ಅಭಿಮಾನಿಯ ಮನಗೆದ್ದ ಅನಿಲ್ ಕುಂಬ್ಳೆ

7

ಅಭಿಮಾನಿಯ ಮನಗೆದ್ದ ಅನಿಲ್ ಕುಂಬ್ಳೆ

Published:
Updated:
Deccan Herald

ಬೆಂಗಳೂರು: ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಈಚೆಗೆ ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣ ಮಾಡುವಾಗ ನಡೆದ ಘಟನೆ ಇದು.

ಆ ವಿಮಾನದಲ್ಲಿದ್ದ ಸೊಹನಿ ಎಂಬುವವರು ಅನಿಲ್ ಅವರ ಬಳಿ ತೆರಳಿ ಮಾತನಾಡಲು ಬಯಸಿದ್ದರು. ಆದರೆ ಧೈರ್ಯ ಸಾಲದೆ  ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಕುಂಬ್ಳೆಯವರ ಕ್ರಿಕೆಟ್‌ ಜೀವನದ ಪ್ರಮುಖ ಸಾಧನೆಗಳು ಮತ್ತು ದೇಶಕ್ಕೆ ನೀಡಿದ ಕೊಡುಗೆಗೆ ಧನ್ಯವಾದಗಳು ಎಂದು ಬರೆದು ಟ್ಯಾಗ್ ಮಾಡಿದರು. ವಿಮಾನ ಟೇಕಾಫ್ ಆಗುವ ಮುಂಚೆ ಅನಿಲ್ ಅದನ್ನು ಓದಿ, ‘ಸಂಕೋಚ ಬೇಡ. ಬನ್ನಿ ಭೇಟಿಯಾಗಿ’ ಎಂದು ಪ್ರತಿಕ್ರಿಯಿಸಿದರು.

ಇದರಿಂದ ಸಂತಸಗೊಂಡ ಸೋಹನಿ ಅವರು ಕುಂಬ್ಳೆಯವರ ಬಳಿ ತೆರಳಿ ತಮ್ಮ ಬೋರ್ಡಿಂಗ್ ಪಾಸ್ ಮೇಲೆ ಹಸ್ತಾಕ್ಷರ ಪಡೆದರು. ಈ ಘಟನೆಯನ್ನು ಸೊಹನಿ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !