ದಾವಣಗೆರೆ: ‘ಪುರುಷರೊಂದಿಗಿನ ಪುರುಷರ ಲೈಂಗಿಕ ಕ್ರಿಯೆಯು (‘ಗೇ’ ತನ) ನೈಸರ್ಗಿಕ. ಅದು ಯಾವುದೇ ರೀತಿಯ ಮಾನಸಿಕ ಕಾಯಿಲೆ ಅಲ್ಲ. ಈ ಪ್ರವೃತ್ತಿಗೆ ಚಿಕಿತ್ಸೆ ಕೊಡುತ್ತೇವೆ ಎಂದು ಯಾವ ಮನೋವೈದ್ಯರೂ ಯತ್ನಿಸಬಾರದು’ ಎಂದು ನಿಮ್ಹಾನ್ಸ್ನ ಆಪ್ತ ಸಮಾಲೋಚಕ ಸುಭಾಷ್ ಎಚ್.ಜೆ. ಹೇಳಿದ್ದಾರೆ.

ಭಾರತೀಯ ಮನೋವೈದ್ಯರು ಮತ್ತು ಮನಃಶಾಸ್ತ್ರಜ್ಞರ ಸಂಘ ಈ ಸಂಬಂಧ ಕೆಲವು ದಿನಗಳ ಹಿಂದೆ ನಿರ್ದೇಶನ ನೀಡಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪತ್ರಿಕೆಯಲ್ಲಿ ಮೇ 18ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ‘ಎಂಎಸ್ಎಂ ಎಂಬ ಮೋಹದ ಜಾಲ’ ಲೇಖನಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ಸಂಶೋಧನೆಗಳ ಪ್ರಕಾರ ಮನುಷ್ಯರಲ್ಲಿ ಮಾತ್ರವಲ್ಲದೆ ಅನೇಕ ಪ್ರಾಣಿ– ಪಕ್ಷಿಗಳಲ್ಲಿಯೂ ಸಮ ಲೈಂಗಿಕತೆಯನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಪೋರ್ನೋಗ್ರಫಿ ಅಥವಾ ಯಾವುದೇ ಜಾಲದಲ್ಲಿ ಸಿಲುಕಿ ಯುವಕರು ಸಮ ಲೈಂಗಿಕತೆಯತ್ತ ಆಸಕ್ತಿ ತೋರುತ್ತಾರೆ ಎಂಬುದು ಸರಿಯಲ್ಲ. ಇದು ವ್ಯಕ್ತಿಯ ಹುಟ್ಟಿನಿಂದಲೇ ಬಂದ ಗುಣವಾಗಿರುತ್ತದೆ. ಇದಕ್ಕೆ ಹಾಸ್ಟೆಲ್, ಡೇಟಿಂಗ್ ಆ್ಯಪ್ ಅಥವಾ ಅವರ ಸ್ನೇಹಿತರನ್ನು ದೂಷಿಸಲು ಸಾಧ್ಯವಿಲ್ಲ. ಸಿಗರೇಟ್, ತಂಬಾಕು ಮತ್ತಿತರ ಅಭ್ಯಾಸಗಳಂತೆ ಲೈಂಗಿಕ ಆಸಕ್ತಿಯು ಸಹವಾಸದಿಂದ ಬರುವಂಥದ್ದಲ್ಲ. ಇದೊಂದು ವ್ಯಸನವೂ ಅಲ್ಲ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಕೆಲವು ಮಕ್ಕಳು ಹುಟ್ಟಿನಿಂದಲೇ ಹೇಗೆ ಬಲಗೈಗಿಂತಲೂ ಎಡಗೈಯನ್ನು ಹೆಚ್ಚು ಬಳಸುತ್ತಾರೋ, ಅದೇರೀತಿ ಕೆಲ ವ್ಯಕ್ತಿಗಳು ಹುಟ್ಟಿನಿಂದಲೇ ಅನ್ಯಲಿಂಗದ ವ್ಯಕ್ತಿಗಳಿಗಿಂತ ತಮ್ಮದೇ ಲಿಂಗದ ವ್ಯಕ್ತಿಗಳ ಬಗ್ಗೆ ಲೈಂಗಿಕ ಆಸಕ್ತಿ ವಹಿಸುತ್ತಾರೆ. ಇನ್ನು ಕೆಲವರಲ್ಲಿ ಸ್ತ್ರೀ ಪುರುಷರಿಬ್ಬರ ಮೇಲೂ ಲೈಂಗಿಕ ಆಸಕ್ತಿ ಇರುತ್ತದೆ. ಇದನ್ನು ನಾವು ಪುರುಷರಲ್ಲಿ ಮಾತ್ರವಲ್ಲದೆ, ಮಹಿಳೆಯರಲ್ಲೂ ಕಾಣಬಹುದು. ಇಂತಹ ಅನೇಕ ಉದಾಹರಣೆಗಳು ಹಿಂದೂ ಪುರಾಣಗಳಲ್ಲೂ ಇವೆ. ಮನೋವೈದ್ಯಕೀಯ ದೃಷ್ಟಿಕೋನದಲ್ಲಿ ಇದು ನೈಸರ್ಗಿಕವೆಂದು ಎಲ್ಲ ಸಂಶೋಧನಾ ಪತ್ರಿಕೆಗಳು ವಿವರಿಸುತ್ತವೆ’ ಎಂದು ಅವರು ತಿಳಿಸಿದ್ದಾರೆ.

‘ಇನ್ನು ಎಚ್ಐವಿ ಎಂಬುದು ಪುರುಷ ಮತ್ತು ಸ್ತ್ರೀಯರಲ್ಲಿ ಯಾರಿಗೆ ಬೇಕಾದರೂ ಲೈಂಗಿಕ ಮೂಲದಿಂದ ತಗಲುವ ಸೋಂಕಾಗಿದೆ. ದೇಶದಲ್ಲಿರುವ ಲಕ್ಷಾಂತರ ಸಂಖ್ಯೆಯ ಸೋಂಕಿತರೆಲ್ಲರೂ ‘ಸಮ ಲೈಂಗಿಕ ಆಸಕ್ತರಾಗಿರಲು ಸಾಧ್ಯವಿಲ್ಲ’ ಎಂದಿದ್ದಾರೆ.

‘ಒಬ್ಬ ಪುರುಷ ಮತ್ತೊಬ್ಬ ಪುರುಷ ಸಂಗಾತಿಯನ್ನು ಪಡೆಯುವುದು ಮಹಿಳಾ ಸಂಗಾತಿಯನ್ನು ಪಡೆಯಲು ಆಗುವ ಖರ್ಚಿಗಿಂತಲೂ ಕಡಿಮೆ. ಆದ್ದರಿಂದ ಯುವಕರು ಇದರತ್ತ ಮುಖ ಮಾಡುತ್ತಾರೆ ಎಂಬುದೂ ಸರಿಯಲ್ಲ. ಕೋಟ್ಯಧಿಪತಿಗಳಾದ ಕೆಲವರು ‘ಗೇ’ ಆಗಿರಲು ಅವರಿಗೆ ಹುಟ್ಟಿನಿಂದ ಬಂದ ಆಸಕ್ತಿ ಕಾರಣವೇ ಹೊರತು, ಯಾವುದೇ ರೀತಿಯ ಪ್ರಲೋಭನೆಯಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಗೇ’ ಸಮುದಾಯದಲ್ಲಿ ಖಿನ್ನತೆ, ಆತ್ಮಹತ್ಯೆ ಇತ್ಯಾದಿ ಸಮಸ್ಯೆಗಳು ಪ್ರಮುಖವಾಗಿ ಕಾಣಸಿಗುತ್ತವೆ. ಸಮಾಜದ ದೂಷಣೆ, ತಮ್ಮದೇ ಲಿಂಗದ ವ್ಯಕ್ತಿಗಳ ಬಗ್ಗೆ ಲೈಂಗಿಕ ಆಸಕ್ತಿ ಹೊಂದಿರುವವರ ಪಾಲಕರು ಮದುವೆಯಾಗುವಂತೆ ಅವರ ಮೇಲೆ ಹಾಕುವ ಒತ್ತಡ ಇದಕ್ಕೆ ಕಾರಣ. ಸಮಾಜದಲ್ಲಿ ಇದು ನೈಸರ್ಗಿಕವೆಂಬ ತಿಳಿವಳಿಕೆ ಇಲ್ಲದಿರುವುದು ಮತ್ತು ತಪ್ಪು ಮಾಹಿತಿಯು ಈ ಸಮುದಾಯದ ಮಾನಸಿಕ ಆರೋಗ್ಯವನ್ನು ಮತ್ತಷ್ಟು ಕುಗ್ಗಿಸುತ್ತದೆ. ಸಾರ್ವಜನಿಕರಿಗೆ ಈ ಕುರಿತು ಸರಿಯಾದ ಮಾಹಿತಿ ನೀಡುವ ಅವಶ್ಯಕತೆಯೂ ಇದೆ. ಸಮ ಲೈಂಗಿಕ ಮಕ್ಕಳನ್ನು ದೂಷಿಸುವುದು, ಅವರ ಮೇಲೆ ಒತ್ತಡ ಹೇರುವುದು, ಅವರಿಗೆ ಕಿರುಕುಳ ನೀಡುವುದನ್ನು ಮಾಡದೆ, ಅವರೊಂದಿಗೆ ಮಾತನಾಡಿ ಅವರ ಆಸಕ್ತಿಯನ್ನು ಒಪ್ಪಿಕೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ಸಂದೇಹಗಳಿದ್ದರೆ ಮನಃಶಾಸ್ತ್ರಜ್ಞರೊಂದಿಗೆ ಚರ್ಚಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-43-1101610121

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.