ವಿಮಾನದಲ್ಲಿ ಹೃದಯಾಘಾತ: ವ್ಯಕ್ತಿ ಸಾವು

7

ವಿಮಾನದಲ್ಲಿ ಹೃದಯಾಘಾತ: ವ್ಯಕ್ತಿ ಸಾವು

Published:
Updated:

ವಾರಣಾಸಿ: ಸ್ಪೈಸ್‌ಜೆಟ್‌ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ವಿಮಾನ ತುರ್ತು ಭೂ ಸ್ಪರ್ಶ ಮಾಡಿತು. 

ಥಾಯ್ಲೆಂಡ್‌ ಪ್ರಜೆ ಅಟಾಬೊಟ್ ಥ್ಂಗ್ಕುಸನ್ ಹೃದಯಾಘಾತಕ್ಕೆ ಒಳಗಾದವರು. ಇವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. 

ದೆಹಲಿಯಿಂದ ಬ್ಯಾಂಕಾಕ್‌ಗೆ ಹೊರಟ್ಟಿದ್ದ ಈ ವಿಮಾನದಲ್ಲಿ 189 ಮಂದಿ ಪ್ರಯಾಣಿಕರಿದ್ದರು. ಮೃತ ವ್ಯಕ್ತಿಯ ಪತ್ನಿ, ಸಹೋದರಿ ಸೇರಿದಂತೆ ಏಳು ಮಂದಿ ಸಂಬಂಧಿಕರು ಇದೇ ವಿಮಾನದಲ್ಲಿದ್ದರು.

ಥಾಯ್‌ ರಾಯಭಾರಿಗೆ ಸುದ್ದಿ ತಲುಪಿಸಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಅನಿಲ್‌ ಕುಮಾರ್‌ ರಾಯ್‌ ತಿಳಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !