ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕವು (ನಾಡಾ) ರೂಪಿಸಿರುವ ‘ರಿಜಿಸ್ಟರ್ಡ್ ಟೆಸ್ಟಿಂಗ್ ಪೂಲ್’ಗೆ (ಆರ್ಟಿಪಿ) ಟಿ20 ಕ್ರಿಕೆಟ್ ತಾರೆಗಳಾದ ಅಭಿಷೇಕ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಸೇರ್ಪಡೆಯಾಗಿದ್ದಾರೆ. ವರ್ಷದ ಎರಡನೇ ತ್ರೈಮಾಸಿಕಕ್ಕೆ ರೂಪಿಸಿದ ಈ ಗುಂಪಿನಲ್ಲಿ ಅಥ್ಲೀಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಪರೀಕ್ಷೆಗೆ ಒಳಪಡುವ ನೊಂದಾಯಿತ ಅಥ್ಲೀಟುಗಳ ಈ ಗುಂಪಿನಲ್ಲಿ ಈ ಹಿಂದೆ ಕ್ರಿಕೆಟಿಗರಾದ ಸ್ಮೃತಿ ಮಂದಾನ ಮತ್ತು ಶ್ರೇಯಸ್ ಅಯ್ಯರ್ ಇದ್ದರು. ಅವರ ಸ್ಥಾನಕ್ಕೆ ಅಭಿಷೇಕ್ ಮತ್ತು ಅಕ್ಷರ್ ಅವರನ್ನು ಸೇರ್ಪಡೆ ಮಾಡಲಾಗಿದೆ. ಒಟ್ಟು 348 ಮಂದಿ ಈ ಗುಂಪಿನಲ್ಲಿರುತ್ತಾರೆ.

ಈ ಕ್ರೀಡಾಪಟುಗಳು ನಾಡಾಕ್ಕೆ ತಾವು ಇರುವ ಸ್ಥಳವನ್ನು (ವೇರಬೌಟ್ಸ್) ಮತ್ತು ಪ್ರತಿ ದಿನ ಪರೀಕ್ಷೆಗೆ ಲಭ್ಯವಿರುವ ನಿರ್ದಿಷ್ಟ ಅವಧಿಯನ್ನು (ವಿಂಡೊ) ನಾಡಾಕ್ಕೆ ತಿಳಿಸಬೇಕಾಗುತ್ತದೆ. ಮೂರು ಬಾರಿ ತಾವಿರುವ ತಾಣ ತಿಳಿಸಲು ವಿಫಲರಾದಲ್ಲಿ ಅದನ್ನು ಡೋಪಿಂಗ್ ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್ಪ್ರೀತ್ ಬೂಮ್ರಾ, ಕೆ.ಎಲ್.ರಾಹುಲ್, ಅರ್ಷದೀಪ್ ಸಿಂಗ್ ಮತ್ತು ತಿಲಕ್ ವರ್ಮಾ ಅವರೂ ಆರ್ಟಿಪಿಯಲ್ಲಿ ಒಳಗೊಂಡಿದ್ದಾರೆ. ಮಹಿಳಾ ತಂಡದ ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ಕೂಡ ಮುಂದುವರಿದಿದ್ದಾರೆ. ಪಟ್ಟಿಯಲ್ಲಿ ಒಟ್ಟು 14 ಮಂದಿ ಕ್ರಿಕೆಟ್ಪಟುಗಳಿದ್ದಾರೆ.

ಈ ಹಿಂದಿನ ಪಟ್ಟಿಯಲ್ಲಿ 118 ಅಥ್ಲೀಟುಗಳಿದ್ದು, ಈ ಸಂಖ್ಯೆ 134ಕ್ಕೆ ಏರಿಕೆಯಾಗಿದೆ. ಮೂವರು ಬಿಲ್ಗಾರರು (ದೀಪಿಕಾ ಕುಮಾರಿ, ಶೀತಲ್ ದೇವಿ, ರಾಕೇಶ್ ಕುಮಾರ್), 22 ಬಾಕ್ಸಿಂಗ್ ಪಟುಗಳು, ಅಮನ್ ಸೆಹ್ರಾವತ್ ಸೇರಿ 31 ಮಂದಿ ಕುಸ್ತಿಪಟುಗಳು ಟೆಸ್ಟಿಂಗ್ ಪೂಲ್ನಲ್ಲಿ ಒಳಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.