ಕೋಲ್ಕತ್ತ: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನಿಯಮವನ್ನು ಉಲ್ಲಂಘಿಸಿದ ಕಾರಣ ಎಸ್ಆರ್ಎಚ್ ತಂಡದ ಉಪ ನಾಯಕ ಅಭಿಷೇಕ್ ಶರ್ಮಾ ಅವರಿಗೆ ಪಂದ್ಯದ ಸಂಭಾವನೆಯ ಶೇ 25ರಷ್ಟು ದಂಡವನ್ನು ವಿಧಿಸಲಾಗಿದೆ.

ಅಭಿಷೇಕ್ ಶರ್ಮಾಗೆ ದಂಡದ ಜತೆಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ, 21 ಎಸೆತಗಳಲ್ಲಿ 48 ರನ್ ಗಳಿಸಿದ್ದ ವೇಳೆ ವರುಣ್ ಚಕ್ರವರ್ತಿಗೆ ಕ್ಯಾಚ್ ನೀಡಿದ್ದರು. ಆ ವೇಳೆ ಮೂರನೇ ಅಂಪೈರ್ ನಿತಿನ್ ಮೆನನ್ ಕೂಡ ಔಟ್ ನೀಡಿದರು. ಫೆವಿಲಿಯನ್ ಕಡೆ ಸಾಗುವಾಗ ಅಭಿಷೇಕ್ ಶರ್ಮಾ ಅವರು ಅನುಚಿತ ವರ್ತನೆ ತೋರಿಸಿದ ಕಾರಣ ದಂಡವನ್ನು ವಿಧಿಸಲಾಗಿದೆ.

ಆರ್ಟಿಕಲ್ 2.3ರ ಪ್ರಕಾರ ಮ್ಯಾಚ್ ರೆಫ್ರಿ ನಿರ್ಧಾರವೇ ಅಂತಿಮ. ಇದು ಮೊದಲನೇ ಹಂತದ ಉಲ್ಲಂಘನೆಯಾಗಿದ್ದು, ಪಂದ್ಯದ ನಂತರ ಅಭಿಷೇಕ್ ಶರ್ಮಾ, ಇದನ್ನು ಒಪ್ಪಿಕೊಂಡಿದ್ದಾರೆ.

ಅಭಿಷೇಕ್ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 226 ರನ್ ಗಳಿಸಿದ್ದ ಎಸ್ಆರ್ಎಚ್, ಕೆಕೆಆರ್ ವಿರುದ್ಧ 65 ರನ್ಗಳ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.