ಹೊರ್ಮುಜ್ ಜಲಸಂಧಿಯ ಎರಡೂ ತುದಿಗಳಲ್ಲಿ ತೈಲ ಹೊತ್ತ ನೂರಾರು ಟ್ಯಾಂಕರ್ಗಳು ಸ್ಥಗಿತಗೊಂಡಿವೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತಿಯಾಗಿ ಈ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ಇದರಿಂದಾಗಿ ತೈಲ ಬೆಲೆ ಏರಿಕೆಯಾಗಿ ಜಾಗತಿಕ ಆರ್ಥಿಕತೆ ತಲ್ಲಣಗೊಂಡಿದೆ. ಯುದ್ಧದ ಬಿಸಿ ಜನಸಾಮಾನ್ಯರ ಅಡುಗೆಮನೆಗೆ ತಟ್ಟಿದೆ.

ಯಾವುದಾದರೊಂದು ರೀತಿಯಲ್ಲಿ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ಇರಾನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಅಥವಾ ದೀರ್ಘಕಾಲೀನ ಸೇನಾ ಕಾರ್ಯಾಚರಣೆಯಿಂದಲ್ಲದೆ ಹೊರ್ಮುಜ್ ಮುಕ್ತಗೊಳಿಸಾಲು ಅಸಾಧ್ಯ ಎನ್ನುವುದು ತಜ್ಞರ ಅಭಿಫ್ರಾಯ. ಎರಡನೇ ಆಯ್ಕೆಯು ಭಾರಿ ಅಪಾಯಕಾರಿ ಮಾತ್ರವಲ್ಲದೆ, ಇಡೀ ವಿಶ್ವವನ್ನೇ ಅನಿಶ್ಚಿತತೆಗೆ ದೂಡುವ ದುಸ್ಸಾಹಸ ಅದು.

ಹೇಗಾದರೂ ಮಾಡಿ ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುತ್ತೇವೆ ಎಂದು ಟ್ರಂಪ್ ಬೆದರಿಸಿದರೂ, ಅದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಕಾರಣಗಳು ಹಲವು.
.ಹೊರ್ಮುಜ್ನಲ್ಲಿ ಹಡಗುಯಾನ ಅಡಚಣೆಗೆ ಯುದ್ಧ ಮಾತ್ರವಲ್ಲ, ವಿಮಾ ಕಂಪನಿಗಳೂ ಕಾರಣ.
ಇರಾನ್ಗೆ ಭೌಗೋಳಿಕತೆಯೇ ವರದಾನ

ಈ ಜಲಸಂಧಿಯು ಕಿರಿದಾಗಿದ್ದು, ಹೆಚ್ಚು ಆಳವೂ ಇಲ್ಲ. ಜೊತೆಗೆ ಇರಾನ್ನ ಕರಾವಳಿ ಶ್ರೇಣಿಯು ಪರ್ವತಮಯವಾಗಿದೆ. ಈ ಕರಾವಳಿಯ ಕೆಲವೇ ಮೈಲಿ ಅಂತರದಲ್ಲಿ ಹಡಗುಗಳು ಸಂಚರಿಸಬೇಕು. ಈ ಭೌಗೋಳಿಕತೆಯು ‘ಅಸಮಾನವಾದ ಯದ್ಧತಂತ್ರ'ಕ್ಕೆ (Asymmetric warfare tactics) ಪೂರಕವಾಗಿದೆ. ಅಲ್ಲದೆ ಶತ್ರುಗಳು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯವಾಗದ ಶಸ್ತ್ರಾಸ್ತ್ರಗಳನ್ನು ಇರಾನ್ ಬಳಸುತ್ತಿದೆ. ಅಂದಹಾಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಇರಾನ್ ಬಳಸುತ್ತಿಲ್ಲ. ಭೌಗೋಳಿಕತೆ ಪೂರಕವಾಗಿರುವುದರಿಂದ ಸಣ್ಣ ಪ್ರಮಾಣ ಶಸ್ತ್ರಗಳು ಇರಾನ್ ಸಾಕು. ‘ಭೌಗೋಳಿಕತೆಯನ್ನು ತಮ್ಮ ಅನುಕೂಲಕಕ್ಕೆ ತಕ್ಕಂತೆ ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಇರಾನಿಯನ್ನರಿಗೆ ಸಾಕಷ್ಟು ಜ್ಞಾನ ಇದೆ. ಅದರ ಬಗ್ಗೆ ಭಾರಿ ಸಂಶೋಧನೆಯನ್ನೂ ಅವರು ಮಾಡಿದ್ದಾರೆ’ ಎನ್ನುವುದು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೆಸರ್ ಕೈಟ್ಲಿನ್ ತಲ್ಮಡ್ಜ್ ಅವರ ಮಾತು.

ಇರಾನ್ ಬಳಸುವ ಶಸ್ತ್ರಾಸ್ತ್ರಗಳು ಗಾತ್ರದಲ್ಲಿ ಸಣ್ಣದಾಗಿರುವುದರಿಂದ, ಅವುಗಳನ್ನು ಬೆಟ್ಟದ ಅಂಚುಗಳು, ಗುಹೆಗಳು ಮತ್ತು ಸುರಂಗಗಳಲ್ಲಿ ಅಡಗಿಸಿಡುವುದು ಸುಲಭ. ಅಗತ್ಯ ಸಂದರ್ಭದಲ್ಲಿ ಅವುಗಳನ್ನು ಕರಾವಳಿಯ ಉದ್ದಕ್ಕೂ ಹತ್ತಿರದ ವ್ಯಾಪ್ತಿಯಲ್ಲಿ ನಿಯೋಜನೆ ಮಾಡುವುದು ಸಲೀಸು. ‘ಜಲಸಂಧಿ ಅತ್ಯಂತ ಕಿರಿದಾಗಿರುವುದು ಹಾಗೂ ತನಗೆ ಸಮೀಪ ಇರುವುದು ಇರಾನ್ಗೆ ಬಹುದೊಡ್ಡ ಲಾಭ’ ಎಂದು ಎಂದು ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯ ನ್ಯಾಷನಲ್ ಸೆಕ್ಯುರಿಟಿ ಕಾಲೇಜಿನ ಮಾಜಿ ನೌಕಾಪಡೆ ಅಧಿಕಾರಿ ಜೆನ್ನಿಫರ್ ಪಾರ್ಕರ್ ಅಭಿಪ್ರಾಯಪಡುತ್ತಾರೆ.

‘ಅಲ್ಲಿ ದಾಳಿಗೆ ಒಳಗಾಗುವ ಹಡಗುಗಳಿಗೆ ಪ್ರತಿದಾಳಿ ನಡೆಸಲು ಹೆಚ್ಚಿನ ಸಮಯ ಸಿಗುವುದಿಲ್ಲ. ಕ್ಷಿಪಣಿ ಅಥವಾ ಡ್ರೋನ್ ದಾಳಿಯನ್ನು ಪತ್ತೆ ಮಾಡಿ, ಅದನ್ನು ಹೊಡೆದುರುಳಿಸಲು ಕೇವಲ ಕೆಲವೇ ನಿಮಿಷಗಳ ಕಾಲಾವಕಾಶ ಮಾತ್ರ ಇರುತ್ತದೆ’ ಎಂದು ಪಾರ್ಕರ್ ತಿಳಿಸಿದ್ದಾರೆ.
.ಇಂಧನ ಮೂಲಸೌಕರ್ಯಗಳ ನಾಶಮಾಡುವ ಟ್ರಂಪ್ ಬೆದರಿಕೆಗೆ ತಕ್ಕ ಪ್ರತ್ಯುತ್ತರ: ಇರಾನ್.
ಇರಾನ್ನ ಮಿಲಿಟರಿ ಶಕ್ತಿ

ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಕುರಿತು ಟ್ರಂಪ್ ಅವರಿಗೆ ಭಿನ್ನ ಹೇಳಿಕೆಗಳು ಬಂದಿವೆ. ಇರಾನ್ನೊಂದಿಗೆ ಸೇರಿ ಜಂಟಿಯಾಗಿ ಜಲಸಂಧಿಯನ್ನು ನಿಯಂತ್ರಿಸುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಅದರೆ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಅವರಿಗೆ ಹೆಚ್ಚು ಒಲವು. ಸೇನಾ ಬಲದ ಮೂಲಕ ಜಲಸಂಧಿಯನ್ನು ತೆರೆಯುವ ಮೊದಲ ಹಂತವೆಂದರೆ, ಹಡಗುಗಳ ಮೇಲೆ ದಾಳಿ ಮಾಡುವ ಇರಾನ್ನ ಸಾಮರ್ಥ್ಯವನ್ನು ಕುಗ್ಗಿಸುವುದು. ಆದರೆ ಇದು ಸುಲಭದ ಮಾತಲ್ಲ. ಸಲೀಸಾಗಿದ್ದರೆ ಈ ವೇಳೆಗೆ ಅಮೆರಿಕ ಅದನ್ನು ಮಾಡಿ ಮುಗಿಸುತ್ತಿತ್ತು. ಕಡಲ ದತ್ತಾಂಶ ಸಂಸ್ಥೆಯಾದ ಕೆಪ್ಲರ್ ಪ್ರಕಾರ, ಫೆಬ್ರುವರಿ ಅಂತ್ಯದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು 17 ಹಡಗುಗಳ ಮೇಲೆ ದಾಳಿ ನಡೆದಿದೆ.

ಇರಾನ್ನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಸೇರಿ ಸಾವಿರಾರು ದಾಳಿಗಳನ್ನು ನಡೆಸಿದ್ದರೂ, ಇರಾನ್ ಮಣಿದಿಲ್ಲ. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿರುವ ಅಥವಾ ನಿಯೋಜಿಸಿರುವ ಇರಾನ್ನ ಪ್ರತಿಯೊಂದು ಸ್ಥಳವನ್ನು ಪತ್ತೆಹಚ್ಚಿ ನಾಶಪಡಿಸುವುದು ಅಸಾಧ್ಯವೇ ಸರಿ. ‘ಕ್ಷಿಪಣಿಗಳಲ್ಲಿ ಬಳಸಲಾಗುವ ಬ್ಯಾಟರಿಗಳನ್ನು ಸಂರಕ್ಷಿಸಿ ಇಡಲು ಹಲವು ಸ್ಥಳಗಳು ಇರಾನ್ ಹೊಂದಿದೆ. ಬ್ಯಾಟರಿಗಳು ಸಾಗಿಸಬಹುದಾಗಿರುವುದರಿಂದ ಅದರ ಸ್ಥಳಗಳನ್ನು ಪತ್ತೆಹಚ್ಚಿ ದಾಳಿ ನಡೆಸುವುದು ಸುಲಭದ ಮಾತಲ್ಲ’ ಎನ್ನುವುದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ನ ಹಿರಿಯ ಸಲಹೆಗಾರ ಮಾರ್ಕ್ ಎಫ್. ಕಾನ್ಸಿಯನ್ ಅವರ ಮಾತು.

ಹೊರ್ಮುಜ್ನಲ್ಲಿ ಸಂಚರಿಸುವ ಹಡಗುಗಳಿಗೆ ಬೆಂಗಾವಲು ನೀಡುವಂತೆ ಮಿತ್ರ ಪಕ್ಷಗಳಿಗೆ ಟ್ರಂಪ್ ಕರೆ ನೀಡಿದ್ದಾರೆ. ಅದರೆ ಈ ಮನವಿಯನ್ನು ಹಲವು ರಾಷ್ಟ್ರಗಳು ಪುರಸ್ಕರಿಸಿಲ್ಲ. ಒಂದು ವೇಳೆ ಬೆಂಗಾವಲು ನೀಡುವ ಪರಿಸ್ಥಿತಿ ಬಂದರೆ ಅದು ಭಾರಿ ಪ್ರಮಾಣದ ಸೇನಾ ಕಾರ್ಯಾಚರಣೆಯಾಗಲಿದೆ ಎಂದು ಕಾನ್ಸಿಯನ್ ಹೇಳುತ್ತಾರೆ. ಹಡಗುಗಳ ರಕ್ಷಣೆಗೆ ಯುದ್ಧನೌಕೆಗಳು, ಗಣಿಗಳನ್ನು ತೆರವುಗೊಳಿಸಲು ಮೈನ್ಸ್ವೀಪರ್ಗಳು ಮತ್ತು ವೈಮಾನಿಕ ಕಣ್ಗಾವಲು ಅಗತ್ಯ.

ಇರಾನ್ನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಎದುರಿಸಲು ಯುದ್ಧನೌಕೆಗಳನ್ನು ಕಳುಹಿಸುವುದು ಕೂಡ ಅಪಾಯಕಾರಿಯೇ. ಹಡಗುಗಳಲ್ಲಿ ಹಾಲಿ ಇರುವ ರಕ್ಷಣಾ ವ್ಯವಸ್ಥೆಗಳು ಇಂತಹ ಕಿರಿದಾದ ಜಲಸಂಧಿಯ ಹೋರಾಟಕ್ಕೆ ಪೂರ್ಣ ಪ್ರಮಾಣದಲ್ಲಿ ವಿನ್ಯಾಸಗೊಂಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸಮುದ್ರದೊಳಗೆ ಇರಿಸಿದ ಸ್ಫೋಟಕಗಳು ಕೂಡ ದೊಡ್ಡ ಅಪಾಯ. ಜಲಮಾರ್ಗದಲ್ಲಿ ಸ್ಫೋಟಕಗಳು ಇರುವ ಸಾಧ್ಯತೆ ಇದ್ದರೆ, ಯಾವ ದೇಶವೂ ತನ್ನ ಹಡಗುಗಳನ್ನು ಅಲ್ಲಿಗೆ ಕಳುಹಿಸಲು ಮುಂದಾಗುವುದಿಲ್ಲ. ಒಂದು ವೇಳೆ ಸ್ಫೋಟಕ ಸಿಡಿದು ಹಡಗುಗಳಿಗೆ ಹಾನಿಯಾದರೆ, ಅದನ್ನು ತೆರೆವುಗೊಳಿಸಲು ವಾರಗಳೇ ಬೇಕಾಗಬಹುದು.
.ಜೆರುಸಲೇಂ ಮೇಲೆ ಇರಾನ್ ಕ್ಷಿಪಣಿ ದಾಳಿ: ಪವಿತ್ರ ಸ್ಥಳಗಳ ಗುರಿ.
ನೆಲದ ಮೇಲಿನ ಅಪಾಯಗಳು

ಅಮೆರಿಕದ ನೌಕಾ ಪಡೆಗಳು ಈ ಪ್ರದೇಶದತ್ತ ಧಾವಿಸುತ್ತಿವೆ. ಹಡಗುಗಳ ಬೆಂಗಾವಲು ಪಡೆಗಳಿಗೆ ವಾಯು ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಲು ಅಥವಾ ದಾಳಿಗಳನ್ನು ನಡೆಸಲು ಅಮೆರಿಕ ಇವರನ್ನು ಬಳಸಿಕೊಳ್ಳಬಹುದು ಎಂದು ತಜ್ಞರ ಅಭಿಪ್ರಾಯ. ಆದರೆ ಇರಾನ್ ಬಳಿಕ ದೊಡ್ಡದಾದ ಭೂಸೇನೆ ಇದೆ. ಹೀಗಾಗಿ ಅಮೆರಿಕ ತನ್ನ ಕಾರ್ಯಾಚರಣೆಯನ್ನು ಕೇವಲ ದ್ವೀಪಗಳಿಗೆ ಸೀಮಿತಗೊಳಿಸಬಹುದು. ಅಮೆರಿಕ ಸೈನಿಕರ ಸಾವು ಅಥವಾ ಬಂಧನದ ಭೀತಿಯಿಂದಾಗಿ ಟ್ರಂಪ್ ಈ ಆಯ್ಕೆಯಿಂದ ಹಿಂದೆ ಸರಿಯುವ ಸಾಧ್ಯತೆಯೂ ಇದೆ.

ಹೊರ್ಮುಜ್ಗಾಗಿ ದೊಡ್ಡದಾದ ಮಿಲಿಟರಿ ಕಾರ್ಯಾಚರಣೆ ನಡೆಸಿದರೂ, ಕೇವಲ ಒಂದು ಪ್ರತಿ ದಾಳಿಯು ಇಡೀ ವಿಶ್ವಾಸವನ್ನು ಕುಸಿಯುವಂತೆ ಮಾಡಬಲ್ಲದು. ಪ್ರಸ್ತುತ, ಹೆಚ್ಚಿನ ಹಡಗು ಮಾಲೀಕರು ಈ ಜಲಸಂಧಿಯ ಮೂಲಕ ಸಂಚರಿಸುವ ಸಾಹಸ ಮಾಡುತ್ತಿಲ್ಲ. ಪರ್ಷಿಯನ್ ಕೊಲ್ಲಿಯಲ್ಲಿ ಸುಮಾರು 500 ಹಡಗುಗಳು ಸ್ಥಗಿತಗೊಂಡಿವೆ ಎಂದು ಎಸ್ ಅಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ವರದಿ ಮಾಡಿದೆ.

ಹಡಗು ಮಾಲೀಕರು ಮತ್ತು ವಿಮಾ ಕಂಪನಿಗಳಿಗೆ ಸುರಕ್ಷತೆಯ ಬಗ್ಗೆ ಸಂಪೂರ್ಣ ಭರವಸೆ ಮೂಡಿದರೆ ಮಾತ್ರ ಜಲಸಂಧಿಯಲ್ಲಿ ಸಂಚಾರ ಪುನರಾರಂಭವಾಗಲು ಸಾಧ್ಯ. ಅಲ್ಲದೆ, ಬೆಂಗಾವಲು ಪಡೆಗಳು ಏಕಕಾಲದಲ್ಲಿ ಕೇವಲ ಕೆಲವು ಹಡಗುಗಳಿಗೆ ಮಾತ್ರ ರಕ್ಷಣೆ ನೀಡಲು ಸಾಧ್ಯ. ಯುದ್ಧಕ್ಕೂ ಮೊದಲು ದಿನಕ್ಕೆ ಸುಮಾರು 80 ಟ್ಯಾಂಕರ್ಗಳು ಇಲ್ಲಿ ಸಂಚರಿಸುತ್ತಿದ್ದವು.

ಇರಾನ್ನ ಬೆದರಿಕೆ ಇರುವವರೆಗೆ ಜಲಸಂಧಿಯ ಸಂಚಾರದ ಮೇಲೆ ಅದರ ಪರಿಣಾಮ ಇದ್ದೇ ಇರುತ್ತದೆ. ಪರಿಸ್ಥಿತಿ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಬೇಕಾದರೆ ರಾಜತಾಂತ್ರಿಕ ಮತ್ತು ರಾಜಕೀಯ ಪರಿಹಾರದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

(ಆಧಾರ: ನ್ಯೂಯಾರ್ಕ್ ಟೈಮ್ಸ್ ಹಾಗೂ ವಾಷಿಂಗ್ಟನ್ ಪೋಸ್ಟ್)
.ವಿದೇಶ ವಿದ್ಯಮಾನ: ಟ್ರಂಪ್ ಕಣ್ಣು ಯಾರ ಮೇಲೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.