ಬುಧವಾರ, ಸೆಪ್ಟೆಂಬರ್ 22, 2021
28 °C
ರಾಜ್ಯ ‘ಬಿ’ ಡಿವಿಷನ್ ಲೀಗ್‌ ಬ್ಯಾಸ್ಕೆಟ್‌ಬಾಲ್

ಬ್ಯಾಸ್ಕೆಟ್‌ಬಾಲ್: ಫೈನಲ್‌ಗೆ ಎಂಇಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸನಿಲ್ ಸಾಸಿ ಗಳಿಸಿದ 80 ಪಾಯಿಂಟ್ಸ್ ಬಲದಿಂದ ಎಂಇಜಿ ತಂಡವು ಎಂ.ಸಿ.ಶ್ರೀನಿವಾಸ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಬಿ’ ಡಿವಿಷನ್ ಲೀಗ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಫೈನಲ್‌ ತಲುಪಿದೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆ ತಂಡವು 80–39ರಿಂದ ಕೆಎಸ್‌ಪಿ ತಂಡವನ್ನು ಪರಾಭವಗೊಳಿಸಿತು.

ವಿಜೇತ ತಂಡದ ಪರ ನಿತಿನ್ ಬಿಜು 13 ಪಾಯಿಂಟ್ಸ್ ಕಲೆಹಾಕಿದರು. ಕೆಎಸ್‌ಪಿ ತಂಡದ ಮನೋಜ್‌ 16 ಪಾಯಿಂಟ್ಸ್ ಕಲೆಹಾಕಿದರು.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಎಂ.ಎನ್‌.ಕೆ.ರಾವ್‌ ಪಾರ್ಕ್‌ ಬಿಸಿ ತಂಡವು 76–60ರಿಂದ ಪ್ರೊಟೆಕ್ ಅಸೋಸಿಯೇಷನ್‌ ಮೈಸೂರು ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತು.

ಮಂಗಳೂರು ಜಯಭೇರಿ: ಪ್ರೊ. ಪರಪ್ಪ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ‘ಎ’ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಮಂಗಳೂರು ಬಿಬಿಸಿ ತಂಡವು 64–48ರಿಂದ ಬೀಗಲ್ಸ್ ಬಿಬಿಸಿ ಎದುರು ಗೆದ್ದಿತು. ವಿಜೇತ ತಂಡದ ಶಶಾಂಕ್ ರೈ 21, ರಜತ್‌ 12 ಪಾಯಿಂಟ್ಸ್ ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಡಿವೈಇಎಸ್‌ ಬೆಂಗಳೂರು ತಂಡವು 79–47ರಿಂದ ರೈಸಿಂಗ್ ಸ್ಟಾರ್ ಮೈಸೂರು ತಂಡವನ್ನು ಸೋಲಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು