ಬುಧವಾರ, ನವೆಂಬರ್ 13, 2019
18 °C

ಮೆಕ್‌ಡೊನಾಲ್ಡ್‌ ರಾಜಸ್ಥಾನ ಕೋಚ್‌

Published:
Updated:
Prajavani

ನವದೆಹಲಿ: ಐಪಿಎಲ್‌ ಫ್ರಾಂಚೈಸ್‌ ರಾಜಸ್ಥಾನ ರಾಯಲ್ಸ್ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಆಸ್ಟ್ರೇಲಿಯದ ಹಿರಿಯ ಕ್ರಿಕೆಟಿಗ ಆ್ಯಂಡ್ರ್ಯೂಮೆಕ್‌ಡೊನಾಲ್ಡ್‌ ನೇಮಕಗೊಂಡಿದ್ದಾರೆ. ಈ ಕುರಿತು ಸೋಮವಾರ ಫ್ರಾಂಚೈಸ್‌ ಪ್ರಕಟಣೆ ನೀಡಿದೆ.

ದಕ್ಷಿಣ ಆಫ್ರಿಕಾದ ಪ್ಯಾಡ್ಡಿ ಅಪ್ಟನ್‌ ಸ್ಥಾನಕ್ಕೆ ಮೆಕ್‌ಡೊನಾಲ್ಡ್‌ ಅವರನ್ನು ನೇಮಿಸಲಾಗಿದೆ. ಅವರ ಅಧಿಕಾರ ಅವಧಿ ಮೂರು ವರ್ಷಗಳು. 2019ರ ಋತುವಿನ ಐಪಿಎಲ್‌ನಲ್ಲಿ ರಾಜಸ್ಥಾನ ನಿರಾಶಾದಾಯಕ ಆಟ ಆಡಿತ್ತು.

38 ವರ್ಷದ ಆಲ್‌ರೌಂಡರ್‌ ಮೆಕ್‌ಡೊನಾಲ್ಡ್‌, ಆಸ್ಟ್ರೇಲಿಯ ಪರ ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. 2009–2013ರ ಅವಧಿಯಲ್ಲಿ ಐಪಿಎಲ್‌ನಲ್ಲಿ ಆಟಗಾರನಾಗಿ ಕಣಕ್ಕಿಳಿದಿದ್ದರು. 2016ರಲ್ಲಿ ನಿವೃತ್ತಿ ಘೋಷಿಸಿದ್ದ ಅವರು ಬಳಿಕ ವಿವಿಧ ತಂಡಗಳಿಗೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ.

2008ರಲ್ಲಿ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ರಾಜಸ್ಥಾನ, ನಂತರ ಹೆಚ್ಚು ಸದ್ದು ಮಾಡಿಲ್ಲ.

ಪ್ರತಿಕ್ರಿಯಿಸಿ (+)