಸಲ್ಲಿಸಿದರೆ, ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ ಹೊಸ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು.

ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಒಂದಷ್ಟು ಹೊಸ ನಿಯಮಗಳನ್ನು ಜಾರಿ ಮಾಡಿದೆ. ನಿಯಮದ ಪ್ರಕಾರ ಸ್ಥಿರ ಆಸ್ತಿಯ ಖರೀದಿ ಅಥವಾ ಮಾರಾಟದ ಸಂದರ್ಭದಲ್ಲಿ ಆಸ್ತಿಯ ಮೌಲ್ಯ ₹10 ಲಕ್ಷಕ್ಕೂ ಹೆಚ್ಚು ಮೀರಿದರೆ, ಪಾನ್ ಕಾರ್ಡ್ ನೀಡಬೇಕಿತ್ತು. ಇದೀಗ ಹೊಸ ನಿಯಮದಲ್ಲಿ ಇದರ ಮಿತಿಯನ್ನು ₹20 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.