ನವದೆಹಲಿ: ನಿನ್ನೆ (ಮಾರ್ಚ್ 12) ನಡೆದ ದಿ ಹಂಡ್ರೆಡ್ ಲೀಗ್ 2026ರ ಹರಾಜಿನಲ್ಲಿ ಅನೇಕ ಆಟಗಾರರನ್ನು ವಿವಿಧ ಫ್ರಾಂಚೈಸಿಗಳು ಖರೀದಿ ಮಾಡಿದ್ದಾರೆ. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಫ್ರಾಂಚೈಸಿಯು ಹಂಡ್ರೆಡ್ ಲೀಗ್ನಲ್ಲಿ ಪಾಕಿಸ್ತಾನದ ಆಟಗಾರನನ್ನು ಖರೀದಿಸಿದೆ.

ಸದ್ಯ, ಹಂಡ್ರೆಡ್ ಲೀಗ್ ಆಡಲು ಅನೇಕ ಆಟಗಾರರನ್ನು ವಿವಿಧ ಫ್ರಾಂಚೈಸಿಗಳು ಖರೀದಿಸಿವೆ. ಆದರೆ, ಪಾಕಿಸ್ತಾನದ ಅಬ್ರಾರ್ ಅಹ್ಮದ್ ಮಾತ್ರ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅವರನ್ನು ಕಾವ್ಯಾ ಮಾರನ್ ಒಡೆತನದ ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ₹2.34 ಕೋಟಿ ಕೊಟ್ಟು ಖರೀದಿಸಿದೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕೀಯ ಸಂಘರ್ಷ ಇರುವುದರಿಂದ ಪಾಕಿಸ್ತಾನದ ಕ್ರಿಕೆಟ್ ಆಟಗಾರರನ್ನು ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ನಿಷೇಧಿಸಲಾಗಿದೆ.

ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲಕಿಯಾಗಿರುವ ಕಾವ್ಯಾ ಮಾರನ್ ಅವರು ಹಂಡ್ರೆಡ್ ಲೀಗ್ನಲ್ಲಿ ಸನ್ರೈಸರ್ಸ್ ಲೀಡ್ಸ್ ಎಂಬ ತಂಡದ ಮಾಲಿಕತ್ವ ಹೊಂದಿದ್ದಾರೆ.

ಹಾಗಾಗಿ, ಭಾರತೀಯ ಮೂಲದ ಫ್ರಾಂಚೈಸಿಯು ಪಾಕಿಸ್ತಾನದ ಆಟಗಾರನನ್ನು ಖರೀದಿಸಿರುವುದಕ್ಕೆ ಭಾರತದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಈ ಬಾರಿಯ ಹಂಡ್ರೆಡ್ ಲೀಗ್ ಜುಲೈ 21ರಿಂದ ಪ್ರಾರಂಭವಾಗಲಿದೆ.

ಹಂಡ್ರೆಡ್ ಲೀಗ್ನ ಪ್ರತೀ ಪಂದ್ಯಾವಳಿಯು 100 ಎಸೆತಗಳಿಗೆ ಸೀಮಿತವಾಗಿರಲಿದ್ದು, 8 ಫ್ರಾಂಚೈಸಿಗಳು ಭಾಗವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.