ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಕೊವಿಚ್‌ ಅಗ್ರಪಟ್ಟ ಅಭಾದಿತ

ಟೆನಿಸ್‌ ವಿಶ್ವ ಕ್ರಮಾಂಕ ಪಟ್ಟಿ: ಅಗ್ರಸ್ಥಾನದಲ್ಲಿ ಮುಂದುವರಿದ ಆ್ಯಶ್ಲೆ ಬಾರ್ಟಿ
Last Updated 15 ಜುಲೈ 2019, 17:37 IST
ಅಕ್ಷರ ಗಾತ್ರ

ಪ್ಯಾರಿಸ್‌ : ವಿಂಬಲ್ಡನ್‌ ಟೆನಿಸ್ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ ನಲ್ಲಿ ಸೋತರೂ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

ಫ್ರೆಂಚ್‌ ಓಪನ್‌ ಚಾಂಪಿಯನ್‌ ಬಾರ್ಟಿ ಅವರು ವಿಂಬಲ್ಡನ್‌ ಟೂರ್ನಿ ಯಲ್ಲಿ ಅಮೆರಿಕದ ಆಲಿಸನ್‌ ರಿಸ್ಕೆ ಎದುರು ಮುಗ್ಗರಿಸಿದ್ದರು.

ಕ್ರಮವಾಗಿ 1, 2 ಮತ್ತು 3ನೇ ಕ್ರಮಾಂಕದಲ್ಲಿರುವ ಬಾರ್ಟಿ, ನವೊಮಿ ಒಸಾಕ ಹಾಗೂ ಕರೋಲಿನಾ ಪ್ಲಿಸ್ಕೊವಾ ಅವರ ಸ್ಥಾನದಲ್ಲಿ ಬದಲಾವಣೆಯಾಗಿಲ್ಲ.

ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದ ಸಿಮೊನಾ ಹಲೆಪ್‌ ಅವರು ಮೂರು ಸ್ಥಾನ ಬಡ್ತಿ ಪಡೆದು ನಾಲ್ಕನೇ ಸ್ಥಾನ ತಲುಪಿದರು. ಸೆರೆನಾ ವಿಲಿಯಮ್ಸ್ ಅವರು ಒಂದು ಸ್ಥಾನ ಏರಿಕೆ ಕಂಡು 9ನೇ ಕ್ರಮಾಂಕದಲ್ಲಿದ್ದಾರೆ.

ಸ್ಥಾನ ಭದ್ರಪಡಿಸಿಕೊಂಡ ಜೊಕೊವಿಚ್‌: ವಿಂಬಲ್ಡನ್‌ ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮೊದಲ ಕ್ರಮಾಂಕವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ. 32 ವರ್ಷದ ಆಟಗಾರ ಜೊಕೊವಿಚ್‌ ಅವರು ಭಾನುವಾರ ನಡೆದ ವಿಂಬಲ್ಡನ್‌ ಫೈನಲ್‌ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ ದಿಗ್ಗಜ ಆಟಗಾರ ರೋಜರ್‌ ಫೆಡರರ್‌ ಅವರನ್ನು ಸೋಲಿಸಿದ್ದರು.

ರಫೆಲ್‌ ನಡಾಲ್‌ ಹಾಗೂ ರೋಜರ್‌ ಫೆಡರರ್‌ ಅವರು ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಸೆಮಿಫೈನಲ್‌ ತಲುಪಿದ್ದ ರಾಬರ್ಟೊ ಬಾಟಿಸ್ಟಾ ಅಗುಟ್‌ ಅವರು ಅತಿ ಹೆಚ್ಚು ಸ್ಥಾನ ಏರಿಕೆ ಕಂಡ ಆಟಗಾರ. ಒಂಭತ್ತು ಸ್ಥಾನ ಬಡ್ತಿ ಪಡೆದಿರುವ ಅವರು ಸದ್ಯ 13ನೇ ಸ್ಥಾನದಲ್ಲಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಜೊಕೊವಿಚ್‌ ಎದುರು ನಿರಾಸೆ ಕಂಡಿದ್ದ ಡೇವಿಡ್‌ ಗಫಿನ್‌ ಅವರು ಐದು ಸ್ಥಾನ ಏರಿಕೆ ಕಂಡು 18ನೇ ಸ್ಥಾನ ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT