ನ್ಯೂಜಿಲೆಂಡ್| ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಜನವರಿ 30ರಿಂದ ಆರಂಭ

ಶನಿವಾರ, ಜೂಲೈ 20, 2019
26 °C

ನ್ಯೂಜಿಲೆಂಡ್| ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಜನವರಿ 30ರಿಂದ ಆರಂಭ

Published:
Updated:

ಕ್ರೈಸ್ಟ್‌ಚರ್ಚ್‌: 2021ರ ಐಸಿಸಿ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಜನವರಿ 30ರಿಂದ ನ್ಯೂಜಿಲೆಂಡ್‌ನಲ್ಲಿ ನಡೆಯಲಿವೆ. ಫೈನಲ್‌, ಸೆಮಿಫೈನಲ್‌ ಸೇರಿದಂತೆ ಒಟ್ಟು 31 ಪಂದ್ಯಗಳು ಆಯೋಜನೆಯಾಗಿವೆ.

ನ್ಯೂಜಿಲೆಂಡ್‌ ಪೂರ್ಣಪ್ರಮಾಣದಲ್ಲಿ ಅಥವಾ ಜಂಟಿಯಾಗಿ ನಾಲ್ಕನೇ ಬಾರಿ ವಿಶ್ವಕಪ್‌ ಆಯೋಜಿಸುತ್ತಿದೆ. 1992 ಹಾಗೂ 2015ರಲ್ಲಿ ಪುರುಷರ ಟೂರ್ನಿ ಹಾಗೂ 2000ರಲ್ಲಿ ಮಹಿಳಾ ಟೂರ್ನಿಯನ್ನು ಅದು ಹಮ್ಮಿಕೊಂಡಿತ್ತು.

ಫೆಬ್ರವರಿ 20ರವರೆಗೆ ಈ ಬಾರಿಯ ಮಹಿಳಾ ವಿಶ್ವಕಪ್‌ ಟೂರ್ನಿ ನಡೆಯಲಿದೆ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಇದು 12ನೇ ಆವೃತ್ತಿಯ ಮಹಿಳಾ ಟೂರ್ನಿಯಾಗಲಿದ್ದು, ಆತಿಥೇಯ ತಂಡವಾಗಿರುವ ನ್ಯೂಜಿಲೆಂಡ್‌ ನೇರ ಅರ್ಹತೆ ಪಡೆದಿದೆ.

ಐಸಿಸಿ ಮಹಿಳಾ ಚಾಂಪಿಯನ್‌ಷಿಪ್‌ ಮಾನ್ಯತಾ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನದಲ್ಲಿರುವ ತಂಡಗಳು ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.

ಸದ್ಯ ಆಸ್ಟ್ರೇಲಿಯಾ, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌, ಭಾರತ ಹಾಗೂ ದಕ್ಷಿಣ ಆಫ್ರಿಕಾ  ಮೊದಲ ನಾಲ್ಕು ಸ್ಥಾನದಲ್ಲಿರುವ ತಂಡಗಳು. ಅರ್ಹತಾ ಸುತ್ತಿನ ಮೂಲಕ ಇತರ ತಂಡಗಳು ಪ್ರತಿಷ್ಠಿತ ಟೂರ್ನಿಗೆ ಅರ್ಹತೆ ಪಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !