ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ಗೆ ಅಮಿತಾಭ್ ಬಚ್ಚನ್ ರಾಯಭಾರಿ

Last Updated 9 ಡಿಸೆಂಬರ್ 2021, 13:27 IST
ಅಕ್ಷರ ಗಾತ್ರ

ಬೆಂಗಳೂರು: ನಟ ಅಮಿತಾಬ್ ಬಚ್ಚನ್ ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರನ್ನೊಳಗೊಂಡ ಲೆಜೆಂಡ್ಸ್ ಲೀಗ್‍ ಕ್ರಿಕೆಟ್‌ನ ರಾಯಭಾರಿಯಾಗಿದ್ದಾರೆ. ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಲೀಗ್‌ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಲೀಗ್ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತಾಬ್ ‘ಹಳೆಯ ನೆನಪುಗಳನ್ನು ಮೆಲುಕು ಹಾಕಲು ಇದು ಉತ್ತಮ ವೇದಿಕೆಯಾಗಲಿದ್ದು ಪಂದ್ಯಗಳನ್ನು ವೀಕ್ಷಿಸಲು ಕಾತರನಾಗಿದ್ದೇನೆ’ ಎಂದಿದ್ದಾರೆ.

ಭಾರತ, ಏಷ್ಯಾ ಮತ್ತು ವಿಶ್ವ ಇತರೆ ತಂಡಗಳ ನಡುವೆ ನಡೆಯಲಿರುವ ಲೀಗ್‌ನ ಪಂದ್ಯಗಳಿಗೆ ಒಮನ್‍ನ ಅಲ್ ಅಮೆರತ್ ಕ್ರೀಡಾಂಗಣ ಮುಂದಿನ ವರ್ಷದ ಜನವರಿಯಲ್ಲಿ ಆತಿಥ್ಯ ನೀಡಲಿದೆ.

’ಅಮಿತಾಬ್ ಬಚ್ಚನ್ ಜಾಗತಿಕ ಐಕಾನ್ ಆಗಿದ್ದು ಲೆಜೆಂಡ್ಸ್‌ ಲೀಗ್‌ಗೆ ರಾಯಭಾರಿಯಾಗಲು ಅವರಿಗಿಂತ ಸೂಕ್ತ ವ್ಯಕ್ತಿ ಬೇರೆ ಇಲ್ಲ. ಕ್ರೀಡಾ ಪ್ರೇಮಿಯೂ ಆಗಿರುವ ಅವರನ್ನು ಕ್ರೀಡಾ ಜಗತ್ತು ಕೂಡ ಗೌರವಿಸುತ್ತಿದೆ’ ಎಂದು ಲೀಗ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮಣ್ ರಹೇಜಾ ಹೇಳಿದ್ದಾರೆ.

ಲೀಗ್‍ ಕಮಿಷನರ್ ಆಗಿ ನೇಮಕಗೊಂಡಿರುವ ರವಿಶಾಸ್ತ್ರಿ ಕೂಡ ಬಚ್ಚನ್ ರಾಯಭಾರಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

’ಚಿತ್ರರಂಗದ ಶೆಹನ್‍ಶಾ ಹಾಗೂ ಎಲ್ಲರ ಹೃದಯದ ಡಾನ್ ಆಗಿರುವ ಬಚ್ಚನ್ ಅವರು ಲೀಗ್‌ನ ಸಾರ ಮತ್ತು ಸಂದೇಶವನ್ನು ಜಗತ್ತಿನೆಲ್ಲೆಡೆ ಕೊಂಡೊಯ್ಯಲು ನಮ್ಮೊಂದಿಗೆ ಇರಲಿದ್ದಾರೆ’ ಎಂದು ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT