ಭಾನುವಾರ, ನವೆಂಬರ್ 17, 2019
28 °C

ಎಪಿಎಲ್‌ ಕ್ರಿಕೆಟ್‌: ಆಟಗಾರರ ಹರಾಜು ಇಂದು

Published:
Updated:

ಹುಬ್ಬಳ್ಳಿ: ಬಂಟ್ಸ್‌ ಸಂಘ ಮುಂದಿನ ತಿಂಗಳು ಆಯೋಜಿಸಿರುವ ತಲಾ ಹತ್ತು ಓವರ್‌ಗಳ ಅಸ್ತ್ರ ಪ್ರೀಮಿಯರ್‌ ಲೀಗ್‌ (ಎಪಿಎಲ್‌) ಎರಡನೇ ಆವೃತ್ತಿಯ ಕ್ರಿಕೆಟ್‌ ಟೂರ್ನಿಗೆ ಆಟಗಾರರ ಆಯ್ಕೆ ಮಾಡಲು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಕರ್ನಾಟಕ ಜಿಮ್ಖಾನಾ ಸಂಸ್ಥೆಯಲ್ಲಿ ಹರಾಜು ನಡೆಯಲಿದೆ.

ಅ. 19 ಮತ್ತು 20ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಎಪಿಎಲ್‌ ನಡೆಯಲಿದ್ದು ಶೆಟ್ಟಿ ಎಂಪೈರ್‌, ಮೈಟ್‌ ರೈಡರ್ಸ್‌, ಉಡುಪಿ ಹಾಸ್ಟೆಟಲಿಟಿ ಸರ್ವಿಸ್‌, ಸುಗ್ಗಿ ಸೂಪರ್‌ ಸ್ಟಾರ್‌, ಎಸ್‌ಕೆಪಿ ಟೈಟನ್ಸ್‌, ಅಭಯ ಕ್ರಿಕೆಟ್‌ ಕ್ಲಬ್‌ ಮತ್ತು ದುಬೈನ ಪೊಳಲಿ ಟೈಗರ್ಸ್‌ ತಂಡಗಳು ಪೈಪೋಟಿ ನಡೆಸಲಿವೆ. ಚಾಂಪಿಯನ್‌ ತಂಡಕ್ಕೆ ₹2.5 ಲಕ್ಷ ಮತ್ತು ರನ್ನರ್ಸ್ ಅಪ್‌ ತಂಡಕ್ಕೆ ₹1.25ಲಕ್ಷ ಬಹುಮಾನವಿದೆ.

ಪಾಯಿಂಟ್ ಮಾದರಿಯಲ್ಲಿ ಹರಾಜು ನಡೆಯಲಿದ್ದು, ಪ್ರತಿ ಫ್ರಾಂಚೈಸ್‌ ಒಬ್ಬ ಆಟಗಾರನಿಗೆ ಕನಿಷ್ಠ 3,000 ಮತ್ತು ಗರಿಷ್ಠ 3 ಲಕ್ಷ ಪಾಯಿಂಟ್‌ಗಳನ್ನು ಖರ್ಚು ಮಾಡಬಹುದು. ಪ್ರತಿ ತಂಡದ ಖಾತೆಯಲ್ಲಿ 3 ಲಕ್ಷ ಪಾಯಿಂಟ್ಸ್‌ ಇರುತ್ತವೆ. ಒಂದು ತಂಡ 16ರಿಂದ 17 ಆಟಗಾರರನ್ನು ಖರೀದಿಸಬಹುದು. ಈಗಾಗಲೇ ಎಲ್ಲ ಏಳು ತಂಡಗಳು ತಲಾ ನಾಲ್ವರು ‘ಐಕಾನ್‌’ ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಉಳಿದ ಆಟಗಾರರನ್ನು ಬಿಡ್ಡಿಂಗ್‌ನಲ್ಲಿ ಖರೀದಿಸಲಿದ್ದಾರೆ. ಹರಾಜಿನಲ್ಲಿ ಒಟ್ಟು 160 ಆಟಗಾರರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿ ರವೀಂದ್ರ ಸಂಕೇಶ್ವರ, ಸ್ವರ್ಣ ಗ್ರೂಪ್‌ ಆಫ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್‌.ವಿ. ಪ್ರಸಾದ್‌, ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಕಾರ್ಯಕಾರಿಣಿ ಸದಸ್ಯ ಸುಧಾಕರ ಶೆಟ್ಟಿ ಭಾಗವಹಿಸಲಿದ್ದಾರೆ.

ಪ್ರತಿಕ್ರಿಯಿಸಿ (+)