ಚಿತ್ರದುರ್ಗ: ‘ಈಗಲೂ ಲಿಂಗ ತಾರತಮ್ಯ ಜೀವಂತವಾಗಿದೆ. ತಾಯಿಯ ಗರ್ಭದಲ್ಲಿಯೇ ಹೆಣ್ಣು ಭ್ರೂಣ ಹತ್ಯೆ ಮಾಡಲಾಗುತ್ತಿದೆ. ಹೆಣ್ಣು ಭ್ರೂಣಹತ್ಯೆಯ ವಿರುದ್ಧ ಇಡೀ ಸಮಾಜದಲ್ಲಿ ಜಾಗೃತಿ ಮೂಡದಿದ್ದರೆ ಲಿಂಗಾಧಾರಿತ ಹಿಂಸೆಗೆ ಕೊನೆಯೇ ಇಲ್ಲದಂತಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಸಿ. ಬಸವರಾಜು ಕಳವಳ ವ್ಯಕ್ತಪಡಿಸಿದರು.

ಸರಸ್ವತಿ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ‘ಲಿಂಗಾಧಾರಿತ ಹಿಂಸೆಯನ್ನು ಎದುರಿಸುವುದು; ಸುರಕ್ಷತೆ ಮತ್ತು ನ್ಯಾಯಕ್ಕಾಗಿ ತಂತ್ರಗಳು’ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಸಮಾಜದಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿರುವ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಬದುಕುತ್ತಿರುವುದು ನಾಗರಿಕ ಸಮಾಜದಲ್ಲಿ ಎನ್ನುವುದನ್ನು ಮರೆಯುವಂತಿಲ್ಲ. ತಾರತಮ್ಯದ ಕುರಿತು ಕೇವಲ ಕಾನೂನು ವಿದ್ಯಾರ್ಥಿಗಳಷ್ಟೇ ಅಲ್ಲ, ಸಮಾಜದಲ್ಲಿನ ಪ್ರತಿಯೊಬ್ಬರೂ ಜಾಗೃತಿ ಮೂಡಿಸುವ ಅಗತ್ಯವಿದೆ. ನಾವೆಲ್ಲರೂ ಹೆಣ್ಣಿಗೆ ಗೌರವ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕಿದೆ’ ಎಂದು ಹೇಳಿದರು.

‘ಮಹಿಳೆಯರು ಹಾಗೂ ಮಕ್ಕಳ ವಿಷಯದಲ್ಲಿ ಲಿಂಗ ತಾರತಮ್ಯ ಕಾಣಬಹುದಾಗಿದೆ. ಮಹಿಳೆಯರ ಹಕ್ಕುಗಳನ್ನು ನಾಶಗೊಳಿಸುವ ಮೂಲಕ ಕೀಳಾಗಿ ಕಾಣಲಾಗುತ್ತಿದೆ. ಮಹಿಳೆಯನ್ನು ಭೂಮಾತೆ ಎಂದು ಕರೆದರೆ ಸಾಲದು. ಮಹಿಳೆ ಹಾಗೂ ಮಕ್ಕಳ ರಕ್ಷಣೆ ಮಾಡುವುದು ಎಲ್ಲರ ಹೊಣೆಗಾರಿಕೆ. ಲಿಂಗ ತಾರತಮ್ಯವನ್ನು ತೊಡೆದು ಹಾಕಿ ಸಮ ಸಮಾಜ ನಿರ್ಮಿಸುವತ್ತ ಯುವ ಪೀಳಿಗೆ ಗಮನ ನೀಡಬೇಕಿದೆ’ ಎಂದರು.

‘ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟಬೇಕು. ಲಿಂಗ ತಾರತಮ್ಯದ ವಿರುದ್ಧ ಹೋರಾಡಬೇಕು. ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡಬಾರದೆಂದು ಎಲ್ಲಿಯೂ ಕಾನೂನಿಲ್ಲ. ಅದೇ ರೀತಿ ಮಹಿಳೆಯರು ಮಸೀದಿ, ಸಮಾಧಿಗೆ ಹೋಗಬಾರದೆಂಬ ಕಟ್ಟುಪಾಡುಗಳನ್ನು ಹಿಂದಿನಿಂದಲೂ ವಿಧಿಸುತ್ತ ಬರಲಾಗುತ್ತಿದೆ. ಇದು ಲಿಂಗ ತಾರತಮ್ಯಕ್ಕಿಂತಲೂ ಹೆಚ್ಚು ಅಪಾಯಕಾರಿ’ ಎಂದು ಕಾನೂನು ಪ್ರಾಧ್ಯಾಪಕ ಎನ್.ಎಸ್. ಶ್ರೀನಿವಾಸಲು ಹೇಳಿದರು.

‘ಹೆಣ್ಣಿಗೆ ಮಾನಸಿಕವಾಗಿ ಕಿರುಕುಳ ನೀಡುವುದೂ ದೊಡ್ಡ ಹಿಂಸೆಯಿದ್ದಂತೆ. ಹೆಣ್ಣು ಉನ್ನತ ಸ್ಥಾನಕ್ಕೇರುತ್ತಿದ್ದರೂ ಲಿಂಗ ತಾರತಮ್ಯ ಮಾತ್ರ ಇನ್ನೂ ನಿಂತಿಲ್ಲ. ಆತ್ಮಾಭಿಮಾನ, ದುರಾಭಿಮಾನ ಜಾಸ್ತಿಯಾಗಿರುವುದರಿಂದ ಕೆಲವೊಮ್ಮೆ ಕಾನೂನು ದುರ್ಬಳಕೆಯಾಗುತ್ತದೆ. ಮಹಿಳೆಯರ ಮೂಲ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದನ್ನು ತಡೆಗಟ್ಟಬೇಕಿದೆ. ಇಲ್ಲವಾದಲ್ಲಿ ಮಹಿಳೆಯರ ಸಬಲೀಕರಣ ಅಸಾಧ್ಯ’ ಎಂದು ಹೇಳಿದರು.

‘ಕೆಲವರು ತಮ್ಮ ರಕ್ಷಣೆಗಾಗಿ ಕಾಯ್ದೆಗಳನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಭಾರತೀಯ ಸನಾತನ ಸಂಸ್ಕೃತಿ ಈಗಲೂ ಪ್ರೀತಿ ವಿಶ್ವಾಸದ ಮೇಲೆ ನಿಂತಿದೆ. ಗ್ರಾಮೀಣ ಭಾಗ, ಸಣ್ಣ– ಪುಟ್ಟ ಊರುಗಳಲ್ಲಿ ಲಿಂಗ ತಾರತಮ್ಯ ಬಗ್ಗೆ ಅರಿವು ಮೂಡಿಸಬೇಕಿದೆ’ ಎಂದರು.

ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷ ಎಚ್. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಎಂ.ಎಸ್. ಮಧುರ, ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಎಸ್. ಸುಧಾದೇವಿ, ವಕೀಲರಾದ ಡಿ.ಕೆ. ಶೀಲಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-44-1135218757

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.