ಶನಿವಾರ, ಡಿಸೆಂಬರ್ 14, 2019
24 °C

ಅಫ್ಗಾನ್‌ಗೆ ಸರಣಿ ಜಯದ ಸಂಭ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಆರಂಭಿಕ ಬ್ಯಾಟ್ಸ್‌ಮನ್‌ ರಹಮಾನುಲ್ಲ ಗುರ್ಬಾಜ್ (79; 52 ಎಸೆತ, 5 ಸಿಕ್ಸರ್‌, 6 ಬೌಂಡರಿ) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಅಫ್ಗಾನಿಸ್ತಾನ ತಂಡ ವೆಸ್ಟ್ ಇಂಡೀಸ್‌ ವಿರುದ್ಧ 29 ರನ್‌ಗಳ ಜಯ ಗಳಿಸಿತು. ಈ ಮೂಲಕ 3 ಪಂದ್ಯಗಳ ಟ್ವೆಂಟಿ–20 ಸರಣಿಯನ್ನು 2–1ರಲ್ಲಿ ತನ್ನದಾಗಿಸಿಕೊಂಡಿತು.

ಭಾನುವಾರ ರಾತ್ರಿ ನಡೆದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನ 8ಕ್ಕೆ 156 ರನ್ ಕಲೆ ಹಾಕಿತು. ಸವಾಲಿನ ಮೊತ್ತ ಬೆನ್ನತ್ತಿದ ವೆಸ್ಟ್ ಇಂಡೀಸ್‌ ನವೀನ್ ಉಲ್ ಹಕ್ ದಾಳಿಗೆ ನಲುಗಿತು. ತಂಡದ ಪರ ಶಾಯ್ ಹೋಪ್ (52; 46ಎ, 1 ಸಿ, 3 ಬೌಂ) ಏಕಾಂಗಿ ಹೋರಾಟ ನಡೆಸಿದರು.

ಸಂಕ್ಷಿಪ್ತ ಸ್ಕೋರು: ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 8ಕ್ಕೆ 156 (ರಹಮಾನುಲ್ಲ ಗುರ್ಬಾಜ್‌ 79, ಅಸ್ಗರ್ ಅಫ್ವಾನ್ 24; ಶೆಲ್ಡನ್ ಕಾಟ್ರೆಲ್ 29ಕ್ಕೆ2, ವಿಲಿಯಮ್ಸ್‌ 31ಕ್ಕೆ2, ಕೀಮೊ ಪೌಲ್ 26ಕ್ಕೆ2); ವೆಸ್ಟ್ ಇಂಡೀಸ್‌: 20 ಓವರ್‌ಗಳಲ್ಲಿ 7ಕ್ಕೆ 127 (ಎವಿನ್ ಲೂಯಿಸ್‌ 24, ಶಾಯ್ ಹೋಪ್ 52; ಮುಜೀಬ್‌ ಉರ್‌ ರಹಿಮಾನ್ 9ಕ್ಕೆ1, ನವೀನ್ ಉಲ್ ಹಕ್ 24ಕ್ಕೆ3, ಕರೀಂ ಜನ್ನತ್ 33ಕ್ಕೆ1, ಗುಲ್ಬದಿನ್ ನಯೀಬ್ 26ಕ್ಕೆ1, ರಶೀದ್ ಖಾನ್ 18ಕ್ಕೆ1). ಫಲಿತಾಂಶ: ಅಫ್ಗಾನಿಸ್ತಾನಕ್ಕೆ 29 ರನ್‌ಗಳ ಜಯ; 2–1ರಲ್ಲಿ ಸರಣಿ ಗೆಲುವು. ಪಂದ್ಯಶ್ರೇಷ್ಠ: ರಹಮಾನುಲ್ಲ ಗುರ್ಬಾಜ್‌. ಸರಣಿಯ ಶ್ರೇಷ್ಠ ಆಟಗಾರ: ಕರೀಂ ಜನ್ನತ್‌.

ಪ್ರತಿಕ್ರಿಯಿಸಿ (+)