ಗುರುವಾರ , ಸೆಪ್ಟೆಂಬರ್ 19, 2019
29 °C

ನೊರ್ಜೆ ಸ್ಥಾನಕ್ಕೆ ಕ್ರಿಸ್‌ ಮಾರಿಸ್

Published:
Updated:
Prajavani

ಕೇಪ್‌ಟೌನ್‌(ರ‍್ಯೂಟರ್ಸ್): ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಅವರು ದಕ್ಷಿಣ ಆಫ್ರಿಕಾ ವಿಶ್ವಕಪ್‌ ತಂಡಕ್ಕೆ ಸೇ‍ರ್ಡೆಯಾಗಿದ್ದಾರೆ. ಗಾಯಗೊಂಡ ವೇಗಿ ಆನ್ರಿಚ್‌ ನೊರ್ಜೆ ಬದಲಿಗೆ ಅವರಿಗೆ ಸ್ಥಾನ ನೀಡಲಾಗಿದೆ.

ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ನೊರ್ಜೆ ಬಲಗೈ ಬೆರಳಿಗೆ ಗಾಯವಾಗಿತ್ತು. ಸಂಪೂರ್ಣ ಗುಣಮುಖವಾಗಲು ಅವರಿಗೆ ಕೆಲವು ವಾರ ಬೇಕಾಗುತ್ತವೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಮಂಗಳವಾರ ತಿಳಿಸಿದೆ.

ಮಾರಿಸ್ 2018ರ ಫೆಬ್ರುವರಿಯಿಂದ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಟ್ವೆಂಟಿ–20 ಟೂರ್ನಿಗಳಲ್ಲಿ ಆಡಿದ್ದಾರೆ. ವಿಶ್ವಕಪ್ ಮುಂದಿರುವಂತೆ ಆಟಗಾರರ ಅದರಲ್ಲೂ ವಿಶೇಷವಾಗಿ ಬೌಲರ್‌ಗಳ ಗಾಯದ ಸಮಸ್ಯೆ ಆಫ್ರಿಕ ತಂಡಕ್ಕೆ ತಲೆನೋವಾಗಿದೆ.

ಲುಂಗಿ ಗಿಡಿ, ಕಗಿಸೊ ರಬಾಡ ಹಾಗೂ ಡೇಲ್‌ ಸ್ಟೇನ್‌ ಗಾಯಕ್ಕೆ ಒಳಗಾಗಿದ್ದಾರೆ. ಈ ಮೂವರು ಶೀಘ್ರ ಫಿಟ್ನೆಸ್ ಸಾಬೀತುಪಡಿಸದಿದ್ದಲ್ಲಿ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ.

Post Comments (+)