ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಸಂಕಷ್ಟದ ಸಂದರ್ಭದಲ್ಲಿ SRH ಪರ ಅಬ್ಬರದ ಬ್ಯಾಟಿಂಗ್ ನಡೆಸಿದ ಅನಿಕೇತ್ ವರ್ಮಾ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಒಂದು ಹಂತದಲ್ಲಿ ಎಸ್ಆರ್ಹೆಚ್ ತಂಡವು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ತಂಡವು 180 ರ ಗಡಿ ದಾಟುವುದು ಕಠಿಣ ಎಂಬ ವಾತಾವರಣ ನಿರ್ಮಾಣವಾಗಿತ್ತು. ಈ ಹಂತದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಅನಿಕೇತ್ ವರ್ಮಾ ಕೇವಲ 18 ಎಸೆತಗಳಲ್ಲಿ 43 ರನ್ ಬಾರಿಸಿದರು. ಮಾತ್ರವಲ್ಲ, ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

2025 ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ ಅನಿಕೇತ್ ವರ್ಮಾ, ಆ ಋತುವಿನಲ್ಲಿ 12 ಇನಿಂಗ್ಸ್ಗಳಲ್ಲಿ 166.19 ಸ್ಟ್ರೈಕ್ ರೇಟ್ನಲ್ಲಿ 236 ರನ್ ಗಳಿಸಿದ್ದರು. 2026 ರ ಮೊದಲ ಪಂದ್ಯದಲ್ಲಿ 238.89 ರ ಅಮೋಘ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.

ಅನಿಕೇತ್ ವರ್ಮಾ ಯಾರು?

24 ವರ್ಷದ ಬಲಗೈ ಬ್ಯಾಟರ್ ಅನಿಕೇತ್ ವರ್ಮಾ ಮೂಲತಃ ಉತ್ತರ ಪ್ರದೇಶದ ಝಾನ್ಸಿಯವರು. ಅವರಿಗೆ 3 ವರ್ಷ ಇರುವಾಗ ತಾಯಿಯನ್ನು ಕಳೆದುಕೊಂಡರು. ಬಳಿಕ ಅವರು ಚಿಕ್ಕಪ್ಪನ ಆರೈಕೆಯಲ್ಲಿ ಬೆಳೆಯುತ್ತಾರೆ. ಸಾಮಾನ್ಯ ಕುಟುಂಬದಿಂದ ಬಂದ ಅವರಿಗೆ ಕ್ರಿಕೆಟ್ ಆಡಲು ಹಣಕಾಸಿನ ಸಮಸ್ಯೆ ಅಡ್ಡಿಯಾಗುವುದಿಲ್ಲ. ಕ್ರೀಡಾ ಸೌಲಭ್ಯಗಳ ಕೊರತೆಯ ಹೊರತಾಗಿಯೂ, ಅನಿಕೇತ್ ಭಾರತದ ಭರವಸೆಯ ಆಟಗಾರನಾಗಿದ್ದಾರೆ.

ಮೂಲತಃ ಉತ್ತರ ಪ್ರದೇಶದವರಾದರೂ, ಅವರು ದೇಶೀಯ ಕ್ರಿಕೆಟ್ನಲ್ಲಿ ಮಧ್ಯಪ್ರದೇಶ ಪರ ಆಡುತ್ತಾರೆ. ಐಪಿಎಲ್ 2025ರವರೆಗೆ, ಅನಿಕೇತ್ ವರ್ಮಾ ಮಧ್ಯಪ್ರದೇಶಕ್ಕಾಗಿ ಕೇವಲ 1 ಟಿ 20 ಪಂದ್ಯ ಮಾತ್ರ ಆಡಿದ್ದರು. ಆದರೆ, ಈಗ ಮಧ್ಯಪ್ರದೇಶ ತಂಡದ ಪರ 25 ಪಂದ್ಯಗಳನ್ನು ಆಡಿದ್ದಾರೆ.

ಮಧ್ಯಪ್ರದೇಶ ಪ್ರೀಮಿಯರ್ ಲೀಗ್ನಲ್ಲಿ ಅಮೋಘ ಬ್ಯಾಟಿಂಗ್ ತೋರಿರುವ ಅನಿಕೇತ್ ಅವರು ಐಪಿಎಲ್ವರೆಗೂ ಬಂದು ನಿಲ್ಲಲು ಕಾರಣವಾಗಿದೆ. 2024 ರಲ್ಲಿ ಅವರು ಭೋಪಾಲ್ ಲೆಪರ್ಡ್ಸ್ ತಂಡದ ಪರ 5 ಇನ್ನಿಂಗ್ಸ್ಗಳಲ್ಲಿ 205 ಸ್ಟ್ರೈಕ್ ರೇಟ್ನಲ್ಲಿ 244 ರನ್ ಗಳಿಸಿದ್ದರು. ಈ ಪ್ರದರ್ಶನ ಕಂಡ ಎಸ್ಆರ್ಎಚ್ ಅವರನ್ನು ಐಪಿಎಲ್ 2025 ರ ಹರಾಜಿನಲ್ಲಿ ₹30 ಲಕ್ಷಕ್ಕೆ ಖರೀದಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.