2026ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ನಡುವೆ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಿರುವ ಯುವತಿ ಯಾರು? ಎಂಬ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಅನುಷ್ಕಾ ಅವರ ಜೊತೆಗಿರುವ ಯುವತಿಯ ಫೋಟೊಗಳು ಹರಿದಾಡುತ್ತಿವೆ. ಈ ನಡುವೆ ಅನೇಕರು ಈ ಯುವತಿ ಯಾರು ಎಂಬುದನ್ನು ತಿಳಿದುಕೊಳ್ಳಲು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅಭಿಮಾನಿಗಳು ಗೂಗಲ್ ಹಾಗೂ ಎಐ ಮೊರೆ ಹೋಗಿದ್ದಾರೆ.

ಕೆಲವರು ಈ ಯುವತಿಯು ವಿರಾಟ್ ಕೊಹ್ಲಿ ಅವರ ಅತ್ತಿಗೆ ಎಂದರೆ, ಇನ್ನೂ ಕೆಲವರು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಸ್ರಾ ಎಂದು ಹೇಳುತ್ತಿದ್ದಾರೆ. ಆದರೆ ಈ ಎರಡೂ ಕಲ್ಪನೆಗಳು ಕೂಡ ತಪ್ಪು.

ಅಂದಹಾಗೆ, ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಆ ಸುಂದರ ಯುವತಿಯು ಅನುಷ್ಕಾ ಶರ್ಮಾ ಅವರ ಆಪ್ತ ಸ್ನೇಹಿತೆ ಮಾಳವಿಕಾ ನಾಯಕ್. ಅವರು ಅನುಷ್ಕಾ ಶರ್ಮಾ ಅವರ ಬಹುಕಾಲದ ಗೆಳತಿ. ಈಗ ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರವಾಸದ ಸಂದರ್ಭದಲ್ಲೂ ಅನುಷ್ಕಾ ಶರ್ಮಾ ಅವರೊಂದಿಗೆ ಮಾಳವಿಕಾ ಕಾಣಿಸಿಕೊಳ್ಳುತ್ತಾರೆ.

ಮಾಳವಿಕಾ ನಾಯಕ್

ವರದಿಗಳ ಪ್ರಕಾರ, ಮಾಳವಿಕಾ ಅವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಇವರು ಇನ್ನೋಜ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪತಿ ನಿಖಿಲ್ ಸೋಸಲೆ, ಡಿಯಾಜಿಯೊ ಇಂಡಿಯಾ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಬಿಡುವಿನ ಸಮಯದಲ್ಲಿ ವಿರಾಟ್, ಅನುಷ್ಕಾ ಹಾಗೂ ನಿಖಿಲ್ ಸೋಸಲೆ, ಮಾಳವಿಕಾ ನಾಯಕ್ ಅವರು ಒಟ್ಟಾಗಿ ಕಾಲಕಳೆಯುತ್ತಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.