ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೆಸ್ಟ್‌’ನಲ್ಲಿ ಮೊದಲ ದಿನವೇ ಮುನ್ನಡೆ ಗಳಿಸಿದ ಭಾರತ ‘ಎ’

Last Updated 29 ನವೆಂಬರ್ 2022, 15:42 IST
ಅಕ್ಷರ ಗಾತ್ರ

ಕಾಕ್ಸ್‌ ಬಜಾರ್, ಬಾಂಗ್ಲಾದೇಶ (ಪಿಟಿಐ): ಮಧ್ಯಮವೇಗಿ ನವದೀಪ್ ಸೈನಿ ಮತ್ತು ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಅವರ ದಾಳಿಯ ಮುಂದೆ ಬಾಂಗ್ಲಾದೇಶ ಎ ತಂಡವು ಕುಸಿಯಿತು. ಮಂಗಳವಾರ ಇಲ್ಲಿ ಆರಂಭವಾದ ‘ಟೆಸ್ಟ್‌’ನಲ್ಲಿ ಭಾರತ ಎ ತಂಡವು ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಶೇಖ್ ಕಮಾಲ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸೈನಿ (21ಕ್ಕೆ3) ಹಾಗೂ ಸೌರಭ್ (23ಕ್ಕೆ4) ಅವರ ಪರಿಣಾಮಕಾರಿ ದಾಳಿಯಿಂದಾಗಿ ಆತಿಥೇಯ ತಂಡವು 45 ಓವರ್‌ಗಳಲ್ಲಿ 112 ರನ್ ಗಳಿಸಿ ಆಲೌಟ್ ಆಯಿತು.

ಅದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಭಾರತ ‘ಎ’ ತಂಡವು ದಿನದಾಟದ ಅಂತ್ಯಕ್ಕೆ 36 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 120 ರನ್ ಗಳಿಸಿದೆ. ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ (ಬ್ಯಾಟಿಂಗ್ 61; 106ಎ, 4X8) ಮತ್ತು ನಾಯಕ ಅಭಿಮನ್ಯು ಈಶ್ವರನ್ (ಬ್ಯಾಟಿಂಗ್ 53; 111ಎ, 4X6) ತಂಡಕ್ಕೆ ಇನಿಂಗ್ಸ್ ಮುನ್ನಡೆಯ ಕಾಣಿಕೆ ನೀಡಿದರು. ತಂಡವು ಎಂಟು ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 45 ಓವರ್‌ಗಳಲ್ಲಿ 112 (ಮೊಸಾದಿಕ್ ಹುಸೇನ್ 63, ಮುಕೇಶ್ ಕುಮಾರ್ 25ಕ್ಕೆ2, ನವದೀಪ್ ಸೈನಿ 21ಕ್ಕೆ3, ಸೌರಭ್ ಕುಮಾರ್ 23ಕ್ಕೆ4) ಭಾರತ ಎ: 36 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 120 (ಯಶಸ್ವಿ ಜೈಸ್ವಾಲ್ ಔಟಾಗದೆ 61, ಅಭಿಮನ್ಯು ಈಶ್ವರನ್ ಔಟಾಗದೆ 53)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT