ಮಸ್ಕತ್: ಅಫ್ಗಾನಿಸ್ತಾನ ಎ ತಂಡವು ಎಸಿಸಿ ಎಮರ್ಜಿಂಗ್ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ನಲ್ಲಿ ಭಾರತ ಎ ತಂಡವನ್ನು 20 ರನ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಗಾನಿಸ್ತಾನ ತಂಡವು ಶೇದಿಕುಲ್ಲಾ ಅಟಲ್ (83;52ಎ) ಮತ್ತು ಜುಬೈದ್ ಅಕ್ಬರಿ (64;41ಎ) ಅವರ ಬ್ಯಾಟಿಂಗ್ ಬಲದಿಂದ 20 ಓವರ್ಗಳಲ್ಲಿ 4 ವಿಕೆಟ್ಗೆ 206 ರನ್ ಗಳಿಸಿದೆ. ಭಾರತ ಪರ ರಾಸಿಖ್ ಸಲಾಂ ಮೂರು ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಭಾರತವು ನಿಗದಿತ ಓವರ್ಗಳಲ್ಲಿ 7 ವಿಕೆಟ್ಗೆ 186 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ರಮಣದೀಪ್ ಸಿಂಗ್ (64;34ಎ) ಏಕಾಂಗಿ ಹೋರಾಟ ನಡೆಸಿದರೂ ಗೆಲುವಿಗೆ ಸಾಕಾಗಲಿಲ್ಲ.

ಭಾನುವಾರ ಫೈನಲ್ನಲ್ಲಿ ಅಫ್ಗನ್ ತಂಡವು ಶ್ರೀಲಂಕಾ ಎ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್ನಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನ ಶಾಹೀನ್ಸ್ ತಂಡವನ್ನು ಏಳು ವಿಕೆಟ್ಗಳಿಂದ ಮಣಿಸಿದೆ.

ಸಂಕ್ಷಿಪ್ತ ಸ್ಕೋರ್: ಅಫ್ಗಾನಿಸ್ತಾನ ಎ: 20 ಓವರ್ಗಳಲ್ಲಿ 20 ಓವರ್ಗಳಲ್ಲಿ 4ಕ್ಕೆ 206 (ಜುಬೈದ್ ಅಕ್ಬರಿ 64, ಶೇದಿಕುಲ್ಲಾ ಅಟಲ್ 83, ಕರೀಂ ಜನೆತ್ 41; ರಾಸಿಖ್ ಸಲಾಂ 25ಕ್ಕೆ 3). ಭಾರತ ಎ: 20 ಓವರ್ಗಳಲ್ಲಿ 7ಕ್ಕೆ 186 (ನೆಹಾಲ್ ವಧೇರಾ 20, ರಮಣದೀಪ್ ಸಿಂಗ್ 64, ನಿಶಾಂತ್ ಸಿಂಧು 23; ಎ.ಎಂ. ಗಜನ್ಫರ್ 14ಕ್ಕೆ 2, ಅಬ್ದುಲ್ ರೆಹಮಾನ್ 32ಕ್ಕೆ 2). ಫಲಿತಾಂಶ: ಅಫ್ಗಾನಿಸ್ತಾನಕ್ಕೆ 20 ರನ್ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.