ಗುರುವಾರ , ಸೆಪ್ಟೆಂಬರ್ 19, 2019
21 °C
ಮುಂಬೈ ಟ್ವೆಂಟಿ–20 ಲೀಗ್‌

ಅರ್ಜುನ್‌ ತೆಂಡೂಲ್ಕರ್‌ ಮಿಂಚು

Published:
Updated:
Prajavani

ಮುಂಬೈ (ಪಿಟಿಐ) : ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ಅವರು ಆಲ್‌ರೌಂಡ್‌ ಪ್ರದ ರ್ಶನದ ಮೂಲಕ ಗಮನಸೆಳೆದರು. ಮುಂಬೈ ಟ್ವೆಂಟಿ–20 ಲೀಗ್‌ನ ಉದ್ಘಾ ಟನಾ ಪಂದ್ಯದಲ್ಲಿ ಅರ್ಜುನ್‌ ಪ್ರತಿನಿಧಿಸಿದ್ದ ಆಕಾಶ್‌ ಟೈಗರ್ಸ್‌ ಮುಂಬೈ ವೆಸ್ಟ್‌ರ್ನ್‌ ಸಬರ್ಬ್‌ ತಂಡವು ಟ್ರಂಪ್‌ ನೈಟ್‌ ಮುಂಬೈ ನಾರ್ಥ್‌ ಈಸ್ಟ್‌ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿತು.

ಒಂದು ವಿಕೆಟ್‌ ಪಡೆದುದಲ್ಲದೆ 23 ರನ್‌ ಗಳಿಸಿ ಅರ್ಜುನ್‌ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಟ್ರಂಪ್‌ ನೈಟ್ಸ್‌ ತಂಡವನ್ನು ಆಕಾಶ್‌ ಟೈಗರ್ಸ್‌ ತಂಡ 147ಕ್ಕೆ ನಿಯಂತ್ರಿ ಸಿತು. ನೈಟ್ಸ್‌ ತಂಡದ ನಾಯಕ ಸೂರ್ಯ ಕುಮಾರ್‌ ಯಾದವ್‌ (ಅಜೇಯ 90, 56 ಎಸೆತ, ನಾಲ್ಕು ಬೌಂಡರಿ, ಏಳು ಸಿಕ್ಸರ್‌) ಶತಕವಂಚಿತರಾದರು.

ಆ ಬಳಿಕ ಬ್ಯಾಟಿಂಗ್‌ಗೆ ಇಳಿದ ಆಕಾಶ್‌ ಟೈಗರ್ಸ್‌ ತಂಡವು ಮೂರು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ತೋರಣ ಕಟ್ಟಿತು. ಅರ್ಜುನ್‌ 23 ರನ್‌ ಗಳಿಸಲು 19 ಎಸೆತಗಳನ್ನು ತೆಗೆದುಕೊಂಡರು.

ಸಂಕ್ಷಿಪ್ತ ಸ್ಕೋರ್‌: ಟ್ರಂಪ್‌ ನೈಟ್ಸ್: 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 147 (ಸೂರ್ಯಕುಮಾರ್‌ ಅಜೇಯ 90; ಎ.ಲಾಡ್‌ 12ಕ್ಕೆ 2).

ಆಕಾಶ್‌ ಟೈಗರ್ಸ್‌: 19.3 ಓವರ್‌ಗಳಲ್ಲಿ ಐದು ವಿಕೆಟ್‌ಗೆ 148 (ಆಕರ್ಷಿತ್‌ ಗೋಮೆಲ್‌ 41, ಕೌಸ್ತುಭ್‌ ಪವಾರ್‌ 34; ಕೆ.ಸಾವಂತ್‌ 30ಕ್ಕೆ 2).

Post Comments (+)