7
ಎರಿಕ್ಸನ್, ಜಿಡಿನಾಕ್ ತಲಾ ಒಂದು ಗೋಲು

ಡ್ರಾ ಪಂದ್ಯದಲ್ಲಿ ಡೆನ್ಮಾರ್ಕ್‌–ಆಸ್ಟ್ರೇಲಿಯಾ

Published:
Updated:

ಸಮಾರಾ: ಆಸ್ಟ್ರೇಲಿಯಾ ತಂಡದ ನಾಯಕ ಮೈಲ್ ಜಿಡಿನಾಕ್ ಅವರು ಪಂದ್ಯದ ಎರಡನೇ ಅವಧಿಯಲ್ಲಿ ಹೊಡೆದ ಗೋಲಿನಿಂದಾಗಿ ಡೆನ್ಮಾರ್ಕ್ ತಂಡದ ಗೆಲುವಿನ ಕನಸು ನನಸಾಗಲಿಲ್ಲ. ಗುರುವಾರ ರಾತ್ರಿ ಇಲ್ಲಿ ನಡೆದ  ಸಿ ಗುಂಪಿನ ಪಂದ್ಯವು 1–1 ರಿಂದ ಡ್ರಾ ಆಯಿತು.

ಪಂದ್ಯದ ಏಳನೇ ನಿಮಿಷದಲ್ಲಿ ಕ್ರಿಸ್ಟಿಯನ್ ಎರಿಕ್ಸನ್ ಅವರು ಗಳಿಸಿದ ಫೀಲ್ಡ್ ಗೋಲಿನಿಂದ ಡೆನ್ಮಾರ್ಕ್ ತಂಡವು 1–0 ಮುನ್ನಡೆ ಗಳಿಸಿತು. ನಂತರ ಪುಟಿದೆದ್ದ ಆಸ್ಟ್ರೇಲಿಯಾ ತಂಡವು ಹಲವು ಬಾರಿ ಗೋಲುಪೆಟ್ಟಿಗೆಯತ್ತ ದಾಳಿಯಿಟ್ಟಿತು. ಆದರೆ ಡೆನ್ಮಾರ್ಕ್ ರಕ್ಷಣಾ ಪಡೆಯ ಚಾಕಚಕ್ಯತೆಯ ಆಟವೇ ಮೇಲುಗೈ ಸಾಧಿಸಿತು.

ವಿರಾಮದ ನಂತರದ ಅವಧಿಯಲ್ಲಿ ಆಸ್ಟ್ರೇಲಿಯಾ ಮಿಂಚಿತು. 38ನೇ ನಿಮಿಷದಲ್ಲಿ  ವಿಡಿಯೊ ಅಸಿಸ್ಟೆಂಟ್ ರೆಫರಲ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪೆನಾಲ್ಟಿ ಅವಕಾಶ ದೊರೆಯಿತು. ಜೆಡಿನಾಕ್ ಅವರ ಚುರುಕಾದ ಕಿಕ್‌ನಿಂದ ಚೆಂಡು ಗೋಲುಪೆಟ್ಟಿಗೆ ಸೇರಿತು.

ನಂತರದ ಅವಧಿಯಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಇದರಿಂದಾಗಿ  ಗೋಲುಗಳು ದಾಖಲಾಗಲಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !