ಶುಕ್ರವಾರ, ಸೆಪ್ಟೆಂಬರ್ 20, 2019
27 °C
ವಿಶ್ವಕಪ್ ಹೆಜ್ಜೆಗುರುತು – 34 * ಫೈನಲ್‌ನಲ್ಲಿ ಮುಗ್ಗರಿಸಿದ್ದ ಭಾರತ

ಮೊದಲ ಬಾರಿಗೆ 14 ತಂಡ, 2003ರ ವಿಶ್ವಕಪ್ ಟೂರ್ನಿಯ ವಿಶೇಷ

Published:
Updated:

ಹೊಸ ತಂಡಗಳ ಸೇರ್ಪಡೆಯೊಂದಿಗೆ 2003ರ ವಿಶ್ವಕಪ್‌ ಟೂರ್ನಿ ದಕ್ಷಿಣ ಆಫ್ರಿಕಾ, ಜಿಂಬಾಬ್ಚೆ ಮತ್ತು ಕೀನ್ಯಾ ಆತಿಥ್ಯದಲ್ಲಿ ನಡೆಯಿತು. ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ 14 ತಂಡಗಳು ಪಾಲ್ಗೊಂಡಿದ್ದು ಈ ಟೂರ್ನಿಯ ವಿಶೇಷ.

* ಹಿಂದಿನ 1999ರ ವಿಶ್ವಕಪ್‌ನಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದವು, 42 ಪಂದ್ಯಗಳು ಜರುಗಿದ್ದವು. 2003ರ ಟೂರ್ನಿಯಲ್ಲಿ14 ತಂಡಗಳು ಭಾಗವಹಿಸಿದ್ದವು. ಒಟ್ಟು 54 ಪಂದ್ಯಗಳು ನಡೆದಿದ್ದವು.

* ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಹತ್ತು ಸ್ಥಾನಗಳನ್ನು ಹೊಂದಿರುವ ತಂಡಗಳು ನೇರ ಅರ್ಹತೆ ಪಡೆದಿದ್ದವು. ಏಕದಿನ ಕ್ರಿಕೆಟ್‌ ಆಡುವ ಪೂರ್ಣ ಮಾನ್ಯತೆ ಹೊಂದಿದ್ದ ಬಾಂಗ್ಲಾದೇಶ ಮತ್ತು ಕೀನ್ಯಾ ತಂಡಗಳಿಗೆ ಅರ್ಹತೆ ಲಭಿಸಿತ್ತು. 2001ರಲ್ಲಿ ಕೆನಡಾದಲ್ಲಿ ಜರುಗಿದ ಐಸಿಸಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಎರಡು ತಂಡಗಳಿಗೆ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಅವಕಾಶ ನೀಡಲಾಯಿತು.

* ನಮೀಬಿಯಾ ತಂಡಕ್ಕೆ ಇದು ಚೊಚ್ಚಲ ವಿಶ್ವಕಪ್‌ ಟೂರ್ನಿಯಾಗಿತ್ತು.

* ಒಟ್ಟು 14 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರತಿ ಗುಂಪಿನಲ್ಲಿ   ಮೊದಲ ಮೂರು ಸ್ಥಾನ ಗಳಿಸಿದ ತಂಡಗಳು ಸೂಪರ್‌ ಸಿಕ್ಸ್‌ ಹಂತಕ್ಕೆ ಅರ್ಹತೆ ಪಡೆದುಕೊಂಡವು.

* ಟೂರ್ನಿಯ ಕೆಲ ಮಹತ್ವದ ಪಂದ್ಯಗಳಿಗೆ ಮಳೆ ಕಾಡಿತು. ಇದರಲ್ಲಿ ‘ಎ’ ಗುಂಪಿನ ಮೊದಲ ಲೀಗ್ ಪಂದ್ಯವೂ ಒಂದು. 2003ರ ಫೆಬ್ರುವರಿ 10ರಂದು ಜಿಂಬಾಬ್ವೆ ಮತ್ತು ನಮೀಬಿಯಾ ತಂಡಗಳ ನಡುವೆ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ನಡೆದ ಪಂದ್ಯಕ್ಕೆ ಮಳೆ ಕಾಡಿತು. ಇದರಿಂದ ಜಿಂಬಾಬ್ವೆ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ 86 ರನ್‌ಗಳ ಗೆಲುವು ಸಾಧಿಸಿತು.

* ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದ ಆರೋಪದ ಮೇಲೆ ಆಸ್ಟ್ರೇಲಿಯಾದ ಲೆಗ್‌ ಸ್ಪಿನ್ನರ್‌ ಶೇನ್‌ ವಾರ್ನ್‌ ಅವರನ್ನು ಟೂರ್ನಿಯಿಂದ ಹೊರ ಕಳುಹಿಸಲಾಯಿತು. ಆಸೀಸ್‌ನ ಮೊದಲ ಪಂದ್ಯ ಆರಂಭವಾಗುವ ಒಂದು ದಿನ ಮೊದಲು ಈ ಘಟನೆ ಜರುಗಿತು.

* ಆ ಟೂರ್ನಿಯಲ್ಲಿ ಭಾರತ ತಂಡವನ್ನು ಸೌರವ್‌ ಗಂಗೂಲಿ ಮತ್ತು ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ರಿಕಿ ಪಾಂಟಿಂಗ್ ಮುನ್ನಡೆಸಿದ್ದರು.

Post Comments (+)