ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಕರ್ನಾಟಕದ ನಾಲ್ವರಿಗೆ ಭಾರತ ‘ ಎ’ ತಂಡದಲ್ಲಿ ಸ್ಥಾನ

Published:
Updated:

ಬೆಂಗಳೂರು: ರಣಜಿ ಮತ್ತು ಐಪಿಎಲ್ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ ಕರ್ನಾಟಕದ ನಾಲ್ವರು ಆಟಗಾರರು ವಿವಿಧ ಟೂರ್ನಿಗಳಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್‌ ಶ್ರೀಲಂಕಾ ‘ಎ’ ಎದುರಿನ ಎರಡು ಚತುರ್ದಿನ ಪಂದ್ಯಗಳಲ್ಲಿ ಆಡುವ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೊದಲ ಎರಡು ಪಂದ್ಯಗಳಿಗೆ ಆಯ್ಕೆ ಮಾಡಲಾಗಿರುವ ತಂಡದಲ್ಲಿ ಆಫ್ ಸ್ಪಿನ್ನರ್‌ ಕೆ.ಗೌತಮ್ ಅವರಿಗೂ ಸ್ಥಾನ ನೀಡಲಾಗಿದೆ.

ವೆಸ್ಟ್ ಇಂಡೀಸ್ ‘ಎ’ ಎದುರಿನ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುವ ತಂಡದ ನಾಯಕತ್ವವನ್ನು ಮನೀಷ್ ಪಾಂಡೆ ಅವರಿಗೆ ವಹಿಸಲಾಗಿದೆ. ಈ ತಂಡದಲ್ಲಿ ಮಯಂಕ್ ಅಗರವಾಲ್ ಕೂಡ ಸ್ಥಾನ ಗಳಿಸಿದ್ದಾರೆ.

Post Comments (+)