ಟಾಸ್‌ ಗೆದ್ದ ಅಫ್ಗಾನಿಸ್ತಾನ; ಶ್ರೀಲಂಕಾ ಬ್ಯಾಟಿಂಗ್‌

ಮಂಗಳವಾರ, ಜೂನ್ 25, 2019
26 °C
ವಿಶ್ವಕಪ್‌ ಕ್ರಿಕೆಟ್‌

ಟಾಸ್‌ ಗೆದ್ದ ಅಫ್ಗಾನಿಸ್ತಾನ; ಶ್ರೀಲಂಕಾ ಬ್ಯಾಟಿಂಗ್‌

Published:
Updated:

ಕಾರ್ಡಿಫ್‌: ಆಡಿರುವ ಮೊದಲ ಪಂದ್ಯಗಳಲ್ಲಿ ಸೋಲು ಕಂಡಿರುವ ಅಫ್ಗಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ. ಮಂಗಳವಾರ ಕಾರ್ಡಿಫ್‌ ವೇಲ್ಸ್‌ನಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್‌ ಗೆದ್ದಿರುವ ಅಫ್ಗಾನಿಸ್ತಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. 

ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡ ಅಫ್ಗಾನಿಸ್ತಾನ ಹಾಗೂ ನ್ಯೂಜಿಲೆಂಡ್‌ ಎದುರು ಕಳಪೆ ಪ್ರದರ್ಶನ ತೋರಿದ್ದ ಶ್ರೀಲಂಕಾ ತಂಡಗಳು ಪೂರ್ಣ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿವೆ. ಅಫ್ಗಾನಿಸ್ತಾನದ ಪ್ರಭಾವಿ ಬೌಲಿಂಗ್‌ ಎದುರು ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಆರ್ಭಟಿಸುವರೇ? ಕಾದು ನೋಡಬೇಕಿದೆ. 

ಕ್ಷಣಕ್ಷಣದ ಸ್ಕೋರ್‌: https://bit.ly/2wzHipB

ತಂಡಗಳು:

ಶ್ರೀಲಂಕಾ: ದಿಮುತ್ ಕರುಣಾರತ್ನೆ (ನಾಯಕ), ಧನಂಜಯ ಡಿಸಿಲ್ವ, ಆವಿಷ್ಕ ಫರ್ನಾಂಡೊ, ಸುರಂಗ ಲಕ್ಮಲ್, ಲಸಿತ್ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್‌, ಕುಶಾಲ್ ಮೆಂಡಿಸ್‌, ಜೀವನ್ ಮೆಂಡಿಸ್‌, ಕುಶಾಲ್ ಪೆರೇರಾ (ವಿಕೆಟ್ ಕೀಪರ್), ತಿಸಾರ ಪೆರೇರಾ, ನುವಾನ್ ಪ್ರದೀಪ್, ಮಿಲಿಂದ ಸಿರಿವರ್ಧನ, ಲಾಹಿರು ತಿರಿಮನೆ, ಇಸುರು ಉದಾನ, ಜೆಫ್ರಿ ವಂಡರ್ಸೆ

ಅಫ್ಗಾನಿಸ್ತಾನ: ಗುಲ್ಬದಿನ್ ನಯೀಬ್ (ನಾಯಕ), ಅಸ್ಗರ್ ಅಫ್ಗಾನ್, ಅಫ್ತಾಬ್ ಆಲಂ, ನೂರ್ ಅಲಿ ಜದ್ರಾನ್, ಹಮೀದ್ ಹಸನ್, ರಶೀದ್ ಖಾನ್, ಮೊಹಮ್ಮದ್ ನಬಿ, ರಹಮತ್ ಶಾ, ಹಶ್ಮತ್ ಉಲ್ಲಾ ಶಾಹಿದಿ, ಮೊಹಮ್ಮದ್ ಶೆಹಜಾದ್ (ವಿಕೆಟ್ ಕೀಪರ್), ಶಮೀವುಲ್ಲಾ ಶಿನ್ವಾರಿ, ಮುಜೀಬ್ ಉರ್ ರೆಹಮಾನ್, ದೌಲತ್ ಜದ್ರಾನ್, ನಜೀಬುಲ್ಲ ಜದ್ರಾನ್, ಹಜ್ರತ್ ಜಜಾಯ್.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !