ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS| ಸ್ಟೀವ್ ಸ್ಮಿತ್ ಶತಕ: ಭಾರತಕ್ಕೆ 287 ರನ್ ಗುರಿ ನೀಡಿದ ಆಸ್ಟ್ರೇಲಿಯಾ

50 ಓವರ್‌ಗಳಲ್ಲಿ 9 ವಿಕೆಟ್‌ಗೆ 286 ರನ್‌ ಗಳಿಸಿದ ಆಸೀಸ್
Last Updated 19 ಜನವರಿ 2020, 11:57 IST
ಅಕ್ಷರ ಗಾತ್ರ

ಬೆಂಗಳೂರು:ಸ್ಟೀವ್ ಸ್ಮಿತ್ ಅವರ ಅಮೋಘ ಶತಕದ (131) ನೆರವಿನಿಂದ ಅತಿಥೇಯ ಭಾರತ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ9ವಿಕೆಟ್ ನಷ್ಟಕ್ಕೆ286ರನ್‌ ಗಳಿಸಿ ಸವಾಲಿನ ಮೊತ್ತ ಪೇರಿಸಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.

18 ರನ್‌ ಗಳಿಸುವಷ್ಟರಲ್ಲೇ ಮೊದಲ ವಿಕೆಟ್‌ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಪರ ಎಚ್ಚರಿಕೆಯ ಆಟವಾಡಿದ ಸ್ಟೀವ್ ಸ್ಮಿತ್132 ಎಸೆತಗಳಲ್ಲಿ 131 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ14 ಬೌಂಡರಿ ಮತ್ತು1 ಸಿಕ್ಸರ್‌ ದಾಖಲಾಗಿವೆ.

ತಂಡದ ಮೊತ್ತ 46 ಆದಾಗ ನಾಯಕ ಆ್ಯರನ್ ಫಿಂಚ್ ರನೌಟ್ ಆದರು.2 ವಿಕೆಟ್‌ ಕಳೆದುಕೊಂಡು ತಂಡವು ಸಂಕಷ್ಟಕ್ಕೆ ಸಿಲುಕಿದಾಗ ಸ್ಮಿತ್ ಹಾಗೂಮಾರ್ನಸ್ ಲಾಬುಶೇನ್ ಆಸರೆಯಾದರು.ಇವರಿಬ್ಬರ ಜತೆಯಾಟದಲ್ಲಿ ತಂಡವು 127 ರನ್‌ ಕಲೆ ಹಾಕಿತು. ತಂಡದ ಮೊತ್ತ 173 ಆಗಿದ್ದಾಗ ಜಡೇಜಾ ಬೌಲಿಂಗ್‌ನಲ್ಲಿಮಾರ್ನಸ್ ಲಾಬುಶೇನ್ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಕ್ರೀಸಿಗಿಳಿದ ಮಿಚೆಲ್ ಸ್ಟಾರ್ಕ್ ಕೂಡಲೇ ಔಟಾದರು. ಅಲೆಕ್ಸ್ ಕ್ಯಾರಿ 36 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ನಂತರಸ್ಮಿತ್ ವೇಗದ ಆಟಕ್ಕೆ ಒತ್ತು ನೀಡಿದರು.

ಭಾರತದ ಪರ ಮೊಹಮ್ಮದ್ ಶಮಿ4,ನವದೀಪ್ ಸೈನಿ 1, ಕುಲದೀಪ್ ಯಾದವ್ 1 ಮತ್ತು ರವಿಂದ್ರ ಜಡೇಜಾ 2 ವಿಕೆಟ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT