ವಾಡೇಕರ್‌ಗೆ ದಿಗ್ಗಜರ ನಮನ

7

ವಾಡೇಕರ್‌ಗೆ ದಿಗ್ಗಜರ ನಮನ

Published:
Updated:

ನವದೆಹಲಿ: ಹಿರಿಯ ಕ್ರಿಕೆಟಿಗ ಅಜಿತ್‌ ವಾಡೇಕರ್‌ ನಿಧನಕ್ಕೆ ಸಚಿನ್‌ ತೆಂಡೂಲ್ಕರ್‌, ಅನಿಲ್‌ ಕುಂಬ್ಳೆ ಮತ್ತು ಮೊಹಮ್ಮದ್‌ ಅಜರುದ್ದೀನ್‌ ಸೇರಿದಂತೆ ಅನೇಕ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ಕಂಬನಿ ಮಿಡಿದಿದ್ದಾರೆ.

ವಾಡೇಕರ್‌ ನಿಧನದ ಸುದ್ದಿ ತಿಳಿದು ನೋವಾಯಿತು. 90ರ ದಶಕದಲ್ಲಿ ಆಡಿದ ನನ್ನಂತಹ ಅನೇಕ ಕ್ರಿಕೆಟಿಗರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ಸಚಿನ್‌ ತೆಂಡೂಲ್ಕರ್‌

**

ವಾಡೇಕರ್‌, ಕ್ರಿಕೆಟ್‌ ಲೋಕದ ಧ್ರುವತಾರೆಗಳಲ್ಲಿ ಒಬ್ಬರು. ಅವರು ನನಗೆ ತಂದೆ ಸಮಾನರಾಗಿದ್ದರು. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ಕರುಣಿಸಲಿ.
-ಮೊಹಮ್ಮದ್‌ ಅಜರುದ್ದೀನ್‌

***

ಯುವ ಕ್ರಿಕೆಟಿಗರಿಗೆ ಆದರ್ಶವಾಗಿದ್ದರು. ಅವರೊಂದಿಗಿನ ಒಡನಾಟ ಎಂದೂ ಮರೆಯಲಾರದಂತಹದ್ದು.
-ಅನಿಲ್‌ ಕುಂಬ್ಳೆ

**

ವಾಡೇಕರ್‌, ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅವರ ಅಗಲಿಕೆ ನೋವು ತಂದಿದೆ.
-ಸಂಜಯ್‌ ಮಾಂಜ್ರೇಕರ್‌

**

ನಾನು ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಾಯಕ, ಕೋಚ್‌, ಆಯ್ಕೆಗಾರನಾಗಿ ಅವರು ಸಲ್ಲಿಸಿದ ಸೇವೆ ಎಂದಿಗೂ ಮರೆಯಲಾರದ್ದು.
-ಬಿಷನ್‌ ಸಿಂಗ್‌ ಬೇಡಿ

**

ಟೆಸ್ಟ್‌ ಆಡಲು ಶುರು ಮಾಡಿದಾಗ ಅಮೂಲ್ಯ ಸಲಹೆಗಳನ್ನು ನೀಡಿ ನನ್ನಲ್ಲಿ ಆತ್ಮಸ್ಥೈರ್ಯ ಮೂಡುವಂತೆ ಮಾಡಿದವರು ವಾಡೇಕರ್‌. ಅವರ ಹೆಸರು ಅಜರಾಮರ.
-ವಿನೋದ್‌ ಕಾಂಬ್ಳಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !