ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ನಿವಾರಿಸಿ ಧೈರ್ಯ ತುಂಬುವ ಜೂಡೊ

ಮಹಿಳಾ ವಿಶೇಷ
Last Updated 3 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಇವತ್ತು ಎಲ್ಲ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಹಲವು ಬಾರಿ ತೊಂದರೆಗಳಿಗೆ ಸಿಲುಕಿಕೊಳ್ಳುವ ಘಟನೆಗಳು ವರದಿಯಾಗುತ್ತಲೆ. ಆದ್ದ ರಿಂದ ಇತ್ತೀಚಿನ ದಿನಗಳಲ್ಲಿ ಸ್ವರಕ್ಷಣೆಗಾಗಿ ಸಮರ ಕಲೆಗಳ ಅಭ್ಯಾಸಕ್ಕೆ ಬಹಳಷ್ಟು ಮಹಿಳೆಯರು ಮೊರೆ ಹೋಗುತ್ತಿದ್ದಾರೆ. ಈ ಕಲೆಗಳು ಸ್ವಯಂ ರಕ್ಷಣೆಯ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವನ್ನೂ ಸದೃಢಗೊಳಿಸುತ್ತವೆ. ಫಿಟ್‌ನೆಸ್‌ಗಾಗಿಯೂ ಹಲವರು ಇವತ್ತು ಕರಾಟೆ, ಜುಡೊ, ಕುಂಗ್‌ಫೂ, ಕಳರಿಪಯಟ್ಟು ಮತ್ತಿತರ ಕಲೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

‘ಬಿಸಲು ನಾಡು’ ಕಲಬುರ್ಗಿ ಕೂಡ ಈ ವಿಷಯದಲ್ಲಿ ಹಿಂದುಳಿದಿಲ್ಲ. ಇಲ್ಲಿಯೂ ಈಗ ಜುಡೊ ಕಲೆ ಆಕರ್ಷಿಸುತ್ತಿದೆ. ಇದರಲ್ಲಿ ಆತ್ಮರಕ್ಷಣೆ, ಫಿಟ್‌ನೆಸ್ ಅಂಶಗಳು ಸಹ ಇದರಲ್ಲಿ ಹೇರಳವಾಗಿವೆ. ಇದೇ ಕಾರಣಕ್ಕಾಗಿ ಹೆಣ್ಣುಮಕ್ಕಳು ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಜೂಡೊ ಆಟದ ವಿಧಾನಗಳಲ್ಲಿಯೇ ಫಿಟ್‌ನೆಸ್‌ಗೆ ಸಹಕಾರಿಯಾದ ಅಂಶಗಳಿವೆ ಎನ್ನುವುದು ತರಬೇತುದಾರರ ಮಾತು.

ಜೂಡೊದಲ್ಲಿ ಎದುರಾಳಿಯನ್ನು ಎತ್ತಲು (ಲಿಫ್ಟ್), ಥ್ರೋ ಮಾಡಲು ಹೆಚ್ಚಿನ ಶಕ್ತಿ ಬೇಕು. ಸೆಣಸಾಡಲು ವೇಗ ಬೇಕು. ಕ್ರಿಯಾಶೀಲವಾದ ದೇಹ ಚಲನೆ ಸಹ ಮುಖ್ಯ. ಈ ಕ್ರೀಡೆಯಿಂದ ಇವುಗಳನ್ನು ಕಲಿಯುವುದರಿಂದ ಸಹಜವಾಗಿಯೇ ದೇಹ ಸದೃಢವಾಗುತ್ತದೆ ಎನ್ನುತ್ತಾರೆ ತರಬೇತುದಾರ ಅಶೋಕ್‌ ಮಲ್ಲೇಶಿ.

ಕಲಬುರ್ಗಿಯಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಜೂಡೊ ಅಭ್ಯಾಸ ಮಾಡುತ್ತಿರುವ ದೇವಶ್ರೀ ಅವರು, ವೃತ್ತಿಪರವಾಗಿ ಇದನ್ನು ತೆಗೆದುಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ಇವರಿಗೆ ಜೂಡೊ ಕ್ರೀಡೆಗಿಂತ ಆತ್ಮರಕ್ಷಣೆ, ಫಿಟ್‌ನೆಸ್‌ನಿಂದಾಗಿ ಅಚ್ಚುಮೆಚ್ಚು.

‘ಐದನೇ ತರಗತಿಯಲ್ಲಿದ್ದಾಗ ಜೂಡೊ ಆಡಲು ಆರಂಭಿಸಿದೆ. ಶಾಲೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದೆ. ಅದನ್ನು ಗಮನಿಸಿದ ಪ್ರಾಂಶು ಪಾಲರು ನನಗೆ ಜೂಡೊ ಕಲಿಯಲು ಸೂಚಿಸಿದರು. ಆರಂಭದಲ್ಲಿ ತುಂಬಾ ಕಷ್ಟ ಎನಿಸುತ್ತಿತ್ತು. ಅಭ್ಯಾಸ ಮಾಡುತ್ತಾ ಸುಲಭವಾಯಿತು. ಇದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಭಯ ನಿವಾರಣೆಯಾಗುತ್ತದೆ’ ಎಂದು ದೇವಶ್ರೀ ಹೇಳಿದರು.

ಜೂಡೊದಲ್ಲಿ ಕಲಿಯುವ ತಂತ್ರಗಾರಿಕೆಗಳು ಧೈರ್ಯ ತುಂಬುತ್ತವೆ. ಹೆಣ್ಣುಮಕ್ಕಳು ಸಾಮಾನ್ಯವಾಗಿ ಒಬ್ಬೊಬ್ಬರೇ ಓಡಾಡಲು ಹೆದರುತ್ತಾರೆ. ಚುಡಾಯಿಸಿದರೆ ಅಳುತ್ತಾರೆ. ಆದರೆ, ಈ ಕಲೆ ಕಲಿತರೆ ಧೈರ್ಯವಾಗಿ ಅವರನ್ನು ಎದುರಿಸಬಹುದು. ಎಂಥಹ ಸನ್ನಿವೇಶದಲ್ಲೂ ಪಾರಾಗಬಹುದು ಎಂದರು. ಈ ಕ್ರೀಡೆಯಲ್ಲಿ ಇಡೀ ದೇಹಕ್ಕೆ ವ್ಯಾಯಾಮ ಲಭಿಸುತ್ತದೆ. ಹೀಗಾಗಿ ನಮ್ಮ ದೇಹದ ಅಂಗಗಳು ಗಟ್ಟಿಮುಟ್ಟಾಗುತ್ತವೆ ಎಂದು ವಿವರಿಸಿದರು. ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ದೇವಶ್ರೀ ಐದು ಬಾರಿ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ಎರಡು ಬಾರಿ ಬಾರಿ ಚಿನ್ನ ಮತ್ತು ಒಂದು ಬಾರಿ ಬೆಳ್ಳಿ ಜಯಿಸಿದ್ದಾರೆ.

ಎಲ್‌ಎಲ್‌ಬಿ ಓದುತ್ತಿರುವ ನೀಲು ಫರ್ಹಾನಾಜ್ ಅವರು ಕಳೆದ ಎರಡು ತಿಂಗಳಿನಿಂದ ಆತ್ಮರಕ್ಷಣೆಗಾಗಿ ಜೂಡೊ ಅಭ್ಯಾಸ ಮಾಡುತ್ತಿದ್ದಾರೆ.

ಹೆಣ್ಣುಮಕ್ಕಳಲ್ಲಿ ಸಹಜವಾಗಿ ಅಂಜಿಕೆ ಇರುತ್ತದೆ. ಇದನ್ನು ಕಲಿಯು ವುದರಿಂದ ಅಂಜಿಕೆ ದೂರವಾಗುವ ಜತೆಗೆ, ನಮ್ಮ ಸಾಮರ್ಥ್ಯ ವೃದ್ಧಿಯಾಗು ತ್ತದೆ. ಇಡೀ ದಿನ ಲವಲವಿಕೆಯಿಂದ ಇರಬಹುದು. ಓದಿನಲ್ಲಿಯೂ ಏಕಾಗ್ರತೆಯಿಂದ ತೊಡಗಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT