ಅಮೆರಿಕದ ಸಿಯಾಟಲ್ನ ಹೊರವಲಯದ ಪ್ರಯೋಗಾಲಯವೊಂದರಲ್ಲಿ, ಮನುಷ್ಯನ ಕೂದಲಿನಷ್ಟೇ ತೆಳುವಾಗಿರುವ ಲೇಸರ್ ಕಿರಣವೊಂದು ಸಣ್ಣ ಗಾಜಿನ ತುಂಡಿನ ಮೇಲೆ ಏನೋ ಸೂಕ್ಷ್ಮವಾಗಿ ಕೆತ್ತುತ್ತಿದೆ. ಬರಿಗಣ್ಣಿಗೆ ಗೋಚರವಾಗದ ಇದು, ದತ್ತಾಂಶಗಳನ್ನು ಶೇಖರಿಸುತ್ತಿದೆ ಎಂದರೆ ಅಚ್ಚರಿಯಾಗಬಹುದು. ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ದತ್ತಾಂಶ ಸಂರಕ್ಷಣೆ ದೊಡ್ಡ ಸವಾಲಾಗಿರುವಾಗ ಮೈಕ್ರೋಸಾಫ್ಟ್ 'ಪ್ರಾಜೆಕ್ಟ್ ಸಿಲಿಕಾ' ಎಂಬ ಗಾಜಿನ ತುಂಡಿನಲ್ಲಿ ಸಾವಿರಾರು ವರ್ಷ ದತ್ತಾಂಶವನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವ ಕ್ರಾಂತಿಕಾರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ನಾವು ಈಗ ಬಳಸುತ್ತಿರುವ ಹಾರ್ಡ್ ಡ್ರೈವ್, ಟೇಪ್ ರೀಲ್ ಮತ್ತು ಎಸ್ಎಸ್ಡಿ ಚಿಪ್ಗಳಿಗಿಂತ ಇದು ಸಾವಿರ ಪಟ್ಟು ಹೆಚ್ಚು ಬಾಳಿಕೆ ಬರಬಲ್ಲದು. ದತ್ತಾಂಶಗಳು ಕರಪ್ಟ್ ಆಗದೆ, ಯಾವುದೇ ಸನ್ನಿವೇಶದಲ್ಲೂ ಓದಬಲ್ಲ ಸ್ಥಿತಿಯಲ್ಲಿರುತ್ತದೆ ಎನ್ನುವುದೇ ಇದರ ವಿಶೇಷ.
.ಜಗತ್ತಿನ ಯುದ್ಧಭೂಮಿಯಲ್ಲಿ ಒಂದೇ ಹೇಷಾರವ; ಏಯ್..ಏಯ್.. AI!.
ಪ್ರಸ್ತುತ ಬಳಕೆಯಲ್ಲಿರುವ ಹಾರ್ಡ್ ಡ್ರೈವ್ಗಳು ಅಥವಾ ಆಪ್ಟಿಕಲ್ ಡಿಸ್ಕ್ಗಳು ಗರಿಷ್ಠ ಅಂದರೆ ಹತ್ತು ವರ್ಷಗಳು ಬಾಳಿಕೆ ಬರಬಹುದು. ಆದರೆ, ಪ್ರಾಜೆಕ್ಟ್ ಸಿಲಿಕಾ ಅಡಿಯಲ್ಲಿ ಸಿದ್ಧಪಡಿಸಲಾದ ಗಾಜಿನ ತುಂಡುಗಳು ಪ್ರವಾಹ, ಬೆಂಕಿ ಅಥವಾ ಅತಿ ಹೆಚ್ಚು ತಾಪಮಾನದಂತಹ ಕಠಿಣ ಪರಿಸ್ಥಿತಿಗಳಲ್ಲೂ ಡೇಟಾವನ್ನು ಹಾಗೆಯೇ ಸಾವಿರಾರು ವರ್ಷ ಉಳಿಸಿಕೊಳ್ಳಬಲ್ಲವು.

ಈ ಯೋಜನೆಯಡಿ, ಕೇವಲ 2 ಮಿಲಿಮೀಟರ್ ದಪ್ಪ ಮತ್ತು 120 ಮಿಲಿಮೀಟರ್ ಚೌಕದ ಬೋರೋಸಿಲಿಕೇಟ್ ಗಾಜಿನಲ್ಲಿ 4.8 ಟೆರಾಬೈಟ್ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಬೋರೋಸಿಲಿಕೇಟ್ ಯಾವುದೋ ವಿಶೇಷ ವಸ್ತು ಎಂದುಕೊಳ್ಳಬೇಡಿ. ನಮ್ಮ ಅಡುಗೆ ಮನೆಯಲ್ಲಿರುವ ಗಾಜಿನ ಪಾತ್ರೆಗಳು ಇದೇ ಬೋರೋ ಸಿಲಿಕೇಟ್ನಿಂದ ತಯಾರಾದವು! ಅಗ್ಗದ ದರದಲ್ಲಿ ದೊರೆಯುವ ಇದು ಸುಮಾರು 10,000 ವರ್ಷಗಳು ದತ್ತಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹಾರ್ಡ್ ಡಿಸ್ಕ್ಗಳಂತೆ ಇವುಗಳನ್ನು ಸೂಕ್ಷ್ಮವಾಗಿ ಸಂರಕ್ಷಿಸಿಡುವ ಅಗತ್ಯವೂ ಇಲ್ಲ.

ಹಾರ್ಡ್ ಡಿಸ್ಕ್ ಡ್ರೈವ್ಗೆ ಒಂದು ಸಣ್ಣ ಏಟು ಬಿದ್ದರೂ ಅಥವಾ ವಿದ್ಯುತ್ ವ್ಯತ್ಯಯವಾದರೂ ದತ್ತಾಂಶ ಶಾಶ್ವತವಾಗಿ ಅಳಿಸಿಹೋಗಬಹುದು. ಇವುಗಳ ಸರಾಸರಿ ಜೀವಿತಾವಧಿ ಕೇವಲ ಮೂರರಿಂದ ಐದು ವರ್ಷಗಳು ಮಾತ್ರ. ಸಾಲಿಡ್-ಸ್ಟೇಟ್ ಡ್ರೈವ್ಗಳು (ಎಸ್ಎಸ್ಡಿ) ಎಲೆಕ್ಟ್ರಿಕಲ್ ಚಾರ್ಜ್ ಮೂಲಕ ದತ್ತಾಂಶವನ್ನು ಸಂಗ್ರಹಿಸುತ್ತವೆ. ಇವು ವೇಗವಾಗಿದ್ದರೂ, ಒಂದೆರಡು ವರ್ಷ ವಿದ್ಯುತ್ ಸಂಪರ್ಕವಿಲ್ಲದೆ ಇಟ್ಟರೆ ಚಾರ್ಜ್ ಮತ್ತು ದತ್ತಾಂಶವನ್ನು ಕಳೆದುಕೊಳ್ಳಬಹುದು. ಮ್ಯಾಗ್ನೆಟಿಕ್ ಟೇಪ್ಗಳು ಇವೆಲ್ಲಕ್ಕಿಂತ ಉತ್ತಮವಾಗಿದ್ದರೂ, ತೇವಾಂಶ ಮತ್ತು ತಾಪಮಾನ ಬದಲಾವಣೆಯಿಂದ ದತ್ತಾಂಶಗಳಿಗೆ ತೊಂದರೆಯುಂಟಾಗಬಹುದು. ಇವು ಗರಿಷ್ಠ 30 ವರ್ಷಗಳವರೆಗೆ ಮಾತ್ರ ಬಾಳಿಕೆ ಬರಬಲ್ಲವು.
.OpenAI vs Anthropic: ಎ.ಐ ದಿಗ್ಗಜರ ಸಮರಕ್ಕೆ ಭಾರತವೇ ಅಖಾಡ, ಯಾಕಿಷ್ಟು ಮುನಿಸು?.
ವಿಶ್ವದ ಡೇಟಾ ಸೆಂಟರ್ಗಳು ಪ್ರತಿ ವರ್ಷ ಅಂದಾಜು 415 ಟೆರಾವ್ಯಾಟ್ ಗಂಟೆಗಳ ವಿದ್ಯುತ್ ಬಳಸುತ್ತವೆ. ದತ್ತಾಂಶ ಸಂಗ್ರಹಣಾ ಸಾಧನಗಳನ್ನು ತಂಪಾಗಿರಿಸಲು ಮತ್ತು ಅವುಗಳನ್ನು ಸಕ್ರಿಯವಾಗಿರಿಸಲು ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತದೆ. ಆದರೆ ಮೈಕ್ರೋಸಾಫ್ಟ್ನ ಈ ಗಾಜಿನ ದತ್ತಾಂಶ ಸಂಗ್ರಹಣೆಗೆ ವಿದ್ಯುತ್ನ ಅಗತ್ಯವಿಲ್ಲ. ಇದರ ಸಂರಕ್ಷಣೆಗೆ ಗ್ಯಾಲನ್ಗಟ್ಟಲೆ ನೀರಿನ ಅಗತ್ಯವೂ ಇಲ್ಲ. ಕ್ಲೌಡ್ ಸ್ಟೋರೇಜ್ ಮತ್ತು ಡೇಟಾ ಸೆಂಟರ್ಗಳ ವೆಚ್ಚವನ್ನು ತಗ್ಗಿಸಲು ಮತ್ತು ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಈ ಗಾಜು ಆಧಾರಿತ ಸಂಗ್ರಹಣಾ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಮಾದರಿಯ ದತ್ತಾಂಶ ಶೇಖರಣೆಯು ಡೇಟಾ ಸೆಂಟರ್ಗಳ ಕಾರ್ಬನ್ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಸಾಂಪ್ರದಾಯಿಕ ಸ್ಟೋರೇಜ್ ಸಾಧನಗಳಂತೆ ಪ್ರತಿ ಕೆಲವು ವರ್ಷಕ್ಕೊಮ್ಮೆ ದತ್ತಾಂಶವನ್ನು ಹೊಸ ಹಾರ್ಡ್ವೇರ್ಗೆ ವರ್ಗಾಯಿಸುವ ಅಗತ್ಯವಿಲ್ಲದ ಕಾರಣ, ದೀರ್ಘಕಾಲದ ವೆಚ್ಚ ಉಳಿತಾಯವಾಗುತ್ತದೆ. ಬೆಂಕಿ, ನೀರು ಅಥವಾ ವಿದ್ಯುತ್ ಕಾಂತೀಯ ಅಲೆಗಳಿಂದ ದತ್ತಾಂಶಗಳಿಗೆ ಯಾವುದೇ ಹಾನಿಯಾಗುವುದಿಲ್ಲ.

ಈ ತಂತ್ರಜ್ಞಾನದಲ್ಲಿ ದತ್ತಾಂಶಗಳನ್ನು ಸಂಗ್ರಹಿಸಲು ಫೆಮ್ಟೋಸೆಕೆಂಡ್ ಲೇಸರ್ ಬಳಸಿ ಗಾಜಿನ ಒಳಭಾಗದಲ್ಲಿ 'ವೋಕ್ಸೆಲ್' ಎಂಬ ಸೂಕ್ಷ್ಮ ಆಯಾಮದ ರಚನೆಗಳನ್ನು ಕೆತ್ತಲಾಗುತ್ತದೆ. ಲೇಸರ್ ಪಲ್ಸ್ ಮೂಲಕ ಗಾಜಿನ ರಚನೆಯನ್ನು ಮಾರ್ಪಡಿಸಿ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಈ ದತ್ತಾಂಶವನ್ನು ಓದಲು ಕಂಪ್ಯೂಟರ್ ನಿಯಂತ್ರಿತ ಸೂಕ್ಷ್ಮದರ್ಶಕಗಳನ್ನು ಬಳಸಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಗಾಜಿನಲ್ಲಿ ದಾಖಲಿಸಲಾದ ದತ್ತಾಂಶವನ್ನು ಡಿಜಿಟಲ್ ಮಾಹಿತಿಯಾಗಿ ಪರಿವರ್ತಿಸಲಾಗುತ್ತದೆ. ಲೈಬ್ರರಿ ಆಫ್ ಕಾಂಗ್ರೆಸ್ ಮತ್ತು ಇಂಟರ್ನೆಟ್ ಆರ್ಕೈವ್ನಂತಹ ಜಾಗತಿಕ ಸಂಸ್ಥೆಗಳು ತಮ್ಮ ಅಮೂಲ್ಯವಾದ ಐತಿಹಾಸಿಕ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸಲು ಈ ತಂತ್ರಜ್ಞಾನದ ಬಗ್ಗೆ ಆಸಕ್ತಿ ವಹಿಸಿವೆ.
.ಹಣಕಾಸು: ಜೆನ್ಝೀ – ಮಿಲೆನಿಯಲ್ಸ್ ತಲೆಮಾರಿನವರಿಗೆ ಚಿನ್ನವೇ ಹೂಡಿಕೆಯ ಮೊದಲ ಆಯ್ಕೆ.
ಗಾಜಿನಲ್ಲಿ ದಾಖಲಿಸಲಾದ ಈ ದತ್ತಾಂಶ 10,000 ವರ್ಷ ಬಾಳಿಕೆ ಬರುತ್ತದೆ ಎನ್ನುವುದನ್ನು ಸಾಬೀತುಪಡಿಸಲು ಮೈಕ್ರೋಸಾಫ್ಟ್ ಹಲವು ಕಠಿಣ ಪರೀಕ್ಷೆಗಳನ್ನು ನಡೆಸಿದೆ. ಅತಿ ಹೆಚ್ಚಿನ ತಾಪಮಾನದಲ್ಲಿ ಗಾಜನ್ನು ಇರಿಸಿ ಅದರ ದೀರ್ಘಕಾಲೀನ ಬಾಳಿಕೆಯನ್ನು ಅಂದಾಜಿಸಲಾಗಿದೆ. ಗಾಜಿನ ಮೇಲೆ ಗೀಚು ಬಿದ್ದರೂ ಅಥವಾ ಅದು ಸ್ವಲ್ಪ ಒಡೆದರೂ ಒಳಗಿರುವ ದತ್ತಾಂಶಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಪರೀಕ್ಷೆಗಳು ದೃಢಪಡಿಸಿವೆ. ನೀರಿನಲ್ಲಿ ಮುಳುಗಿಸಿದರೂ, ಅತಿ ಕಡಿಮೆ ಅಥವಾ ಅತಿ ಹೆಚ್ಚು ತಾಪಮಾನದದಲ್ಲಿ ಇರಿಸಿದರೂ ದತ್ತಾಂಶ ಸುರಕ್ಷಿತವಾಗಿರುತ್ತದೆ. ಅಲ್ಲದೆ, ಯಾವುದೇ ವಿಕಿರಣಗಳಿಗೂ ಇದರ ದತ್ತಾಂಶವನ್ನು ಅಳಿಸಲು ಆಗುವುದಿಲ್ಲ.

ಈ ತಂತ್ರಜ್ಞಾನದ ಪ್ರಮುಖ ಮಿತಿ ಎಂದರೆ ಗಾಜಿನಲ್ಲಿ ಒಮ್ಮೆ ಬರೆದ ದತ್ತಾಂಶವನ್ನು ಅಳಿಸಿ ಮತ್ತೆ ಬರೆಯಲು ಸಾಧ್ಯವಿಲ್ಲ. ಆದ್ದರಿಂದ ಇದು ದಿನನಿತ್ಯದ ಬಳಕೆಗೆ ಸೂಕ್ತವಾಗಿಲ್ಲ. ಶಾಶ್ವತವಾಗಿ ರಕ್ಷಿಸಿಡಬೇಕಾದ ದಾಖಲೆಗಳನ್ನು ಈ ತಂತ್ರಜ್ಞಾನದ ಮೂಲಕ ಸಂಗ್ರಹಿಸಿಡಬಹುದು. ಅಲ್ಲದೆ, ಇದರ ಫೈಲ್ ಫಾರ್ಮ್ಯಾಟ್ಗಳು ಕಾಲಾನಂತರದಲ್ಲಿ ಬದಲಾಗುವುದರಿಂದ, 10 ಸಾವಿರ ವರ್ಷಗಳ ನಂತರ ಆ ದತ್ತಾಂಶವನ್ನು ಓದಲು ಅಗತ್ಯವಾದ ಸಾಫ್ಟ್ವೇರ್ ಇರುತ್ತದೆಯೇ ಎಂಬುದು ಇನ್ನೂ ದೊಡ್ಡ ಪ್ರಶ್ನೆಯಾಗಿದೆ.

ಆಧಾರ: ನೇಚರ್ (ಪ್ರಾಜೆಕ್ಟ್ ಸಿಲಿಕಾ, 2026); ಮೈಕ್ರೋಸಾಫ್ಟ್ ರಿಸರ್ಚ್ ಬ್ಲಾಗ್
.ಅನಿವಾರ್ಯವಲ್ಲದ ಖರ್ಚಿಗೆ ಸಿಲುಕಿ ಸಾಲಗಾರರಾಗುತ್ತಿದ್ದಾರೆ ಜೆನ್-ಝೀಗಳು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.