ಶನಿವಾರ, ಫೆಬ್ರವರಿ 27, 2021
30 °C
ಕೆಎಸ್‌ಸಿಎ ಎಸ್‌.ಎ. ಶ್ರೀನಿವಾಸನ್ ಸ್ಮಾರಕ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿ

ಅನೀಶ್, ಮೋಹಿತ್ ಭರ್ಜರಿ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅನೀಶ್ ಕೆ.ವಿ. (169 ರನ್‌, 19 ಬೌಂಡರಿ, 2 ಸಿಕ್ಸರ್‌) ಅವರು ಗಳಿಸಿದ ಶತಕದ ಬಲದಿಂದ ಬೆಂಗಳೂರು ವಲಯ ತಂಡವು ಕೆಎಸ್‌ಸಿಎ ಎಸ್‌.ಎ. ಶ್ರೀನಿವಾಸನ್ ಸ್ಮಾರಕ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಮೊತ್ತ ಕಲೆಹಾಕಿತು. ಇಲ್ಲಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡು ದಿನಗಳ ಪಂದ್ಯದ ಮೊದಲ ದಿನ ಬೆಂಗಳೂರು ವಲಯ ತಂಡವು ಸಂಯುಕ್ತ ಸಿಟಿ ಇಲೆವನ್ ಎದುರು 336 ರನ್‌ ಗಳಿಸಿತು.

ಕಿಣಿ ಸ್ಪೋರ್ಟ್ಸ್ ಅರೆನಾದಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ಅಧ್ಯಕ್ಷರ ಇಲೆವನ್ ವಿರುದ್ಧ ಕಣಕ್ಕಿಳಿದಿರುವ ಬೆಂಗಳೂರು ಸಿಟಿ ಇಲೆವನ್ ತಂಡವು 6 ವಿಕೆಟ್ ಕಳೆದುಕೊಂಡು 330 ರನ್ ಗಳಿಸಿತು. ಬೆಂಗಳೂರು ಸಿಟಿ ಇಲೆವನ್ ತಂಡದ ಮೋಹಿತ್ ಬಿ.ಎ. (163, 24 ಬೌ, 1 ಸಿ) ಅಮೋಘ ಬ್ಯಾಟಿಂಗ್ ಮಾಡಿದರು.

ಸಂಕ್ಷಿಪ್ತ ಸ್ಕೋರುಗಳು

ಚಿನ್ನಸ್ವಾಮಿ ಕ್ರೀಡಾಂಗಣ: ಬೆಂಗಳೂರು ವಲಯ: 85.3 ಓವರ್‌ಗಳಲ್ಲಿ 336 (ಅನೀಶ್ ಕೆ.ವಿ 169, ಸುಜಯ್‌ ಎಸ್‌.ಎಸ್‌. 43, ಸಾಯಿ ಪ್ರಜ್ವಲ್ ರೆಡ್ಡಿ 68, ಆಯುಧ್ ಶರ್ಮಾ 21; ತಾಹ ಖಾನ್‌ 26ಕ್ಕೆ 4, ಡ್ಯಾನಿಶ್ ವುಲ್ಲಾ ಶರೀಫ್ 55ಕ್ಕೆ 5). ಸಂಯುಕ್ತ ಸಿಟಿ ಇಲೆವನ್: 2 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 11.

ಕಿಣಿ ಸ್ಪೋರ್ಟ್ಸ್ ಅರೆನಾ

ಬೆಂಗಳೂರು ಸಿಟಿ ಇಲೆವನ್‌: 90 ಓವರ್‌ಗಳಲ್ಲಿ 6 ವಿಕೆಟ್‌ಗೆ 330 (ರಾಜ್‌ಕುಮಾರ್ 29, ಮೋಹಿತ್ ಬಿ.ಎ. 163, ಶ್ರೀಹರಿ 20, ರೋಹಿತ್ ಕೆ. 55, ಶಾನ್ ತ್ರಿಸ್ತಾನ್ ಜೋಸೆಫ್‌ ಔಟಾಗದೆ 29; ಪುನೀತ್ ಎಸ್‌. 77ಕ್ಕೆ 2, ಪ್ರಜ್ವಲ್ ಪವನ್‌ 27ಕ್ಕೆ 2). ಅಧ್ಯಕ್ಷರ ಇಲೆವನ್‌ ವಿರುದ್ಧದ ಪಂದ್ಯ.

ಐಎಎಫ್ ಕ್ರೀಡಾಂಗಣ

ಮೊದಲ ಇನಿಂಗ್ಸ್: ಮೋಫುಶಿಲ್ ಇಲೆವನ್‌: 27.4 ಓವರ್‌ಗಳಲ್ಲಿ 79 (ಸುಧನ್ವ ಕುಲಕರ್ಣಿ 37; ಅಭಿಲಾಷ್ ಶೆಟ್ಟಿ 15ಕ್ಕೆ 3, ಶಶಾಂಕ್ ಕೆ. 25ಕ್ಕೆ 6). ಸಂಯುಕ್ತ ಮೋಫುಶಿಲ್ ಇಲೆವನ್‌: 39.3 ಓವರ್‌ಗಳಲ್ಲಿ 122 (ಕಿಶನ್ ಆರ್‌. ಬೆದಾರೆ 24, ಸಾಯಿಶಿವ ನಾರಾಯಣ್ ಎಲ್‌. 28, ಶಶಾಂಕ್‌ ಕೆ. 26; ವಿದ್ಯಾಧರ ಪಾಟೀಲ್‌ 13ಕ್ಕೆ 2, ವಿದ್ವತ್‌ ಕಾವೇರಪ್ಪ 22ಕ್ಕೆ 2, ಲಿಖಿತ್ ಬನ್ನೂರ 39ಕ್ಕೆ 2, ತುಷಾರ್ ಹರಿಕೃಷ್ಣ 9ಕ್ಕೆ 2). ಎರಡನೇ ಇನಿಂಗ್ಸ್:ಮೋಫುಶಿಲ್ ಇಲೆವನ್‌: 15 ಓವರ್‌ಗಳಲ್ಲಿ 3 ವಿಕೆಟ್‌ಗೆ 43 (ಚೇತನ ಎಲ್‌.ಆರ್‌. 29; ಅಭಿಲಾಷ್ ಶೆಟ್ಟಿ 3ಕ್ಕೆ 2).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು