ಚೊಚ್ಚಲ ಮುಖಾಮುಖಿಯಲ್ಲಿ ಗೆಲುವು ಯಾರಿಗೆ ?

7

ಚೊಚ್ಚಲ ಮುಖಾಮುಖಿಯಲ್ಲಿ ಗೆಲುವು ಯಾರಿಗೆ ?

Published:
Updated:
ಚೊಚ್ಚಲ ಮುಖಾಮುಖಿಯಲ್ಲಿ ಗೆಲುವು ಯಾರಿಗೆ ?

ಸೇಂಟ್‌ ಪೀಟರ್ಸ್‌ಬರ್ಗ್‌ (ಎಎಫ್‌ಪಿ): ಏಷ್ಯಾದ ಫುಟ್‌ಬಾಲ್‌ ಶಕ್ತಿಕೇಂದ್ರಗಳಲ್ಲಿ ಒಂದಾಗಿರುವ ಇರಾನ್ ತಂಡ ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸುವ ವಿಶ್ವಾಸ ಹೊಂದಿದೆ.

ಕ್ರೆಸ್ಟೊವ್‌ಸ್ಕಿ ಕ್ರೀಡಾಂಗಣದಲ್ಲಿ ನಡೆಯುವ ‘ಬಿ’ ಗುಂಪಿನ ಹಣಾಹಣಿಯಲ್ಲಿ ಇರಾನ್‌ ತಂಡ ಮೊರೊಕ್ಕೊ ಸವಾಲು ಎದುರಿಸಲಿದೆ.

ಉಭಯ ತಂಡಗಳು ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.

ಇರಾನ್‌ ತಂಡ ಐದನೇ ಬಾರಿ ವಿಶ್ವಕಪ್‌ಗೆ ಅರ್ಹತೆ ಗಳಿಸಿದೆ. ಮೊರೊಕ್ಕೊ ಕೂಡಾ ಐದನೇ ಸಲ ಟೂರ್ನಿಯಲ್ಲಿ ಆಡುತ್ತಿದೆ.

ಮಸೌದ್‌ ಶೋಜಾಯಿ ಸಾರಥ್ಯದ ಇರಾನ್‌ ತಂಡ ವಿಶ್ವಕಪ್‌ನಲ್ಲಿ ಒಮ್ಮೆಯೂ ನಾಕೌಟ್ ಹಂತ ಪ್ರವೇಶಿಸಿಲ್ಲ. ಟೂರ್ನಿಯಲ್ಲಿ ಒಟ್ಟು 12 ಪಂದ್ಯಗಳನ್ನು ಆಡಿರುವ ತಂಡ ಒಂದರಲ್ಲಿ ಗೆದ್ದಿದೆ. 1998ರ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಈ ತಂಡ 2–1 ಗೋಲುಗಳಿಂದ ಅಮೆರಿಕವನ್ನು ಸೋಲಿಸಿತ್ತು.

ಕಾರ್ಲೊಸ್‌ ಕ್ವೆಯಿರೊಜ್‌ ಅವರ ಮಾರ್ಗದರ್ಶನ ಈ ತಂಡಕ್ಕಿದ್ದು ಈ ಬಾರಿ ಪರಿಣಾಮಕಾರಿ ಸಾಮರ್ಥ್ಯ ತೋರುವ ವಿಶ್ವಾಸ ಹೊಂದಿದೆ.

ಮೊರೊಕ್ಕೊ ತಂಡ ಹಿಂದಿನ ನಾಲ್ಕು ಟೂರ್ನಿಗಳ ಪೈಕಿ ಮೂರು ಟೂರ್ನಿಗಳಲ್ಲಿ ಗುಂಪು ಹಂತದಲ್ಲೇ ಹೋರಾಟ ಮುಗಿಸಿತ್ತು. 1986ರ ವಿಶ್ವಕಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ಈ ತಂಡದ ಇದುವರೆಗಿನ ಉತ್ತಮ ಸಾಧನೆಯಾಗಿದೆ.

ಆರಂಭ: ರಾತ್ರಿ 8:30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry