ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ದ್ವಿಶತಕಕ್ಕೆ ದಶಕ

Last Updated 23 ಫೆಬ್ರುವರಿ 2020, 19:53 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸುವುದೇ ದೊಡ್ಡ ಸಾಧನೆ ಎಂಬ ಕಾಲವಿತ್ತು. ಆದರೆ 50–50 ಓವರ್‌ಗಳ ಪಂದ್ಯದಲ್ಲಿ ದ್ವಿಶತಕವನ್ನೂ ಬಾರಿಸಬಹುದು ಎಂದು ತೋರಿಸಿಕೊಟ್ಟವರು ಭಾರತದ ‘ಮಾಸ್ಟರ್‌ ಬ್ಲಾಸ್ಟರ್‌’ ಸಚಿನ್ ತೆಂಡೂಲ್ಕರ್.

2010ರ ಫೆಬ್ರುವರಿ 24ರಂದು ಗ್ವಾಲಿಯರ್‌ನ ಕ್ಯಾಪ್ಟನ್ ರೂಪ್‌ ಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಇನಿಂಗ್ಸ್ ಆರಂಭಿಸಿದ್ದ ಸಚಿನ್ (ಅಜೇಯ 200; 147ಎಸೆತ, 226ನಿಮಿಷ, 25ಬೌಂಡರಿ, 3ಸಿಕ್ಸರ್) ವಿಶ್ವದಾಖಲೆ ಬರೆದಿದ್ದರು. ಜಾಕ್ ಕಾಲಿಸ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಆಗ ಬಲಿಷ್ಠವಾಗಿತ್ತು. ಈ ಪಂದ್ಯದಲ್ಲಿ ಭಾರತವು 153 ರನ್‌ಗಳಿಂದ ಜಯಿಸಿತ್ತು.

ಅಲ್ಲಿಯವರೆಗೂ ಜಿಂಬಾಬ್ವೆಯ ಚಾರ್ಲ್ಸ್‌ ಕೊವೆಂಟ್ರಿಯ 194 ರನ್‌ಗಳ ವೈಯಕ್ತಿಕ ಸ್ಕೋರ್ ಶ್ರೇಷ್ಠ ಸಾಧನೆಯಾಗಿತ್ತು. ಸಚಿನ್ ನಂತರ ಏಕದಿನ ಕ್ರಿಕೆಟ್‌ನಲ್ಲಿ ಏಳು ದ್ವಿಶತಕಗಳು ಮೂಡಿಬಂದಿವೆ. ಅದರಲ್ಲಿ ಒಂದು ವೀರೇಂದ್ರ ಸೆಹ್ವಾಗ್ ಮತ್ತು ಮೂರು ರೋಹಿತ್ ಶರ್ಮಾ ಅವರಿಂದ ದಾಖಲಾಗಿವೆ. ಆದರೆ ಸಚಿನ್ ಮಾಡಿದ ಪ್ರಥಮ ಸಾಧನೆ ಇಂದಿಗೂ ಅಚ್ಚಳಿಯದೇ ಉಳಿದಿದೆ.

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಾಧಕರು

ಆಟಗಾರ;ದೇಶ;ಸ್ಕೋರ್;ಸ್ಥಳ;ವರ್ಷ;ಎದುರಾಳಿ

ಸಚಿನ್ ತೆಂಡೂಲ್ಕರ್;ಭಾರತ;200*;ಗ್ವಾಲಿಯರ್; 2010;ದಕ್ಷಿಣ ಆಫ್ರಿಕಾ

ವೀರೇಂದ್ರ ಸೆಹ್ವಾಗ್;ಭಾರತ;219;ಇಂದೋರ್;2011;ವೆಸ್ಟ್ ಇಂಡೀಸ್

ರೋಹಿತ್ ಶರ್ಮಾ;ಭಾರತ;209;ಬೆಂಗಳೂರು;2013;ಆಸ್ಟ್ರೇಲಿಯಾ

ರೋಹಿತ್ ಶರ್ಮಾ;ಭಾರತ;264;ಕೋಲ್ಕತ್ತ;2014;ಶ್ರೀಲಂಕಾ

ಕ್ರಿಸ್ ಗೇಲ್;215;ವಿಂಡೀಸ್;ಕ್ಯಾನ್‌ಬೆರ್ರಾ;2015;ಜಿಂಬಾಬ್ವೆ

ಮಾರ್ಟಿನ್ ಗಪ್ಟಿಲ್;237*;ನ್ಯೂಜಿಲೆಂಡ್;ವೆಲ್ಲಿಂಗ್ಟನ್;2015;ವಿಂಡೀಸ್

ರೋಹಿತ್ ಶರ್ಮಾ;208*;ಭಾರತ;ಮೊಹಾಲಿ;2017;ಶ್ರೀಲಂಕಾ

ಫಕರ್ ಜಮಾನ್;210*;ಪಾಕಿಸ್ತಾನ;ಬುಲವಾಯೊ;2018;ಜಿಂಬಾಬ್ವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT