2026ರ ಟಿ20 ವಿಶ್ವಕಪ್ನ ಫೈನಲ್ ಪಂದ್ಯ ಹೊರತುಪಡಿಸಿ, ಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಭಾರತ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಮತ್ತೆ ತಮ್ಮ ಲಯಕ್ಕೆ ಮರಳಿದ್ದಾರೆ.

ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡುವ ಅಭಿಷೇಕ್ ಅವರು ತಂಡದ ಅಭ್ಯಾಸ ಪಂದ್ಯದಲ್ಲಿ ಅಬ್ಬರದ 94 ರನ್ ಗಳಿಸುವ ಮೂಲಕ ಉದ್ಘಾಟನಾ ಪಂದ್ಯಕ್ಕೂ ಮುನ್ನ ಲಯಕ್ಕೆ ಮರಳಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಅಮೋಘ ಫಾರ್ಮ್ನಲ್ಲಿದ್ದ ಅವರು, ವಿಶ್ವಕಪ್ನ ಆರಂಭಿಕ ಮೂರು ಇನಿಂಗ್ಸ್ಗಳಲ್ಲಿ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಆದರೆ, ಫೈನಲ್ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದರು.

ಶನಿವಾರ ನಡೆದ ಅಭ್ಯಾಸ ಪಂದ್ಯದಲ್ಲಿ 25 ವರ್ಷದ ಅಭಿಷೇಕ್ ಶರ್ಮಾ ಅವರು ಎಸ್ಆರ್ಎಚ್–ಎ ಪರ ಆರಂಭಿಕನಾಗಿ ಆಡಿದರು. ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ಅವರು, ಕೇವಲ 42 ಎಸೆತಗಳಲ್ಲಿ 94 ರನ್ ಗಳಿಸಿದರು. ಅಂತಿಮವಾಗಿ 6 ರನ್ಗಳಿಂದ ಶತಕ ವಂಚಿತರಾದ ಅವರು ಬ್ರೈಡನ್ ಕಾರ್ಸೆ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
.ವಿಡಿಯೊ: ₹10.75 ಕೋಟಿ ಆಟಗಾರನ ಯಾರ್ಕರ್ಗೆ ಕ್ಲೀನ್ ಬೌಲ್ಡ್ ಆದ ವಿರಾಟ್ ಕೊಹ್ಲಿ.ಫ್ರಾಂಚೈಸಿ ಮುಂದೆ ವಿರಾಟ್ ಕೊಹ್ಲಿ ದುಬಾರಿ ಬೇಡಿಕೆ? ವದಂತಿಗೆ ಕೊಟ್ರು ಸ್ಪಷ್ಟನೆ.
ಅಭಿಷೇಕ್ ಬ್ಯಾಟಿಂಗ್ ಕುರಿತು ಭಾರತ ತಂಡದ ಮಾಜಿ ಆಟಗಾರ ಆರ್. ಅಶ್ವಿನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದು, ಅಭಿಷೇಕ್ ಶರ್ಮಾ ಐಪಿಎಲ್ ಆರಂಭಕ್ಕೂ ಮುನ್ನ ಲಯಕ್ಕೆ ಮರಳುವ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಅಭಿಷೇಕ್ ಶರ್ಮಾ ಜೊತೆ ಹೆನ್ರಿಕ್ ಕ್ಲಾಸೆನ್ 31 ಎಸೆತಗಳಲ್ಲಿ 49 ರನ್, ಸಲೀಲ್ ಅರೋರಾ ಕೇವಲ 16 ಎಸೆತಗಳಲ್ಲಿ 47 ರನ್ ಗಳಿಸಿ ಗಮನ ಸೆಳೆದರು. ಎಸ್ಆರ್ಎಚ್–ಎ ತಂಡವು 20 ಓವರ್ಗಳಲ್ಲಿ 240 ಕ್ಕೂ ಅಧಿಕ ರನ್ ಗಳಿಸಲು ಕಾರಣರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.