ಸೋಮವಾರ, ಆಗಸ್ಟ್ 26, 2019
20 °C

ಆ್ಯಷಸ್‌ ಟೆಸ್ಟ್‌: ಎರಡನೇ ಪಂದ್ಯಕ್ಕೆ ಆ್ಯಂಡರ್‌ಸನ್‌ ಅಲಭ್ಯ

Published:
Updated:
Prajavani

ಲಂಡನ್‌: ಇಂಗ್ಲೆಂಡ್‌ ತಂಡದ ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌, ಆಸ್ಟ್ರೇಲಿಯಾ ಎದುರಿನ ಆ್ಯಷಸ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ ವೇಳೆ ಜೇಮ್ಸ್‌ ಗಾಯಗೊಂಡಿದ್ದರು. ಹೀಗಾಗಿ ಅವರು ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡಿರಲಿಲ್ಲ.

‘ಜೇಮ್ಸ್‌ ಅವರಿಗೆ ಗಂಭೀರ ಗಾಯವಾಗಿರುವುದು ಎಂ.ಆರ್‌.ಐ ಯಿಂದ ದೃಢಪಟ್ಟಿದೆ. ಅವರು ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿದ್ದು ಇಂಗ್ಲೆಂಡ್‌ ಮತ್ತು ಲ್ಯಾಂಕ್‌ಶೈರ್‌ ವೈದ್ಯಕೀಯ ತಂಡವು ಚಿಕಿತ್ಸೆ ನೀಡಲಿದೆ. ಜೇಮ್ಸ್‌ ಅವರು ಎರಡನೇ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಬೇಗನೆ ಗುಣಮುಖರಾದರೆ ಮುಂದಿನ ಪಂದ್ಯಗಳಲ್ಲಿ ಅವಕಾಶ ನೀಡಲಾಗುವುದು’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ದ್ವಿತೀಯ ಟೆಸ್ಟ್‌ ಪಂದ್ಯವು ಆಗಸ್ಟ್‌ 14ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಸೋಮವಾರ ಮುಗಿದ ಮೊದಲ ಹಣಾಹಣಿಯಲ್ಲಿ ಆಸ್ಟ್ರೇಲಿಯಾ 251ರನ್‌ಗಳಿಂದ ಗೆದ್ದಿತ್ತು.

Post Comments (+)