ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ20 ಸರಣಿ: ವೆಸ್ಟ್‌ ಇಂಡೀಸ್ ವಿರುದ್ಧ 3–0 ಅಂತರದ ಜಯ ಸಾಧಿಸಿದ ಪಾಕಿಸ್ತಾನ

Last Updated 16 ಡಿಸೆಂಬರ್ 2021, 21:29 IST
ಅಕ್ಷರ ಗಾತ್ರ

ಕರಾಚಿ: ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ (87; 45 ಎಸೆತ, 10 ಬೌಂಡರಿ, 3 ಸಿಕ್ಸರ್) ಮತ್ತು ನಾಯಕ ಬಾಬರ್ ಆಜಂ (79; 53 ಎ, 9 ಬೌಂ, 2 ಸಿ) ಮೊದಲ ವಿಕೆಟ್‌ಗೆ ಶತಕದ (158) ಜೊತೆಯಾಟವಾಡಿ ಮಿಂಚಿದರು.

ಅವರ ಅಮೋಘ ಜೊತೆಯಾಟದ ಬಲದಿಂದ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ಎದುರಿನ ಮೂರನೇ ಮತ್ತು ಅಂತಿಮ ಟ್ವೆಂಟಿ20 ಕ್ರಿಕೆಟ್ ಟೂರ್ನಿಯಲ್ಲಿ ಏಳು ವಿಕೆಟ್‌ಗಳ ಜಯ ಗಳಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 3–0ಯಿಂದ ತನ್ನದಾಗಿಸಿಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಪರ ಬ್ರೆಂಡನ್ ಕಿಂಗ್ (43; 21ಎ, 7ಬೌಂಡರಿ, 2ಸಿಕ್ಸರ್) ಮತ್ತು ಶಾಮ್ರಾ ಬ್ರೂಕ್ಸ್‌ (49; 31ಎ, 2ಬೌಂ, 4ಸಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 66 ರನ್‌ ಸೇರಿಸಿದರು.

ಈ ಮೊತ್ತವು ಕೇವಲ ಆರು ಓವರ್‌ಗಳಲ್ಲಿ ಸೇರಿದವು. ಕಿಂಗ್ ಔಟಾದ ನಂತರ ಬ್ರೂಕ್ಸ್‌ ಮತ್ತು ಪೂರನ್ ಎರಡನೇ ವಿಕೆಟ್‌ಗೆ 33 ರನ್ ಸೇರಿಸಿದರು. ನಿಕೊಲಸ್ ಪೂರನ್ (64; 37ಎಸೆತ, 2ಬೌಂಡರಿ, 6ಸಿಕ್ಸರ್) ಭರ್ಜರಿ ಅರ್ಧಶತಕ ದಾಖಲಿಸಿದರು.

ಪೂರನ್ ಜೊತೆಗೂಡಿದ ಡರೆನ್ ಬ್ರಾವೊ (ಅಜೇಯ 34) ಕೂಡ ಮಿಂಚಿದರು. ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಇವರಿಬ್ಬರು 93 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು
ವೆಸ್ಟ್ ಇಂಡೀಸ್:
20 ಓವರ್‌ಗಳಲ್ಲಿ 3ಕ್ಕೆ 207 (ಬ್ರೆಂಡನ್ ಕಿಂಗ್ 43, ಶಾಮ್ರಾ ಬ್ರೂಕ್ಸ್ 49, ನಿಕೊಲಸ್ ಪೂರನ್ 64, ಡೆರೆನ್ ಬ್ರಾವೊ ಔಟಾಗದೆ 34, ಮೊಹಮ್ಮದ್ ವಸೀಂಜೂನಿಯರ್ 44ಕ್ಕೆ2)

ಪಾಕಿಸ್ತಾನ:18.5 ಓವರ್‌ಗಳಲ್ಲಿ 3ಕ್ಕೆ 208(ಮೊಹಮ್ಮದ್ ರಿಜ್ವಾನ್ 87, ಬಾಬರ್ ಆಜಂ 79, ಫಖ್ರ್‌ ಜಮಾನ್ 12, ಆಸಿಫ್ ಅಲಿ ಔಟಾಗದೆ 21; ರೊಮಾರಿಯೊ 53ಕ್ಕೆ1, ಡೊಮಿನಿಕ್ 37ಕ್ಕೆ1, ಒಡೀನ್ ಸ್ಮಿತ್ 34ಕ್ಕೆ1). ಫಲಿತಾಂಶ: ಪಾಕಿಸ್ತಾನಕ್ಕೆ 7 ವಿಕೆಟ್‌ಗಳ ಜಯ; 3 ಪಂದ್ಯಗಳ ಸರಣಿ 3–0ಯಿಂದ ಕೈವಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT