ಅಹಮದಾಬಾದ್: ಇಲ್ಲಿ ಭಾನುವಾರ (ಮಾರ್ಚ್ 8) ಮುಕ್ತಾಯಗೊಂಡ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ, ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರ ಮೇಲೆ ಆಕ್ರಮಣಕಾರಿಯಾಗಿ ಚೆಂಡನ್ನು ಎಸೆದ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 15ರಷ್ಟು ದಂಡ ವಿಧಿಸಿದೆ.

ಇದರ ಜೊತೆಗೆ, ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ, ಅವರ ವಿರುದ್ಧ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ. ಇದು ಕಳೆದ 24 ತಿಂಗಳ ಅವಧಿಯಲ್ಲಿ ಅವರ ಮೊದಲ ಅಪರಾಧವಾಗಿದೆ.

27 ವರ್ಷದ ಅರ್ಷದೀಪ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಆಟಗಾರರು ಮತ್ತು ಸಿಬ್ಬಂದಿಯ ನೀತಿ ಸಂಹಿತೆಯ ಆರ್ಟಿಕಲ್ 2.9 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.

‘ಇದು ಅಂತರರಾಷ್ಟ್ರೀಯ ಪಂದ್ಯದ ವೇಳೆ ಯಾವುದೇ ಆಟಗಾರನ ಮೇಲೆ ಅಥವಾ ಆಟಗಾರನನ್ನು ಗುರಿಯಾಗಿಸಿಕೊಂಡು, ಕ್ರಿಕೆಟ್ ಉಪಕರಣ ಅಥವಾ ಯಾವುದೇ ವಸ್ತುವಿನಿಂದ ಅಪಾಯಕಾರಿ ರೀತಿಯಲ್ಲಿ ಎಸೆಯುವುದಕ್ಕೆ ಸಂಬಂಧಿಸಿದೆ’ ಎಂದು ಐಸಿಸಿ ಮಾಧ್ಯಮ ಪ್ರಕಟಣೆ ಮಂಗಳವಾರ (ಮಾರ್ಚ್ 10) ತಿಳಿಸಿದೆ.

ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುತ್ತಿದ್ದ 11ನೇ ಓವರ್ನಲ್ಲಿ ಈ ಘಟನೆ ಸಂಭವಿಸಿದೆ. ಬೌಲಿಂಗ್ ಮಾಡುತ್ತಿದ್ದ ಅರ್ಷದೀಪ್ ಅವರು ಚೆಂಡನ್ನು ಹಿಡಿದು ನೇರವಾಗಿ ಡ್ಯಾರಿಲ್ ಮಿಚೆಲ್ ಅವರ ಕಡೆಗೆ ಎಸೆಯುತ್ತಾರೆ. ಬಾಲ್ ನೇರವಾಗಿ ಮಿಚೆಲ್ ಅವರ ಕೈಗೆ ಬಡಿಯುತ್ತದೆ.

ತಕ್ಷಣ ಮಿಚೆಲ್ ಕೂಡ ಆಕ್ರೋಶ ಹೊರಹಾಕುತ್ತಾರೆ. ಕೂಡಲೆ ಅಂಪೈರ್ ಹಾಗೂ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಅರ್ಷದೀಪ್ ಅವರು ತಮ ತಪ್ಪನ್ನು ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ನ ಮ್ಯಾಚ್ ರೆಫರಿ ಅಂಡಿ ಪೈಕ್ರಾಫ್ಟ್ ಅವರ ಬಳಿ ಒಪ್ಪಿಕೊಂಡಿರುವುದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಕಳೆದ 24 ತಿಂಗಳಲ್ಲಿ ಅರ್ಶದೀಪ್ ಅವರ ಮೊದಲ ಐಸಿಸಿ ನಿಯಮ ಉಲ್ಲಂಘನೆಯ ಪ್ರಕರಣವಾಗಿದ್ದು, ಇದರ ಅನ್ವಯ, ಅವರ ವಿರುದ್ಧ ಕನಿಷ್ಠ ಅಧಿಕೃತ ವಾಗ್ದಂಡನೆ, ಆಟಗಾರರ ಪಂದ್ಯ ಶುಲ್ಕದ ಗರಿಷ್ಠ ಶೇಕಡಾ 50ರಷ್ಟು ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.