ಮುಲ್ಲನ್ಪುರ: ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ, ಎಡಗೈ ವೇಗಿ ಆರ್ಷದೀಪ್ ಸಿಂಗ್ ಬೇಡದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಗುಜರಾತ್ ತಂಡವನ್ನು ಪಂಜಾಬ್ ಬೌಲರ್ಗಳು ಕಾಡಿದರು. ಮಾರ್ಕೊ ಜಾನ್ಸನ್, ವಿಜಯಕುಮಾರ್ ವೈಶಾಕ್ ಹಾಗೂ ಯುಜ್ವೇಂದರ್ ಚಹಾಲ್ ಉತ್ತಮ ಬೌಲಿಂಗ್ ಮೂಲಕ ಗಮನಸೆಳೆದರು. ಆದರೆ, ಅರ್ಷದೀಪ್ ಸಿಂಗ್ ಬೇಡದ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.

ಪಂಜಾಬ್ ಕಿಂಗ್ಸ್ ಪರ 4 ಓವರ್ ಬೌಲಿಂಗ್ ಮಾಡಿದ ಅರ್ಷದೀಪ ಸಿಂಗ್ 42 ರನ್ ಬಿಟ್ಟುಕೊಟ್ಟರು. ಈ ವೇಳೆ ಪಂಜಾಬ್ ಪರ 20ನೇ ಓವರ್ ಬೌಲಿಂಗ್ ಮಾಡಲು ಬಂದ ಅರ್ಷದೀಪ ಸಿಂಗ್ ಕೊನೆಯ ಓವರ್ ಮುಗಿಸಲು ಬರೋಬ್ಬರಿ 11 ಎಸೆತಗಳನ್ನು ಹಾಕಿದರು. ಆ ಓವರ್ನಲ್ಲಿ ಅರ್ಷದೀಪ್ ಅವರು 4 ವೈಡ್ ಹಾಗೂ 1 ನೋ ಬಾಲ್ ಹಾಕಿದರು. ಆ ಮೂಲಕ ಐಪಿಎಲ್ನಲ್ಲಿ ಒಂದು ಓವರ್ ಪೂರ್ಣಗೊಳಿಸಲು ಅತ್ಯಧಿಕ ಎಸೆತಗಳನ್ನು ಹಾಕಿದ ಬೌಲರ್ ಎಂಬ ಬೇಡದ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.

ಒಂದು ಓವರ್ ಪೂರ್ಣಗೊಳಿಸಲು ಅತ್ಯಧಿಕ ಎಸೆತ ಹಾಕಿದ ಬೌಲರ್ಗಳು

ಮೊಹಮ್ಮದ್ ಸಿರಾಜ್ 11 ಎಸೆತ– 2023

ತುಷಾರ ದೇಶಪಾಂಡೆ 11 ಎಸೆತ– 2023

ಶಾರ್ದೂಲ್ ಠಾಕೂರ್ 11 ಎಸೆತ– 2025

ಸಂದೀಪ್ ಸಿಂಗ್ 11 ಎಸೆತ– 2025

ಹಾರ್ದಿಕ್ ಪಾಂಡ್ಯ 11 ಎಸೆತ–2025

ಅರ್ಷದೀಪ್ ಸಿಂಗ್ 11 ಎಸೆತ– 2026

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.