ಭಾರತದಲ್ಲಿ ಕ್ರಿಕೆಟ್ ಎನ್ನುವುದು ಕೇವಲ ಒಂದು ಆಟವಲ್ಲ. ಅದೊಂದು ಭಾವನೆ. ಈ ಭಾವನೆಗೆ ಪ್ರತಿ ವರ್ಷ ಹೊಸ ಉತ್ಸಾಹವನ್ನು ತುಂಬುವ ಮಹಾನ್ ವೇದಿಕೆಯೇ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್). ಇದನ್ನು ‘ಕ್ರಿಕೆಟ್ ಲೋಕದ ಹಬ್ಬ’ ಎಂದೇ ಕರೆಯಲಾಗುತ್ತದೆ.

ಐಪಿಎಲ್ ಆಟಗಾರರಿಂದ ಮಾತ್ರವಲ್ಲದೆ, ತೆರೆಯ ಹಿಂದೆ ತಂಡವನ್ನು ಮುನ್ನಡೆಸುವ ಶಕ್ತಿಯುತ ನಾಯಕತ್ವದಿಂದಲೂ ಗಮನ ಸೆಳೆದಿದೆ. ಈ ಕ್ರೀಡಾ ಸಾಮ್ರಾಜ್ಯದಲ್ಲಿ ಮಹಿಳೆಯರು ಕೇವಲ ಪ್ರೇಕ್ಷಕರಾಗಿ ಉಳಿಯದೆ, ತಂಡಗಳ ಮಾಲೀಕರಾಗಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ.

ನೀತಾ ಅಂಬಾನಿಯಿಂದ ಹಿಡಿದು ಇತ್ತೀಚೆಗೆ ತಂಡದ ಮಾಲೀಕತ್ವ ವಹಿಸಿದ ಅನನ್ಯಾ ಬಿರ್ಲಾವರೆಗೂ ಐಪಿಎಲ್ನಲ್ಲಿ ಮಹಿಳಾಮಣಿಗಳ ವರ್ಚಸ್ಸು ಕ್ರೀಡೆಯ ದಿಕ್ಕನ್ನೇ ಬದಲಿಸಿದೆ.

ನೀತಾ ಅಂಬಾನಿ (ಮುಂಬೈ ಇಂಡಿಯನ್ಸ್):

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನೆಡೆಸುತ್ತಿರುವ ನೀತಾ ಅಂಬಾನಿ ಅವರು ಹರಾಜು ಪ್ರಕ್ರಿಯೆಯಿಂದ ಹಿಡಿದು ಪಂದ್ಯದುದ್ದಕ್ಕೂ ತಂಡಕ್ಕೆ ಬೆನ್ನಲುಬಾಗಿ ನಿಂತಿದ್ದಾರೆ. ತಂಡವು ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ನೀತಾ ಅವರ ಪಾತ್ರ ಪ್ರಮುಖವಾಗಿದೆ. ತಂಡದ ಪ್ರತಿಯೊಂದು ಪಂದ್ಯದಲ್ಲೂ ಹಾಜರಿದ್ದು, ಆಟಗಾರರನ್ನು ಹುರಿದುಂಬಿಸುವ ಅವರ ಉತ್ಸಾಹಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಅವರು ತೋರುವ ಚತುರತೆ ಮತ್ತು ಆಸಕ್ತಿ ಶ್ಲಾಘನೀಯ.

ಜೂಹಿ ಚಾವ್ಲಾ (ಕೋಲ್ಕತ್ತ ನೈಟ್ ರೈಡರ್ಸ್)

ಐಪಿಎಲ್ ಆರಂಭವಾದಗಿನಿಂದಲೂ ಜೂಹಿ ಚಾವ್ಲಾ ಅವರು ಕೋಲ್ಕತ್ತ ನೈಟ್ ರೈಡರ್ಸ್(ಕೆಕೆಆರ್) ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಬಾಲಿವುಡ್ ನಟ, ಆತ್ಮೀಯ ಸ್ನೇಹಿತ ಶಾರುಕ್ ಖಾನ್ ಮತ್ತು ಪತಿ ಜಯ್ ಮೆಹ್ತಾ ಅವರೊಂದಿಗೆ ಸೇರಿ ತಂಡವನ್ನು ಕಟ್ಟಿದ ಜೂಹಿ, ಕೇವಲ ಒಬ್ಬ ಮಾಲೀಕರಾಗಿ ಮಾತ್ರವಲ್ಲದೆ ತಂಡದ ಅತಿದೊಡ್ಡ ಅಭಿಮಾನಿಯಾಗಿ ಗುರುತಿಸಿಕೊಂಡಿದ್ದಾರೆ. ಕೆಕೆಆರ್ ತಂಡವು 2012, 2014 ಮತ್ತು 2024ರಲ್ಲಿ ಚಾಂಪಿಯನ್ ಆಗಿದೆ.

ಪ್ರೀತಿ ಜಿಂಟಾ (ಪಂಜಾಬ್ ಕಿಂಗ್ಸ್)

2008ರಿಂದ ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕತ್ವ ಹೊಂದಿರುವ ಪ್ರೀತಿ ಜಿಂಟಾ ಅವರು ಐಪಿಎಲ್ನ ಅತ್ಯಂತ ಸ್ಥಿರ ಮಹಿಳಾ ಪಾಲುದಾರರಲ್ಲಿ ಒಬ್ಬರಾಗಿದ್ದಾರೆ. ಹರಾಜು ಪ್ರಕ್ರಿಯೆಗಳಲ್ಲಿ ಭಾಗವಹಿಸುವುದು, ಆಟಗಾರರೊಂದಿಗೆ ಸಂವಹನ ನಡೆಸುವುದು ಮತ್ತು ಫ್ರಾಂಚೈಸಿ ಮಟ್ಟದ ನಿರ್ಧಾರಗಳಲ್ಲಿ ಅವರು ಪಾಲ್ಗೊಳ್ಳುತ್ತಾರೆ. ಸುಮಾರು ಎರಡು ದಶಕಗಳ ಕಾಲ ಲೀಗ್ನಲ್ಲಿ ಸಕ್ರಿಯವಾಗಿರುವ ಅವರು, ಐಪಿಎಲ್ ಇತಿಹಾಸದಲ್ಲಿ ದೀರ್ಘಕಾಲದವರೆಗೆ ಸಕ್ರಿಯವಾಗಿರುವ ಮಹಿಳಾ ಮಾಲೀಕರಾಗಿದ್ದಾರೆ.

ಕಾವ್ಯಾ ಮಾರನ್ (ಸನ್ ರೈಸರ್ಸ್ ಹೈದರಾಬಾದ್)

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಯುವ ಮಾಲೀಕರಲ್ಲಿ ಕಾವ್ಯಾ ಮಾರನ್ ಒಬ್ಬರು. 2018 ರಿಂದ ‘ಸನ್ ರೈಸರ್ಸ್ ಹೈದರಾಬಾದ್’(ಎಸ್ಆರ್ಎಚ್) ತಂಡದ ಸಿಇಒ ಆಗಿ ಜವಾಬ್ದಾರಿ ಹೊತ್ತುಕೊಂಡ ಕಾವ್ಯಾ, ಕೇವಲ ಐಪಿಎಲ್ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದ ಎಸ್ಎ20 ಲೀಗ್ನಲ್ಲೂ ತಮ್ಮ ತಂಡದ (ಸನ್ರೈಸರ್ಸ್ ಈಸ್ಟರ್ನ್ ಕೇಪ್) ಯಶಸ್ಸಿಗೆ ಕಾರಣರಾಗಿದ್ದಾರೆ. 2024ರಲ್ಲಿ ಎಸ್ಆರ್ಎಚ್ ಫೈನಲ್ ತಲುಪಿದಾಗ, ಕಾವ್ಯಾ ಮಾರನ್ ಮಾಲೀಕತ್ವದ ಮೇಲೆ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿತ್ತು. ಈ ಆವೃತ್ತಿಯಲ್ಲಿಯೂ ತಂಡವು ಅವರ ಮಾರ್ಗದರ್ಶನದಲ್ಲಿ ಬಲಿಷ್ಠವಾಗಿ ಮುನ್ನಡೆಯುತ್ತಿದೆ.

ಅನನ್ಯಾ ಬಿರ್ಲಾ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ದೇಶದ ಪ್ರಸಿದ್ಧ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ, ಈಗ ಆರ್ಸಿಬಿ ಅಭಿಮಾನಿಗಳ ಪಾಲಿಗೆ ಹೊಸ ಆಶಾಕಿರಣ ಮತ್ತು ತಂಡದ ಹೊಸ ಮುಖವಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಸುಮಾರು ₹16,700 ಕೋಟಿ ಮೊತ್ತಕ್ಕೆ ಆರ್ಸಿಬಿ ತಂಡವನ್ನು ಖರೀದಿಸಿದೆ. ಅನನ್ಯಾ ಅವರ ಸಹೋದರ ಆರ್ಯಮನ್ ವಿಕ್ರಮ್ ಬಿರ್ಲಾ ತಂಡದ ಅಧ್ಯಕ್ಷರಾಗಿದ್ದರೆ, ಅನನ್ಯಾ ಅವರು ತಂಡದ ಪ್ರಮುಖ ಪಾಲುದಾರರಾಗಿ ಮತ್ತು ಬೆಂಬಲವಾಗಿ ಗುರುತಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.