ಸೋಮವಾರ, ಆಗಸ್ಟ್ 19, 2019
28 °C

ಬ್ರೆಂಡನ್‌ ಮೆಕಲಂ ನಿವೃತ್ತಿ

Published:
Updated:

ಆಕ್ಲಂಡ್‌ (ಪಿಟಿಐ): ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ನಾಯಕನ ಸ್ಥಾನ ನಿಭಾಯಿಸಿದ್ದ ಬ್ರೆಂಡನ್‌ ಮೆಕಲಂ ಎಲ್ಲ ಸ್ಪರ್ಧಾತ್ಮಕ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ. ಸದ್ಯ ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್‌ ಟ್ವೆಂಟಿ–20 ಟೂರ್ನಿಯ ಮುಕ್ತಾಯದ ಬಳಿಕ ಅಧಿಕೃತವಾಗಿ ವಿದಾಯ ಹೇಳಲಿದ್ದಾರೆ.

2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ನಿವೃತ್ತಿ ಘೋಷಿಸಿದ್ದ ಅವರು, ವಿಶ್ವದಾದ್ಯಂತ ನಡೆಯುವ ಟ್ವೆಂಟಿ–20 ಲೀಗ್‌ಗಳಲ್ಲಿ ಆಡುವುದನ್ನು ಮುಂದುವರಿಸಿದ್ದರು.

37 ವರ್ಷದ ಮೆಕಲಂ, ಕಿವೀಸ್‌ ಪರ 101 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 6453 ರನ್‌ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳು ಸೇರಿವೆ. 312 ಅವರ ವೈಯಕ್ತಿಕ ಗರಿಷ್ಠ ರನ್‌. 260 ಏಕದಿನ ಪಂದ್ಯಗಳಿಂದ ಐದು ಶತಕಗಳೊಂದಿಗೆ 6083 ರನ್‌ ಗಳಿಸಿದ್ದರೆ, 71 ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳಿಂದ 2140 ಜಮೆ ಮಾಡಿದ್ದಾರೆ.

ಎಲ್ಲ ಲೀಗ್‌ಗಳು ಸೇರಿ 370 ಟ್ವೆಂಟಿ–20 ಪಂದ್ಯಗಳನ್ನಾಡಿರುವ ಮೆಕಲಂ ಅವರು ಪೇರಿಸಿದ್ದು ಬರೋಬ್ಬರಿ 9922 ರನ್‌. 

Post Comments (+)