ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರನ್ನು ಚೆನ್ನಾಗಿ ಕುಡಿಯುತ್ತೇನೆ. ದೇಹದ ತೂಕ ಕಳೆದುಕೊಳ್ಳುವ ಸಲುವಾಗಿ ಆಗಾಗ್ಗೆ ಪಂಚಕರ್ಮ ಕ್ರಿಯೆಗಳನ್ನು ಖುದ್ದು ಮಾಡಿಕೊಳ್ಳುತ್ತೇನೆ. ಅದರ ಅನುಸಾರ, ಆ ಕ್ರಿಯೆಗೆ ಸಂಬಂಧಪಟ್ಟ ಹಾಗೆ ನನ್ನ ಡಯೆಟ್ ಇರುತ್ತದೆ.

ನನ್ನ ದಿನ ಶುರುವಾಗುವುದೇ ಸಕ್ಕರೆರಹಿತ ಕಾಫಿಯಿಂದ. ಸಕ್ಕರೆಯನ್ನು ಸಂಪೂರ್ಣವಾಗಿ ತೊರೆದಿದ್ದೇನೆ. ಸಿಹಿಯ ತಹತಹ ಉಂಟಾದಾಗ ವಿರಳವಾಗಿ ಕಲ್ಲುಸಕ್ಕರೆಯನ್ನು ಬಳಸುತ್ತೇನೆ. ನನ್ನ ಪ್ರಕಾರ, ಸೌಂದರ್ಯ ಎಂಬುದು ಸಹಜವಾಗಿ ಇರುವಂತಹದ್ದು. ನಾವು ಎಷ್ಟು ಸಹಜವಾಗಿ ಇರುತ್ತೇವೆಯೋ ಅಷ್ಟರಮಟ್ಟಿಗೆ ಆರೋಗ್ಯವಾಗಿ ಇರುತ್ತೇವೆ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ.

ಇನ್ನು ವ್ಯಾಯಾಮ ಎಂಬುದು ಆರೋಗ್ಯಯುತ ಜೀವನಶೈಲಿಯ ಭಾಗ. ವ್ಯಾಯಾಮ ಸರಿಯಾಗಿ ಇದ್ದಾಗಲೂ ಚರ್ಮ ಹಾಗೂ ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ. ಹಾಗಾಗಿ ವ್ಯಾಯಾಮಗಳ ಸ್ವರೂಪವನ್ನು ಆಗಾಗ್ಗೆ ಬದಲಾಯಿಸಿ, ಅದಕ್ಕೆ ತಕ್ಕಂತೆ ನನ್ನನ್ನು ಒಗ್ಗಿಸಿಕೊಂಡಿದ್ದೇನೆ.

ಸಾಮಾನ್ಯವಾಗಿ 22 ದಿನಗಳ ವ್ಯಾಯಾಮ ಸ್ವರೂಪದಲ್ಲಿ ವಾರ್ಮ್ ಅಪ್ಗಾಗಿ ಯೋಗ ಮಾಡುತ್ತೇನೆ. ನಂತರ ಒಂದು ವಾರ ಓಟ ಇರುತ್ತದೆ. ಏಳು ದಿನಗಳಲ್ಲಿ 100 ಕಿ.ಮೀ ಎಂಬ ಸವಾಲನ್ನು ನನಗೆ ನಾನೇ ಹಾಕಿಕೊಳ್ಳುತ್ತೇನೆ. ಉಳಿದಂತೆ ಸೂರ್ಯನಮಸ್ಕಾರ, ಬೆಟ್ಟ ಹತ್ತುವುದು ಸೇರಿದಂತೆ ಹಲವು ಬಗೆಯ ವ್ಯಾಯಾಮಗಳು ಇರುತ್ತವೆ.

ಪಂಚಕರ್ಮ ಕ್ರಿಯೆ ಮಾಡುವಾಗ ಡಯೆಟ್ ಇರುತ್ತದೆ. ಉಳಿದಂತೆ ಯಾವಾಗ ಏನು ತಿನ್ನಬೇಕೋ ಅದನ್ನು ಹೊಟ್ಟೆ ತುಂಬಾ ತಿನ್ನುತ್ತೇನೆ. ಮೂರು ದಿನ ಪೂರ್ಣ ಪ್ರಮಾಣದಲ್ಲಿ ಸಲಾಡ್ ತಿನ್ನುತ್ತೇನೆ. ಸಂಪೂರ್ಣವಾಗಿ ಕಾರ್ಬೊಹೈಡ್ರೇಟ್ ಇರುವ ಆಹಾರಗಳನ್ನು ವರ್ಜಿಸುತ್ತೇನೆ. ಮೂರು ದಿನ ದ್ರವಾಹಾರ ತೆಗೆದುಕೊಳ್ಳುತ್ತೇನೆ. ಹೊಟ್ಟೆ ಶುದ್ಧಿಗಾಗಿ ಒಂದು ವಾರ ಎನಿಮಾ ಅಥವಾ ವಾಮನ ಮಾಡಿಕೊಳ್ಳುತ್ತೇನೆ. ಸಾಮಾನ್ಯವಾಗಿ ತಿಂಗಳಲ್ಲಿ ಇಪ್ಪತ್ತೈದು ದಿನಗಳನ್ನು ಇದಕ್ಕಾಗಿಯೇ ಮೀಸಲಿಡುತ್ತೇನೆ. ಇದರ ಜತೆಗೆ ಕಣ್ಣು, ಮೂಗಿನ ಶುದ್ಧೀಕರಣಕ್ಕಾಗಿ ರಬ್ಬರ್ ನೇತಿ ಹಾಗೂ ಬಟ್ಟೆ ನೇತಿ ಮಾಡಿಕೊಳ್ಳುತ್ತೇನೆ.

ಮುಖಕ್ಕೆ ಚೆನ್ನಾಗಿ ಹರಳೆಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳುತ್ತೇನೆ. ನನ್ನ ಚರ್ಮದ ಆರೋಗ್ಯಕ್ಕೆ ಹರಳೆಣ್ಣೆ ಹೊಂದುತ್ತದೆ. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಕೊಬ್ಬರಿಎಣ್ಣೆಯನ್ನು ಕೂದಲಿಗೆ ಹಚ್ಚಿದರೆ, ಹರಳೆಣ್ಣೆಯನ್ನು ನೆತ್ತಿಗೆ ಹಾಕಿ ಚೆನ್ನಾಗಿ ಬಡಿಯುತ್ತೇನೆ. ಇದರ ಜತೆಗೆ ನಾಭಿ ಹಾಗೂ ಅಂಗಾಲಿಗೂ ಹರಳೆಣ್ಣೆಯನ್ನು ಹಚ್ಚುತ್ತೇನೆ. ಕೆಲವೊಮ್ಮೆ ಬಿಸಿನೀರಿಗೆ ಹರಳೆಣ್ಣೆಯನ್ನು ಹಾಕಿಕೊಂಡು ಕುಡಿಯುತ್ತೇನೆ. ಇದು ಬಿಟ್ಟರೆ ಮುಖಕ್ಕೆ ಫೇರ್ನೆಸ್ ಅಥವಾ ಫೌಂಡೇಷನ್ ಸೇರಿದಂತೆ ಯಾವುದೇ ಕ್ರೀಂ ಬಳಸುವುದಿಲ್ಲ. ಕುಂಕುಮಾದಿ ಲೇಪಂ ಎಂಬ ಕ್ರೀಂ ಅನ್ನು ಬಳಸಿದರೆ ನನ್ನ ಮೇಕಪ್ ಮುಗಿದಂತೆ.

ಕೂದಲಿನ ಆರೈಕೆಗೆ ನಿರ್ದಿಷ್ಟವಾಗಿ ಏನೂ ಮಾಡುವುದಿಲ್ಲ. ಆಗಾಗ್ಗೆ ಕೂದಲಿಗೆ ಕತ್ತರಿ ಹಾಕಿಸುತ್ತೇನೆ. ಅಭ್ಯಂಗಕ್ಕೆ ಹೆಚ್ಚು ಒತ್ತು ಕೊಡುತ್ತೇನೆ. ತಿಂಗಳಲ್ಲಿ ಒಮ್ಮೆಯಾದರೂ ಅಭ್ಯಂಗ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.