ಭಾನುವಾರ, ಆಗಸ್ಟ್ 14, 2022
21 °C
ಭಾರತ–ಆಸ್ಟ್ರೇಲಿಯಾ ಎ ಅಭ್ಯಾಸ ಕ್ರಿಕೆಟ್ ಪಂದ್ಯ ಇಂದಿನಿಂದ

ಟೆಸ್ಟ್‌ಗೆ ಸಿದ್ಧವಾಗುವತ್ತ ಭಾರತ ತಂಡದ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ (ಪಿಟಿಐ): ಅಡಿಲೇಡ್‌ನಲ್ಲಿ ಇದೇ 17ರಿಂದ ಆರಂಭವಾಗಲಿರುವ ’ಪಿಂಕ್ ಬಾಲ್ ಟೆಸ್ಟ್‌‘ ಪಂದ್ಯದ  ’ಡ್ರೆಸ್ ರಿಹರ್ಸಲ್‘ ಎಂದೇ ಬಿಂಬಿತವಾಗಿರುವ ಅಭ್ಯಾಸ ಪಂದ್ಯವು ಶುಕ್ರವಾರ ಆರಂಭವಾಗಲಿದೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಅಲೆಕ್ಸ್‌ ಕ್ಯಾರಿ ನಾಯಕರಾಗಿರುವ ಆಸ್ಟ್ರೇಲಿಯಾ ಎ ತಂಡವನ್ನು ಎದುರಿಸಲಿದೆ. ಈಚೆಗೆ ನಡೆದಿದ್ದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯವು ಡ್ರಾ ಆಗಿತ್ತು. ಆಗ ಟಿ20 ಪಂದ್ಯ ಇದ್ದ ಕಾರಣ ವಿರಾಟ್, ಕೆ.ಎಲ್. ರಾಹುಲ್, ಜಸ್‌ಪ್ರೀತ್ ಬೂಮ್ರಾ, ಮಯಂಕ್ ಅಗರವಾಲ್  ಅವರು ಆಡಿರಲಿಲ್ಲ. ಇದೀಗ ಇವರೆಲ್ಲರೂ ಕಣಕ್ಕಿಳಿಯುತ್ತಿದ್ದಾರೆ.

ಕರ್ನಾಟಕದ ಜೋಡಿ ಮಯಂಕ್ ಅಗರವಾಲ್ ಮತ್ತು ಕೆ.ಎಲ್. ರಾಹುಲ್ ಅವರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

ಚೈನಾಮನ್ ಬೌಲರ್ ಕುಲದೀಪ್ ಯಾದವ್ ಮತ್ತು ಬ್ಯಾಟ್ಸ್‌ಮನ್ ಹನುಮವಿಹಾರಿ ಅವರೂ ಆಡುವ ಸಾಧ್ಯತೆ ಇದೆ. ಟಿ20 ಸರಣಿಯಲ್ಲಿ ಸ್ನಾಯುಸೆಳೆತ ಮತ್ತು ಕನಕಷನ್ ಅನುಭವಿಸಿದ್ದ ರವೀಂದ್ರ ಜಡೇಜ ಕೂಡ ಈ ಪಂದ್ಯದಲ್ಲಿ ತಮ್ಮ ಫಿಟ್‌ನೆಸ್ ಪರೀಕ್ಷಿಸಿಕೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ ಅವರು ಫಿಟ್‌ನೆಸ್‌ನಲ್ಲಿ ಪಾಸಾಗದಿದ್ದರೆ  ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ದೂರವುಳಿಯಬೇಕಾಗುತ್ತದೆ. ಆಗ ಆರ್‌. ಅಶ್ವಿನ್ ಜೊತೆಗೆ ಕುಲದೀಪ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ಎ ತಂಡದಲ್ಲಿ ಅಲೆಕ್ಸ್ ಕ್ಯಾರಿ, ಸೀನ್ ಅಬಾಟ್ ಮತ್ತು ಮಿಚೆಲ್ ಸ್ವಿಪ್ಸನ್  ಆಡಲಿದ್ದಾರೆ. ಕ್ಯಾಮರೂನ್ ಗ್ರೀನ್ ಕೂಡ ಕಣಕ್ಕಿಳಿಯಲಿದ್ದಾರೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಲ್.ರಾಹುಲ್, ಮಯಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ಹನುಮವಿಹಾರಿ, ಪೃಥ್ವಿ ಶಾ, ಶುಭಮನ್ ಗಿಲ್, ಆರ್‌. ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಉಮೇಶ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ರಿಷಭ್ ಪಂತ್ (ವಿಕೆಟ್‌ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್).

ಆಸ್ಟ್ರೇಲಿಯಾ ಎ: ಅಲೆಕ್ಸ್‌ ಕ್ಯಾರಿ (ನಾಯಕ–ವಿಕೆಟ್‌ಕೀಪರ್), ಸೀನ್ ಅಬಾಟ್, ಜೋ ಬರ್ನ್ಸ್‌, ಹ್ಯಾರಿ ಕಾನ್ವೆ, ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ನಿಕ್ ಮ್ಯಾಡಿಸನ್, ಬೆನ್ ಮೆಕ್‌ಡರ್ಮಾಟ್, ಮಾರ್ಕ್ ಸ್ಟೆಕೆಟೀ, ವಿಲ್ ಸದರ್ಲ್ಯಾಂಡ್, ಮಿಚೆಲ್ ಸ್ವಿಪ್ಸನ್, ಜ್ಯಾಕ್ ವೈಲ್ಡರ್‌ಮುತ್.

ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು