ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ವಿಚಾರವಾಗಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ಸಿದ್ದರಾಮಯ್ಯ

Last Updated 6 ಮೇ 2018, 6:48 IST
ಅಕ್ಷರ ಗಾತ್ರ

ಬೆಂಗಳೂರು: ಮಹದಾಯಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಜನರನ್ನು ತಪ್ಪು ದಾರಿಗೆ ಎಳೆಯುವ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ , ಮೋದಿಯವರ ವಾಕರಿಕೆ ತರಿಸುವ ಈ ಹೇಳಿಕೆಗಳನ್ನು ಜನ ಒಪ್ಪುವುದಿಲ್ಲ ಎಂದರು.
ಮಹದಾಯಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಪ್ರಧಾನಿಯವರದ್ದಾಗಿತ್ತು. ಅದನ್ನು ಅವರು ನಿಭಾಯಿಸಲ್ಲಿಲ್ಲ. 2007 ರಲ್ಲಿ ಸೋನಿಯಾಗಾಂಧಿ ಪ್ರಧಾನಿ ಆಗಿದ್ದರೆ? ಎಂದೂ ಅವರು ಪ್ರಶ್ನಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೀಳು ಮಟ್ಟದ ಭಾಷೆ ಬಳಸಿ ಪ್ರಚಾರ ನಡೆಸುತ್ತಿದ್ದು, ಹೇಸಿಗೆ ಮತ್ತು ವಾಕರಿಕೆ ತರಿಸುವಂತಿದೆ ಎಂದರು. 

ಇಲ್ಲಿನ ಬಿಜೆಪಿ ನಾಯಕರಿಗೆ ಫೇಸ್ ವ್ಯಾಲ್ಯೂನೇ ಇಲ್ಲ. ಆದ್ದರಿಂದ ಮೋದಿ ಮತ್ತು ಅಮಿತ್ ಶಾ ಅವರನ್ನು ಕರೆಸಿದ್ದಾರೆ. ಇದು ರಾಜ್ಯದ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ತಮ್ಮ ಕೈಯಲ್ಲಿ ಆಗದ ಕಾರಣ ಮೋದಿಯರ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿವರೆಗೆ ಏಳರಿಂದ ಎಂಟು ಬಾರಿ ಬಂದು ಹೋಗಿದ್ದಾರೆ. ಅವರ ಪ್ರಭಾವ ಆಗಿಲ್ಲ. ಇವರು ಪ್ರಚಾರದಲ್ಲಿ ಬಳಸುತ್ತಿರುವ ಭಾಷೆ ನಾಗರೀಕವಲ್ಲ, ಕೀಳು ಮಟ್ಟದ ಅಸಂಸದೀಯ ಪದಗಳನ್ನು ಬಳಕೆ ಮಾಡುತ್ತಿದ್ದರೆ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT